ಮೈಸೂರು: ರೌಡಿಶೀಟರ್ ಚಂದ್ರು ಕೊಲೆ, 7 ಮಂದಿ ಬಂಧನ
ಪಡುವಾರಹಳ್ಳಿ, ಕುವೆಂಪುನಗರ ಹಾಗೂ ಕೆ.ಜಿ. ಕೊಪ್ಪಲು ನಿವಾಸಿಗಳಾದ ಯಶವಂತ, ಪ್ರಶಾಂತ, ಅರವಿಂದ ಸಾಗರ್, ರಾಘವೇಂದ್ರ, ಸುದೀಪ್, ಮಹೇಶ್ ಮತ್ತು ಪ್ರೀತಮ್ ಎಂಬವರೇ ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೈಸೂರು(ಮೇ.21): ಹಳೆ ದ್ವೇಷ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಒಂಟಿಕೊಪ್ಪಲಿನ ರೌಡಿಶೀಟರ್ ಚಂದ್ರು ಕೊಲೆ ಪ್ರಕರಣ ಸಂಬಂಧ ಪೊಲೀಸರು 7 ಮಂದಿ ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ. ನಗರದ ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯಲ್ಲಿರುವ ಟೈಲರ್ ಶಾಪ್ ಬಳಿ ಕುಳಿತಿದ್ದ ರೌಡಿಶೀಟರ್ ಚಂದ್ರು(47) ಎಂಬಾತನನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುರುವಾರ ಸಂಜೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ರಚಿಸಲಾಗಿದ್ದ ವಿಶೇಷ ತಂಡಗಳ ಪೊಲೀಸರು ಇಲವಾಲದ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪಡುವಾರಹಳ್ಳಿ, ಕುವೆಂಪುನಗರ ಹಾಗೂ ಕೆ.ಜಿ. ಕೊಪ್ಪಲು ನಿವಾಸಿಗಳಾದ ಯಶವಂತ, ಪ್ರಶಾಂತ, ಅರವಿಂದ ಸಾಗರ್, ರಾಘವೇಂದ್ರ, ಸುದೀಪ್, ಮಹೇಶ್ ಮತ್ತು ಪ್ರೀತಮ್ ಎಂಬವರೇ ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Mysuru: ಜೈಲಿನಿಂದ ಬಂದಿದ್ದ ರೌಡಿಶೀಟರ್ ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿ
ಈ ಪ್ರಕರಣದಲ್ಲಿ ವರುಣ್, ಅನಿಲ್, ಸಚಿನ್ ಮತ್ತು ದರ್ಶನ್ ಎಂಬವರು ತಲೆಮರೆಸಿಕೊಂಡಿದ್ದು, ಇವರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಕೊಲೆಯಾದ ರೌಡಿಶೀಟರ್ ಚಂದು, ಹುಣಸೂರು ಜೋಡಿ ಕೊಲೆ ಪ್ರಕರಣ ಮತ್ತು ಪಡುವಾರಹಳ್ಳಿ ದೇವು ಕೊಲೆ ಪ್ರಕರಣದಲ್ಲಿ ಆರೋಪಿ. ದೇವು ಹತ್ಯೆಗೆ ಪ್ರತೀಕಾರವಾಗಿ ಚಂದುವನ್ನು ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಂ. ಮುತ್ತುರಾಜು, ಎಸ್. ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ನರಸಿಂಹರಾಜ ವಿಭಾಗದ ಎಸಿಪಿ ಅಶ್ವತ್ಥನಾರಾಯಣ್, ದೇವರಾಜ ವಿಭಾಗ ಎಸಿಪಿ ಶಾಂತಮಲ್ಲಪ್ಪ, ಸಿಸಿಬಿ ಘಟಕದ ಎಸಿಪಿ ಸಂದೇಶ್ ಕುಮಾರ್, ಮಂಡಿ ಠಾಣೆಯ ಇನ್ಸ್‌ಪೆಕ್ಟರ್ ಯೋಗೇಶ್, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.