ಲಕ್ನೋ(ಅ. 13)   ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದುಹೋಗಿದೆ. ಪೊಲೀಸ್ ದೂರು ನೀಡಿದ ಎಂಬ ಕಾರಣಕ್ಕೆ ದಲಿತರೊಬ್ಬರ  ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಮೂತ್ರ ಕುಡಿಸಲಾಗಿದೆ.

ಉತ್ತರ ಪ್ರದೇಶದ ಲಲಿತಪುರದ ರೋಡಾ ಗ್ರಾಮದಲ್ಲಿ 65 ವರ್ಷದ ದಲಿತ ವ್ಯಕ್ತಿಯೊಬ್ಬರ ಮೇಲೆ ದೌರ್ಜನ್ಯ ನಡೆದಿರುವುದು ವರದಿಯಾಗಿದೆ.

ಆರೋಪಿ ಸೋನು ಯಾದವ್ ಕೆಲವು ದಿನಗಳ ಹಿಂದೆ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಮಗನ ಮೇಲೆ ಹಲ್ಲೆ ಕೊಡಲಿಯಿಂದ  ಹಲ್ಲೆ ಮಾಡಿದ್ದ. ಇದಾದ ಮೇಲೆ ತಂದೆ ಮಗ ಪೊಲೀಸರಿಗೆ ದೂರು ನೀಡಿದ್ದರು.  ಆದರೆ ಸೋನು ಯಾದವ್ ದೂರು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಬೆದರಿಕೆ ಹಾಕಿದ್ದ.

ಪೈಶಾಚಿಕ ಕೃತ್ಯ; ಅಪ್ರಾಪ್ತೆ ಮೇಲೆ ಆಸಿಡ್ ಎರಚಿದ್ರು

ಇದ್ದಕ್ಕಿದಂತೆ ತಂದೆ ಅಮರ್ ಮೇಲೆ  ಮಂಗಳವಾರ ದಾಳಿ ಮಾಡಿದ ಯಾದವ್ ಕೋಲಿನಿಂದ ಹೊಡೆದಿದ್ದು ಅಲ್ಲದೆ ಮೂತ್ರ ಕುಡಿಸಲು ಮುಂದಾಗಿದ್ದಾನೆ. ಸಂತ್ರಸ್ತ ವ್ಯಕ್ತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಲಲಿತಪುರ ಎಸ್ ಪಿ ಮಿರ್ಜಾ ಮಂಜಾರ್ ಬೇಗ್ ಅವರು ಎಫ್ಐಆರ್ ದಾಖಲಿಸಲಾಗಿದ್ದು, ಯಾದವ್ ಹುಡುಕಾಟ ನಡೆಯುತ್ತಿದೆ. ಇದೆ ಪ್ರಕರಣಕ್ಕೆ ಸಂಬಂಧಿಸಿ ಊರಿನ ಇಬ್ಬರು ಪ್ರಭಾವಿಗಳನ್ನು ಬಂಧಿಸಲಾಗಿದೆ.