ಮೆಣಸಿನ ಗಿಡಗಳ ಜೊತೆಗೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ| ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದ ಘಟನೆ| ಆರೋಪಿಯನ್ನು ಬಂಧಿಸಿದ ಪೊಲೀಸರು| 

ಬಳ್ಳಾರಿ(ಅ.29): ಮೆಣಸಿನ ಗಿಡಗಳ ಜೊತೆಗೆ ಅಕ್ರಮವಾಗಿ ಬೆಳೆದಿದ್ದ 1.75 ಲಕ್ಷ ರು. ಮೌಲ್ಯದ 35 ಕೆಜಿ 200 ಗ್ರಾಂನ 13 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಿನ್ನೆ(ಬುಧವಾರ) ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂಬಂಧ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾರಾವಿ ಗ್ರಾಮದಲ್ಲಿ ಕರಿಲಿಂಗಪ್ಪ ಪಂಪಣ್ಣರವರು ಮೆಣಸಿನ ಗಿಡಗಳ ಜೊತೆಗೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಕಾರವಾರದ ಈ ದೇವರಿಗೆ ಗಾಂಜಾವೇ ನೈವೇದ್ಯ!

1.75 ಲಕ್ಷ ರು. ಮೌಲ್ಯದ 35 ಕೆಜಿ 200 ಗ್ರಾಂನ 13 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.