Asianet Suvarna News Asianet Suvarna News

ಭಾರತೀಯ ಸೇನೆಗೆ ಸೇರಿಸುವುದಾಗಿ 150 ಯುವಕರಿಗೆ 1 ಕೋಟಿ ವಂಚಿಸಿದ ಶಿವರಾಜ್‌ ವಟಗಲ್

ಭಾರತೀಯ ಸೇನೆಗೆ ಸೇರಿಸುವುದಾಗಿ ಆರೋಪಿ ಶಿವರಾಜ್‌ ವಟಗಲ್ 150 ಯುವಕರಿಂದ 1 ಕೋಟಿ ರೂ. ಹಣವನ್ನು ಪಡೆದು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. 

Fraudster Shivraj Watgal cheated 150 youths of 1 crore to join the Indian Army sat
Author
First Published Oct 23, 2023, 6:40 PM IST

ಬೆಂಗಳೂರು (ಅ.23): ದೇಶದಲ್ಲಿ ಭಾರತೀಯ ಸೇನೆಗೆ ಅತ್ಯಂತ ಗೌರವ ಕೊಡಲಾಗುತ್ತದೆ. ಇನ್ನು ಸೈನಿಕರೆಂದರೆ ದೇವರಿಗೆ ಸಮಾನವೆಂಬ ಭಾವನೆಯೂ ಕೂಡ ಬರುತ್ತದೆ. ಹೀಗಾಗಿ, ಭಾರತಾಂಬೆಯ ರಕ್ಷಣೆಗಾಗಿ ಸೇನೆ ಸೇರಬೇಕೆಂಬುದು ಕೋಟ್ಯಂತರ ಯುವಕರ ಹೆಬ್ಬಯಕೆಯೂ ಆಗಿರುತ್ತದೆ. ಅದನ್ನೇ ಬಂಡವಾಳ ಮಾಡಿಕೊಂಡ ಶಿವರಾಜ್‌ ವಟಗಲ್‌ ಎಂಬ ವ್ಯಕ್ತಿ 150 ಯುವಕರನ್ನು ಸೇನೆಗೆ ಸೇರಿಸುವುದಾಗಿ ಹೇಳಿ 1 ಕೋಟಿ ರೂ.ಗೂ ಅಧಿಕ ಹಣವನ್ನು ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ದೇಶದಲ್ಲಿ ಭಾರತೀಯ ಸೇನೆ ಸೇರಬೇಕು, ಗಡಿಯಲ್ಲಿ ಎದುರಾಳಿಗಳ ವಿರುದ್ಧ ಹೋರಾಡಿ ಭಾರತಾಂಬೆಯನ್ನು ರಕ್ಷಣೆ ಮಾಡಬೇಕು ಎಂಬ ಯುವಕರ ಮಹದಾಸೆಯನ್ನು ಬಂಡವಾಳ ಮಾಡಿಕೊಂಡ ಕಿರಾತಕರು ನಿಮ್ಮನ್ನು ನೇರವಾಗಿ ಸೇನೆಗೆ ಸೇರಿಸುತ್ತೇವೆ, ಅಗತ್ಯ ತರಬೇತಿ ಕೊಡುತ್ತೇವೆ ಎಂದು ಹೇಳಿಕೊಂಡು ಲಕ್ಷಾಂತರ ರೂ. ಹಣವನ್ನು ಪಡೆದು ವಂಚನೆ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ನಗರ ಪೊಲೀಸ್ ಹಾಗೂ ಮಿಲಿಟರಿ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ವಂಚನೆಯನ್ನು ಬಯಲಿಗೆಳೆಯಲಾಗಿದೆ.

ದಸರಾ ಹಬ್ಬದಲ್ಲಿ ರಾಣಿಯಂತೆ ಕಂಗೊಳಿಸಿದ ಪ್ರಿಯಾ ವಾರಿಯರ್‌: ಜೂಮ್‌ ಮಾಡಿ ನೋಡಿ ಏನೋ ಕಾಣುತ್ತೆಂದ ಫ್ಯಾನ್ಸ್!

ಪೊಲೀಸ್‌ ಹಾಗೂ ಮಿಲಿಟರಿ ಪಡೆದು ಜಂಟಿ ಕಾರ್ಯಾಚರಣೆ ಮೂಲಕ ನಕಲಿ ಸೇನಾ ನೇಮಕಾತಿ ಹಗರಣವನ್ನು ಬಯಲಿಗೆಳೆಯಲಾಗಿದೆ. ಸೇನೆಗ ಸೇರಿಸುವ ನೆಪದಲ್ಲಿ150 ಯುವಕರಿಗೆ ವಂಚನೆ ಮಾಡಲಾಗಿದೆ. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಯುವಕರಿಗೆ ವಂಚನೆ ಮಾಡಲಾಗಿದೆ. ಇನ್ನು ವಂಚಕರು ಪೊಲೀಸರಿಂದ ತಪ್ಪಸಿಕೊಂಡು ಓಡಾಡುತ್ತಿದ್ದು, ಇಂದು ಮಧ್ಯಾಹ್ನ ಚಿತ್ರದುರ್ಗದಲ್ಲಿ ಬಂಧನ ಮಾಡಲಾಗಿದೆ.

ಭಾರತೀಯ ಮಿಲಿಟರಿ ಗುಪ್ತಚರ ವಿಭಾಗ ಮತ್ತು ಬೆಂಗಳೂರು ಮತ್ತು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ ಪೊಲೀಸ್ ತಂಡವು ಜಂಟಿ ಕಾರ್ಯಾಚರಣೆ ಮಾಡಿವೆ. 150 ಯುವಕರಿಗೆ ನೇಮಕಾತಿ ನೆಪದಲ್ಲಿ 1 ಕೋಟಿ ರೂ ಪಂಗನಾಮ ಹಾಕಲಾಗಿದೆ. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಕರ್ನಾಟಕದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಉದ್ಯೋಗವನ್ನು ಒದಗಿಸುವುದು ಮೋಸ ಮಾಡಲಾಗಿದೆ. ವಂಚನೆ ಮಾಡಿದ ಪ್ರಮುಖ ಆರೋಪಿ ದಾವಣಗೆರೆ ಜಿಲ್ಲೆಯ ಶಿವರಾಜ್ ವಟಗಲ್ (40 ವರ್ಷ) ಆಗಿದ್ದು, ಈತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಾಡಹಗಲೇ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಆಪ್ತನನ್ನು ಅಟ್ಟಾಡಿಸಿ ಕೊಲೆಗೈದ ದುಷ್ಕರ್ಮಿಗಳು

ಶಿವರಾಜ್‌ ವಟಗಲ್‌ ಈ ಹಿಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಲಾಗದೇ ಅರ್ಧಕ್ಕೆ ಬಿಟ್ಟು ಸೇನೆಯಿಂದ ಓಡಿ ಹೋಗಿದ್ದ ವ್ಯಕ್ತಿಯಾಗಿದ್ದಾನೆ. ಇದಾದ ನಂತರ, ತಾನು ಮಾಜಿ ಸೈನಿಕನಾಗಿದ್ದು, ಮಿಲಿಟರಿ ಪಡೆಯ ನೇಮಕಾತಿ ಮುಖ್ಯಸ್ಥರ ಪರಿಚಯವಿದೆ ಎಂದು ಹೇಳಿಕೊಂಡು ಯುವಕರಿಗೆ ವಂಚನೆ ಮಾಡಲು ಆರಂಭಿಸಿದ್ದಾನೆ. ಸೇನೆ ಸೇರುವ ಯುವಕರನ್ನ ಟಾರ್ಗೆಟ್ ಮಾಡಿ ಹಣ ಸಂಪಾದನೆ ಮಾಡಲು ಮುಂದಾಗಿದ್ದಾನೆ. ಈ ಕುಕೃತ್ಯಕ್ಕೆ ಆತನ ಹೆಂಡತಿ ಭೀಮವ್ವ ಕೂಡಾ ಸಾಥ್ ನೀಡಿದ್ದಾಳೆ. ಸದ್ಯ ಇಬ್ಬರನ್ನೂ ಬಂಧಿಸಿದ ಪೊಲೀಸರು ಯುವಕರಿಗೆ ಸಂಬಂಧಪಟ್ಟ ಹಲವು ಮೂಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Follow Us:
Download App:
  • android
  • ios