ಚೆನ್ನೈ(ಅ. 13) ಥೇವಾರ್ ಸಮುದಾಯಕ್ಕೆ ಸೇರಿದ ಏಳು ಜನರನ್ನು ತಮಿಳುನಾಡು ತೂತುಕುಡಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ಪಾದದ ಮೇಲೆ ಬಿದ್ದು ದಲಿತನೊಬ್ಬನಿಂದ ಕ್ಷಮೆ ಕೇಳಿಸಿಕೊಂಡಿದ್ದ ಆರೋಪ ಇವರ ಮೇಲೆ ಇದೆ. ಅಕ್ಟೋಬ್  8  ರಂದು ನಡೆದ ಘಟನೆ  ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ನಂತರ ಬೆಳಕಿಗೆ ಬಂದಿದೆ.

ಎಂಪಿ ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮುಖ್ಯಸ್ಥ ಥೋಲ್ ತಿರುಮಾವಾಲವನ್ ಈ ಅಮಾನವೀಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.  ವಿಡಿಯೋ ವೈರಲ್ ಆದ ನಂತರ, ತೂತುಕುಡಿ ಜಿಲ್ಲೆಯ ಕಾಯತಾರ್ ತಾಲ್ಲೂಕಿನ ಹಳ್ಳಿಯ  60 ವರ್ಷದ ಪೌಲ್ರಾಜ್ ದೌರ್ಜನ್ಯಕ್ಕೆ ಗುರಿಯಾದ ವ್ಯಕ್ತಿ ಎಂದು ಪತ್ತೆ ಮಾಡಲಾಗಿದೆ. 

ಪೊಲೀಸ್ ದೂರು ನೀಡಿದ್ದಕ್ಕೆ ಹಲ್ಲೆ ಮಾಡಿ ಮೂತ್ರ ಕುಡಿಸಲು ಮುಂದಾದ್ರು!

ಜೀವನೋಪಾಯಕ್ಕೆ ಪೌಲ್ರಾಜ್  100 ಆಡು ಮತ್ತು ಕುರಿಗಳನ್ನು ಸಾಕಿಕೊಂಡಿದ್ದಾರೆ.  ಘಟನೆ ನಡೆದ ದಿನ ಸಾಕಿಕೊಂಡಿದ್ದ ಕುರಿಯೊಂದು ಸಂಗ್ಲಿ ಥೆವಾರ್ ಎಂಬುವರ ಹೊಲಕ್ಕೆ ನುಗ್ಗಿತ್ತು.  ಇದನ್ನು ಕಂಡು ಕೋಪಗೊಂಡ ಸಂಗ್ಲಿ ಜಾತಿ ನಿಂದನೆ ಮಾಡಿದ್ದು ಅಲ್ಲದೆ ತನ್ನ ಸಂಬಂಧಿಕರನ್ನು ಸ್ಥಳಕ್ಕೆ ಕರೆತಂದಿದ್ದಾನೆ. ಮಹೇಂದ್ರಮ್, ಮಹಾರಾಜನ್, ಉದಯಮಲ್ ಮತ್ತು ವೀರಯ್ಯ ಎಂಬುವರನ್ನು ಸ್ಥಳಕ್ಕೆ ಕರೆತಂದಿದ್ದು ಕಾಲಿಗೆ ಬಿದ್ದು ಕ್ಷಮೆ ಕೇಳಲು ಹೇಳಿದ್ದಾನೆ. ಈ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ಹರಿದಾಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.