ಚಾಲಕನಿಲ್ಲದೇ ಚಲಿಸಿದ ಕಂಟೈನರ್ ಲಾರಿ: ತಪ್ಪಿದ ಭಾರೀ ಅನಾಹುತ

* ಚಾಲಕನಿಲ್ಲದೇ ಚಲಿಸಿದ ಕಂಟೈನರ್ ಲಾರಿ
* ಕಂಟೈನರ್ ಲಾರಿ ಒಂದು ಕಿ.ಮೀ ವರೆಗೂ ಹಿಂಬದಿ ಚಲಿಸಿದೆ
* ತಪ್ಪಿದ ಭಾರೀ ಅನಾಹುತ !

people miraculously escaped after container lorry run without driver in ullal rbj

ಮಂಗಳೂರು, (ಏ.20): ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಚಹಾ ಕುಡಿಯಲು ತೆರಳಿದ್ದ ಚಾಲಕನ ಬಿಟ್ಟು ಕಂಟೈನರ್ ಲಾರಿ ಒಂದು ಕಿ.ಮೀ ವರೆಗೂ ಹಿಂಬದಿ ಚಲಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹಿಂಬದಿ ಚಲಿಸಿ ಟೋಲ್ ಗೇಟ್ ಗಳಿಗೆ ಗುದ್ದಿ ಹಾನಿಗೊಳಿಸಿ, ಸೆಕ್ಯುರಿಟಿ ಗಾಡ್೯ ಸಹಿತ,  ದಂಪತಿ ಪವಾಡಸದೃಶವಾಗಿ ಪಾರಾಗಿರುವ ಘಟನೆ ಮಂಗಳೂರಿನ ತಲಪಾಡಿ ಟೋಲ್ ಗೇಟ್ ನಲ್ಲಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ.

ದೆಹಲಿಯಿಂದ ಕೊಚ್ಚಿಗೆ ಫ್ರಿಡ್ಜ್‌ ಸಾಗಾಟ ನಡೆಸುತ್ತಿದ್ದ ಗಣಪತಿ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ ಲಾರಿಯ ಚಾಲಕ ಜೈವೀರ್ ಸಿಂಗ್ ತಲಪಾಡಿ ಟೋಲ್ ದಾಟಿ  ಚಹಾ ಕುಡಿಯಲು ಕಂಟೈನರ್ ಲಾರಿಯನ್ನು ರಾ.ಹೆ. ಬಳಿ ನಿಲ್ಲಿಸಿದ್ದರು. ಚಹಾ ಕುಡಿಯುತ್ತಿದ್ದಂತೆ ತನ್ನಿಂತಾನೇ ಲಾರಿ ಹಿಂಬದಿ ಚಲಿಸಿ ನಿಲ್ಲಿಸಲಾಗಿದ್ದ ರಿಕ್ಷಾ ಹಾಗೂ ಬೈಕ್ ವೊಂದಕ್ಕೆ ಡಿಕ್ಕಿಯಾಗಿದೆ. ಹಿಂಬದಿ ಚಲಿಸಿ ಟೋಲ್  ಗೇಟ್ ನಲ್ಲಿರುವ ಸೆನ್ಸರ್ ಕಂಬ, ಸೆಕ್ಯುರಿಟಿ ಚೇರ್ ಹಾಗೂ ತಡೆಗಲ್ಲಿಗೆ ಗುದ್ದಿ ನಿಂತಿದೆ. ಈ ನಡುವೆ  ಟೋಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಸತೀಶ್ ನಾರ್ಲಪಡೀಲು, ಅಶೋಕ್ ಹಾಗೂ ಕೇರಳ ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಲಾರಿ ಹಿಂಬದಿ ಚಲಿಸಿರುವುದಾಗಿ ಚಾಲಕ ತಿಳಿಸಿದ್ದಾರೆ. ಘಟನೆಯಿಂದ ಒಂದು ಲಕ್ಷದಷ್ಟು ನಷ್ಟ ಉಂಟಾಗಿದೆ.

ಧಾರವಾಡ: ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ನೂತನ ಡಿಸಿ ಕಾರು ಅಪಘಾತ

ತಪ್ಪಿದ ಭಾರೀ ಅನಾಹುತ !
ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ರಂಝಾನ್ ಮಾಸವಾಗಿದ್ದ ಹಿನ್ನೆಲೆಯಲ್ಲಿ ಕೇರಳ ಕಡೆಯಿಂದ ಬರುವ  ಹಾಗೂ ಹೋಗುವ ವಾಹನಗಳು ಅಷ್ಟಾಗಿ ಟೋಲ್ ನಲ್ಲಿ ಇರಲಿಲ್ಲ. ಅಲ್ಲದೇ ಜನಸಂಚಾರವೂ ವಿರಳವಾಗಿತ್ತು. ಇದರಿಂದ ಭಾರೀ ಅನಾಹುತ ತಪ್ಪಿದೆ.

ಲಿಂಗಸಗೂರು ಬಳಿ ಭೀಕರ ಅಫಘಾತ; ಮೂವರ ದುರ್ಮರಣ
ರಾಯಚೂರು: ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಗೊಲ್ಲಪಲ್ಲಿ ಬಳಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಮರೇಶ್ (30), ಗೋವಿಂದ್ (35) ದೇವರಾಜ್ (34) ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳು. ಎಲ್ಲರೂ ಯಾದಗಿರಿ ಜಿಲ್ಲೆಯ ವಡಗೇರ ಗ್ರಾಮದವರು ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಮದುವೆಗೆಂದು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios