ದಾಬಸ್‌ಪೇಟೆ: ಟೆಲಿಗ್ರಾಂ ಮೆಸೇಜ್ ನಂಬಿ ಲಕ್ಷಾಂತರ ರೂ. ಕಳಕೊಂಡ..!
ಹೆಚ್ಚು ಗಳಿಸಲು ಸೆ.7ರ ವರೆಗೆ ತಮ್ಮ ವಿವಿಧ ಖಾತೆ ಹಾಗೂ ತಮ್ಮ ಪತ್ನಿ ಖಾತೆಯಿಂದ ಸುಮಾರು ಏಳು ಲಕ್ಷ ರು.ಗೂ ಹೆಚ್ಚು ಹಣವನ್ನು ಪೋನ್ ಪೇ, ಗೂಗಲ್ ಪೇ, ಯುಪಿಐ ಮುಖಾಂತರ ಹಾಕಿದ್ದಾರೆ. ಇಷ್ಟು ಹಣ ಹಾಕಿದರೂ ಲಾಭ ಬಾರದೇ ಇದ್ದುದ್ದನ್ನು ಕಂಡು ಮೋಸ ಹೋಗಿದ್ದೇನೆಂದು ತಿಳಿದು ಮೋಸ ಮಾಡಿದವರ ವಿರುದ್ಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾಬಸ್‌ಪೇಟೆ(ಅ.28): ವ್ಯಕ್ತಿಯೊಬ್ಬನಿಗೆ ತಮ್ಮ ಮೊಬೈಲ್ ಗೆ ಬಂದ ಟೆಲಿಗ್ರಾಂ ಮೆಸೇಜ್ ನಂಬಿ ಸುಮಾರು ಏಳು ಲಕ್ಷ ರು. ಕಳೆದುಕೊಂಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಂಪುರ ಹೋಬಳಿಯ ಕಲ್ಲನಾಯ್ಕನಹಳ್ಳಿ ಗ್ರಾಮದ ಯೋಗೇಶ್ ಎಂಬುವರು ಮೋಸ ಹೋಗಿರುವವರಾಗಿದ್ದು, ಇವರ ಮೊಬೈಲ್‌ಗೆ ಕಳೆದ ಆ.29 ರಂದು ಟೆಲಿಗ್ರಾಂ ಮೂಲಕ ಆನ್‌ಲೈನ್ ಪಾರ್ಟ್ ಟೈಂ ಜಾಬ್ ಅಂತ ಸಂದೇಶ ಬಂದಿದೆ. ಈ ಸಂದೇಶವನ್ನು ನೋಡಿ ಆಸಕ್ತಿ ವಹಿಸಿ ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದಾರೆ.
ಭಾರತೀಯ ಸೇನೆಗೆ ಸೇರಿಸುವುದಾಗಿ 150 ಯುವಕರಿಗೆ 1 ಕೋಟಿ ವಂಚಿಸಿದ ಶಿವರಾಜ್ ವಟಗಲ್
ನಂತರ ಗ್ರೂಪಿನಲ್ಲಿ ಏರ್‌ಲೈನ್ ವ್ಯಾಪಾರಿಗಳು ತಮ್ಮ ಏರ್‌ಲೈನ್ ಮತ್ತು ನೆಲದ ಸಾರಿಗೆ ಪ್ಯಾಕೇಜ್‌ಗಳನ್ನು ಆಕರ್ಷಣೆ ಮಾಡಲು ಸಹಾಯ ಮಾಡುವುದು ನಿಮ್ಮ ಕೆಲಸವಾಗಿದ್ದು ಅದಕ್ಕೆ ನೀವು ವರ್ಕಿಂಗ್ ಸ್ಲಾಟ್ ಫಾರ್ಮ್‌ನಲ್ಲಿ 27 ಏರ್ ಬುಕ್ಕಿಂಗ್‌ಗಳನ್ನು ಮಾಡಬೇಕು, ಪ್ರತಿ ಬುಕ್ಕಿಂಗ್‌ಗೂ ನೀವು ಲಾಭಗಳಿಸಬಹುದು. ಹಾಗಾಗಿ ನೀವು ಬುಕ್ಕಿಂಗ್‌ನೊಂದಿಗೆ ದೃಢೀಕರಿಸಬೇಕು. ತಾವು ಅಕೌಂಟ್ ತೆರೆಯಬೇಕು ಎಂದು ಗ್ರೂಪ್‌ನಲ್ಲಿ ಸಂದೇಶ ಬಂದಿದ್ದು, ಇದನ್ನು ನಂಬಿದ ಇವರು ಸ್ಕೈ ಸ್ಯಾನರ್ ಎಂಬ ವೆಬ್‌ಸೈಟ್‌ಗೆ ಇನ್ವೀಟೇಷನ್ ಕೋಡ್ ಹಾಗೂ ಮೊಬೈಲ್ ನಂಬರ್ ಹಾಕಿ ಲಾಗಿನ್ ಆಗಿದ್ದಾರೆ.
ಲಾಗಿನ್ ಆದ ನಂತರ ಹತ್ತು ಸಾವಿರ ರು. ಜಮೆ ಮಾಡುವಂತೆ ತಿಳಿಸಲಾಗಿದೆ. ಇವರು ಜಮೆ ಮಾಡಿದ್ದಾರೆ. ಇವರು 27 ಏರ್ ಬುಕ್ಕಿಂಗ್ ಟಾಸ್ಕ್ ಪೂರ್ಣಗೊಳಿಸಿದ ನಂತರ ಇವರಿಗೆ ಲಾಭವಾಗಿ 16000 ರು. ಇವರ ಖಾತೆಗೆ ಜಮೆ ಆಗುತ್ತದೆ.