Asianet Suvarna News Asianet Suvarna News

ಹೊಸಪೇಟೆ: ದೀಪಾವಳಿ ಹಬ್ಬದಂದೇ ಭರ್ಜರಿ ಕಾರ್ಯಾಚರಣೆ, 7 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಮೆಣಸಿನ ಗಿಡ ಹಾಗೂ ಹತ್ತಿಯ ಹೊಲದಲ್ಲಿ ಅಕ್ರಮವಾಗಿ ಬೆಳೆದ 31 ಗಾಂಜಾ ಗಿಡಗಳು| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದ ಘಟನೆ| ಸ್ಥಳದಿಂದ ಪರಾರಿಯಾದ ಆರೋಪಿಗಳು

7 lakh Worth of Marijuana Siezed in Hosapete in Ballari District grg
Author
Bengaluru, First Published Nov 15, 2020, 3:42 PM IST

ಬಳ್ಳಾರಿ(ನ.15): ದೀಪಾವಳಿ ಹಬ್ಬದಂದೇ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ 7 ಲಕ್ಷ 20 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಗುಂಡ್ಲಹಳ್ಳಿಯಿಂದದ ಬಸಾಪುರಕ್ಕೆ ಹೋಗುವ ಮಧ್ಯದಲ್ಲಿ ಇಂದು (ಭಾನುವಾರ) ನಡೆದಿದೆ. 

ಸರ್ವೆ ನಂಬರ್ 63 /2 ಸರ್ವೆ ನಂಬರ್ 63/3 ದೇವಣ್ಣ ಹಾಗೂ ಬಾಲಯ್ಯ ಇವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮೆಣಸಿನ ಗಿಡ ಹಾಗೂ ಹತ್ತಿಯ ಹೊಲದಲ್ಲಿ ಅಕ್ರಮವಾಗಿ 31 ಗಾಂಜಾ ಗಿಡಗಳನ್ನು ಬೆಳೆದಿದ್ದ ರೈತರು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬಳ್ಳಾರಿ: ಹೊಲದಲ್ಲಿ ಬೆಳೆದಿದ್ದ 1.75 ಲಕ್ಷ ರು. ಮೌಲ್ಯದ ಗಾಂಜಾ ವಶ

ದಾಳಿ ವೇಳೆ ಒಟ್ಟು 49 ಕೆಜಿ 240 ಗ್ರಾಂ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಲದ ಮಾಲೀಕರ  ವಿರುದ್ಧ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ದಾಳಿ ಮಾಡಿದ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.
 

Follow Us:
Download App:
  • android
  • ios