Asianet Suvarna News Asianet Suvarna News

ಸೊಸೆ ಟೀ ಕೊಡ್ಲಿಲ್ಲ ಅಂತ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಮಾವ!

ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಸೊಸೆ ಟೀ ಕೊಡಲು ವಿಳಂಬ ಮಾಡಿದ್ಳು ಅಂತ ಜಗಳವಾಡಿದ ಮಾವ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದಾರೆ. 

65 year old uttar pradesh man sets self on fire over delay in serving tea ash
Author
First Published Oct 29, 2023, 4:45 PM IST

ಲಖನೌ (ಅಕ್ಟೋಬರ್ 29, 2023): ಇತ್ತೀಚೆಗೆ ಸಣ್ಣ ಪುಟ್ಟ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವುದು, ಕೊಲೆ ಮಾಡುವುದು - ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇದೇ ರೀತಿ, ಈಗ ಸೊಸೆ ಹೇಳಿದ ತಕ್ಷಣ ಟೀ ಕೊಡ್ಲಿಲ್ಲ ಅಂತ ಮಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಅದೂ, ಉತ್ತರ ಪ್ರದೇಶದಲ್ಲಿ.

ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಸೊಸೆ ಟೀ ಕೊಡಲು ವಿಳಂಬ ಮಾಡಿದ್ಳು ಅಂತ ಜಗಳವಾಡಿದ ಮಾವ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದಾರೆ. 

ಇದನ್ನು ಓದಿ: ಕೇರಳದಲ್ಲಿ ಹಮಾಸ್‌ ಉಗ್ರ ಭಾಷಣ ಬೆನ್ನಲ್ಲೇ ತ್ರಿವಳಿ ಬಾಂಬ್‌ ಸ್ಪೋಟ: ಮಹಿಳೆ ಬಲಿ, 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಅವಧ್ ಕಿಶೋರ್ ತನ್ನ ಮಗಳು ಮತ್ತು ಸೊಸೆಗೆ ಟೀ ಕೊಡಲು ಕೇಳಿದ್ದಾರೆ. ಅಲ್ಲದೆ, ಬೇಗ ಟೀ ಕೊಡಲಿಲ್ಲ ಅಂತ ಜಗಳವಾಡಿದ್ದಾರೆ ಎಂದೂ ತಿಳಿದುಬಂದಿದೆ. ಈ ವ್ಯಕ್ತಿ ಕೆಲವು ಸಮಯದಿಂದ ಕೌಟುಂಬಿಕ ಕಲಹಗಳಿಂದಾಗಿ ಒತ್ತಡದಲ್ಲಿ ಸಿಲುಕಿದ್ದರು ಎಂದೂ ಅವರ ಕುಟುಂಬ ತಿಳಿಸಿದೆ. 

ಅವಧ್‌ ಕಿಶೋರ್‌ ಅವರ ಹೆಂಡತಿ ತನ್ನ ಹೆತ್ತವರ ಸ್ಥಳದಲ್ಲಿ ವಾಸ ಮಾಡ್ತಿದ್ದರು. ಆದರೆ, ಆತನ ವಿವಾಹಿತ ಮಗಳು ತನ್ನ ತಂದೆ ಜತೆಗೆ ಇದ್ದರು ಎಂದೂ ವರದಿಯಾಗಿದೆ. ಗುರುವಾರ ಅವಧ್ ಕಿಶೋರ್‌ ತನ್ನ ಮಗಳು ಮತ್ತು ಸೊಸೆಗೆ ಟೀ ಕೇಳಿದ್ದಾರೆ. ತಡವಾದಾಗ ಗಲಾಟೆ ಮಾಡಿದ್ದು, ಬಳಿಕ ಮೂವರ ನಡುವೆಯೂ ವಾಗ್ವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಮತ್ತೆ ಜೈಲು ಶಿಕ್ಷೆ? ಸಲಿಂಗ ರೇಪ್‌ಗೂ ಶಿಕ್ಷೆ ತಪ್ಪಲ್ಲ!

ಕೌಟುಂಬಿಕ ಒತ್ತಡದಿಂದ ಬಳಲುತ್ತಿದ್ದ ಅವಧ್‌ ಕಿಶೋರ್‌ ಮತ್ತಷ್ಟು ಬೇಸರಗೊಂಡು ಬಳಿಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೂ, ಈ ಘಟನೆ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದೂ ವರದಿಯಾಗಿದೆ. 

ಇದನ್ನೂ ಓದಿ: ಧೋನಿ ಹೆಸರೇಳಿ ಮಹಿಳೆಗೆ ವಂಚಿಸಿ, ಮಗು ಅಪಹರಿಸಿದ ಬೈಕ್ ಸವಾರರು!

ಇದನ್ನು ಓದಿ: ದೆಹಲಿಯಲ್ಲಿ ಸ್ವಿಜರ್ಲೆಂಡ್‌ ಮಹಿಳೆ ಹತ್ಯೆ: ಕೈಕಾಲು ಕಟ್ಟಿ, ಪ್ಲಾಸ್ಟಿಕ್‌ ಕವರ್‌ನಲ್ಲಿ ಡೆಡ್‌ಬಾಡಿ ಸುತ್ತಿದ ಪಾಗಲ್‌ ಪ್ರೇಮಿ!

Follow Us:
Download App:
  • android
  • ios