Asianet Suvarna News Asianet Suvarna News

ಚಿಂತಾಮಣಿ; ಲಾರಿ-ಜೀಪು ಮುಖಾಮುಖಿ ಡಿಕ್ಕಿ.. 7 ಮಂದಿ ದುರ್ಮರಣ

* ಲಾರಿ- ಜೀಪು‌ ನಡುವೆ ಮುಖಾ ಮುಖಿ ಡಿಕ್ಕಿ

* ಸ್ಥಳದಲ್ಲೆ 6 ಮಂದಿ‌ ಸಾವು ಹಲವರ ಸ್ಥಿತಿ ಗಂಭೀರ

* ಚಿಂತಾಮಣಿ ತಾಲೂಕು ಮರಿನಾಯಕನಹಳ್ಳಿ ಗ್ರಾಮದ ಬಳಿ ಅಪಘಾತ

* ಜೀಪಿನಲ್ಲಿದ್ದ 7 ಮಂದಿ‌ ಸಾವು, 7 ಜನರ ಸ್ಥಿತಿ ಗಂಭೀರ

* ಗಾಯಾಳುಗಳು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಗೆ ದಾಖಲು 

7 dead in road accident in Karnataka s Chintamani Chikkaballapur mah
Author
Bengaluru, First Published Sep 12, 2021, 6:19 PM IST
  • Facebook
  • Twitter
  • Whatsapp

ಕೋಲಾರ/ ಚಿಕ್ಕಬಳ್ಳಾಪುರ(ಸೆ. 12) ಲಾರಿ- ಜೀಪು‌ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು  ಸ್ಥಳದಲ್ಲೆ 7 ಮಂದಿ‌ ಸಾವನ್ನಪ್ಪಿದ್ದಾರೆ.  ಹಲವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  ಚಿಂತಾಮಣಿ ತಾಲೂಕು ಮರಿನಾಯಕನಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತವಾಗಿದೆ. 7 ಜನರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಚಿಂತಾಮಣಿ- ಮದನಪಲ್ಲಿ ರಸ್ತೆಯಲ್ಲಿ  ಭೀಕರ ಅಪಘಾತವಾಗಿದೆ. ಸ್ಥಳಕ್ಕೆ ಚಿಂತಾಮಣಿ ಪೊಲೀಸರು ‌ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. 

ಕೋರಮಂಗಲ ಆಡಿ ಭೀಕರ ಅಪಘಾಥಕ್ಕೆ ಏನು ಕಾರಣ?

ಅಪಘಾತ ಸ್ಥಳದಲ್ಲಿಯೇ ಇದ್ದ ಮಾಲೂರು ಶಾಸಕ ‌ನಂಜೇಗೌಡ ಗಾಯಾಳುಗಳ ನೆರವಿಗೆ ಬಂದಿದ್ದಾರೆ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.  ಆಂಬ್ಯುಲನ್ಸ್, ಪೊಲೀಸರಿಗೆ ಕರೆ ಮಾಡಿದ ಶಾಸಕರು ತಕ್ಷಣದ ಪರಿಹಾರ ಕ್ರಮ ತೆಗೆದುಕೊಂಡಿದ್ದಾರೆ. 

ಮೃತರೆಲ್ಲರೂ ಕೋಲಾರ ಜಿಲ್ಲೆ ‌ಶ್ರೀನಿವಾಸಪುರ ತಾಲೂಕಿಗೆ ಸೇರಿದವರು. ಘಟನಾ ಸ್ಥಳಕ್ಕೆ ಶಾಸಕ ಜೆ. ಕೆ. ಕೃಷ್ಣಾ ರೆಡ್ಡಿ ಭೇಟಿ‌ ನೀಡಿದ್ದಾರೆ. ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಸಹ ಭೇಟಿ ನೀಡಿದ್ದು ತಕ್ಷಣದ ಪರಿಹಾರ ಕ್ರಮ ತಿಳಿಸಿದ್ದಾರೆ.

 

 

Follow Us:
Download App:
  • android
  • ios