Asianet Suvarna News Asianet Suvarna News

ಧೋನಿ ಹೆಸರೇಳಿ ಮಹಿಳೆಗೆ ವಂಚಿಸಿ, ಮಗು ಅಪಹರಿಸಿದ ಬೈಕ್ ಸವಾರರು!

ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ಹಂಚುತ್ತಿದ್ದಾರೆ ಎಂದು ಅಪಹರಣಕಾರರು ಮಗುವಿನ ತಾಯಿಯನ್ನು ನಂಬಿಸಿ, ತಮ್ಮ ಬಲೆಗೆ ಬೀಳಿಸಿಕೊಂಡು ಮಗು ಅಪಹರಿಸಿದ್ದಾರೆ ಎಂದು ಮಹಿಳೆ ದೂರು ನೀಡಿರುವ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

dhoni distributing money bikers trick woman kidnap her child in ranchi ash
Author
First Published Oct 27, 2023, 3:46 PM IST

ರಾಂಚಿ (ಅಕ್ಟೋಬರ್ 27, 2023): ಭಾರತದ ಮಾಜಿ ಕ್ರಿಕೆಟಿಗ ಹಾಗೂ ಐಪಿಎಲ್‌ನ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಬಳಸಿಕೊಂಡು ಮಗುವೊಂದನ್ನು ಅಪಹರಣ ಮಾಡಿ ಆ ಮಗುವಿನ ತಾಯಿಯನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಧೋನಿ ತವರು ಜಿಲ್ಲೆ ಜಾರ್ಖಂಡ್‌ನ ರಾಜಧಾನಿಯಲ್ಲೇ ಈ ಆಘಾತಕಾರಿ ಘಟನೆ ನಡೆದಿದೆ.

ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ಹಂಚುತ್ತಿದ್ದಾರೆ ಎಂದು ಅಪಹರಣಕಾರರು ಮಗುವಿನ ತಾಯಿಯನ್ನು ನಂಬಿಸಿ, ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ ಎಂದು ಮಹಿಳೆ ದೂರು ನೀಡಿರುವ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಹಿಂದೆ ಮಧುದೇವಿ ತನ್ನ ಇಬ್ಬರು ಮಕ್ಕಳೊಂದಿಗೆ ರಾಂಚಿಯ ಸ್ಟಾಲ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಇದನ್ನು ಓದಿ: ದೆಹಲಿಯಲ್ಲಿ ಸ್ವಿಜರ್ಲೆಂಡ್‌ ಮಹಿಳೆ ಹತ್ಯೆ: ಕೈಕಾಲು ಕಟ್ಟಿ, ಪ್ಲಾಸ್ಟಿಕ್‌ ಕವರ್‌ನಲ್ಲಿ ಡೆಡ್‌ಬಾಡಿ ಸುತ್ತಿದ ಪಾಗಲ್‌ ಪ್ರೇಮಿ!

ಧೋನಿ ಬಡ ಜನರಿಗೆ ಹಣ ನೀಡುತ್ತಿದ್ದಾರೆ ಎಂದು ಹೇಳಿಕೊಂಡು ಬೈಕ್‌ವೊಂದರಲ್ಲಿ ಬಂದ ಪುರುಷ ಮತ್ತು ಮಹಿಳೆ ಆಕೆಯ ಬಳಿಗೆ ಬಂದರು. ಅದನ್ನು ನಂಬಿದ ಮಹಿಳೆ, ಎಲ್ಲಿ ಈ ಹಣ ವಿತರಣೆ ನಡೆಯುತ್ತಿದೆಯೋ ಅಲ್ಲಿಗೆ ಕರೆದುಕೊಂಡು ಹೋಗಬಹುದೇ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿದ ದ್ವಿಚಕ್ರ ವಾಹನ ಸವಾರರು ಮಧು ಮತ್ತು ಆಕೆಯ ಒಂದೂವರೆ ವರ್ಷದ ಮಗಳನ್ನು ಕರೆದುಕೊಂಡು ಹೋಗಿದ್ದು, ಎಂಟು ವರ್ಷದ ಮಗಳನ್ನು ಫುಡ್ ಸ್ಟಾಲ್‌ನಲ್ಲಿ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ.

ಹರ್ಮುವಿನಲ್ಲಿರುವ ವಿದ್ಯುತ್ ಕಚೇರಿಗೆ ಆಗಮಿಸಿದ ಬೈಕ್ ಸವಾರರು ಒಳಗೆ ಹಣ ವಿತರಣೆಗೆ ಸಂಬಂಧಿಸಿದ ಸಭೆ ನಡೆಯುತ್ತಿದೆ ಎಂದು ಆ ಮಹಿಳೆಗೆ ತಿಳಿಸಿದರು. ಅಲ್ಲದೆ, ತಾಯಿಯ ಗಮನ ಬೇರೆಡೆ ಸೆಳೆಯುತ್ತಿದ್ದಂತೆ ಕಿಡ್ನ್ಯಾಪರ್‌ಗಳು ಆಕೆಯ ಚಿಕ್ಕ ಮಗಳನ್ನು ಅಪಹರಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ನವರಾತ್ರಿ ಉಪವಾಸ ಮಾಡ್ತಿದ್ದ ಅಣ್ಣ, ಅಕ್ಕನಿಂದ 15 ವರ್ಷದ ಸಹೋದರಿಯ ಬೆತ್ತಲೆಗೊಳಿಸಿ ಬರ್ಬರ ಹತ್ಯೆ!

ಮಧು ಅವರನ್ನು ಹಿಂಬಾಲಿಸಲು ಯತ್ನಿಸಿದರಾದರೂ ಬೈಕ್ ಸವಾರರು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅವರು ತಮ್ಮ ತನಿಖೆಯಲ್ಲಿ ಸಾಧ್ಯವಿರುವ ಎಲ್ಲಾ ಕೋನಗಳನ್ನು ಅನ್ವೇಷಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಮಧು ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪರಿಶೀಲಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಆರಂಭದಲ್ಲಿ, ಆಕೆ ಅಪಹರಣಕಾರರು ಬಡವರಿಗಾಗಿ ಸರ್ಕಾರದ ಯೋಜನೆಯ ಬಗ್ಗೆ ಹೇಳಿದ್ದರು ಎಂದು ಹೇಳಿದ್ದರು. ಆದರೆ ನಂತರ ಅವರು ಧೋನಿಯ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಹೇಳುವ ಮೂಲಕ ತನ್ನ ಹೇಳಿಕೆ ಬದಲಾಯಿಸಿದ್ದಾರೆ ಎಂದು ಜಾರ್ಖಂಡ್‌ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!

Follow Us:
Download App:
  • android
  • ios