Asianet Suvarna News Asianet Suvarna News

ಜಮ್ಮು ವಸತಿಗೃಹ: ಕೊಳೆತ ಸ್ಥಿತಿಯಲ್ಲಿ ಆರು ಮೃತದೇಹ ಪತ್ತೆ

ಕಣಿವೆನಾಡು ಜಮ್ಮು ಕಾಶ್ಮೀರ ವಸತಿಗೃಹವೊಂದರಲ್ಲಿ ಅರೆ ಕೊಳೆತ ಸ್ಥಿತಿಯಲ್ಲಿ ಆರು ಜನರ ಮೃತದೇಹ ಪತ್ತೆಯಾಗಿದೆ.

6 dead body found in Jammu residential house in decomposed state
Author
Bangalore, First Published Aug 17, 2022, 9:56 AM IST

ಜಮ್ಮುಕಾಶ್ಮೀರ: ಕಣಿವೆನಾಡು ಜಮ್ಮು ಕಾಶ್ಮೀರ ವಸತಿಗೃಹವೊಂದರಲ್ಲಿ ಅರೆ ಕೊಳೆತ ಸ್ಥಿತಿಯಲ್ಲಿ ಆರು ಜನರ ಮೃತದೇಹ ಪತ್ತೆಯಾಗಿದೆ.  ಜಮ್ಮು ನಗರದ ಸಿಧ್ರಾ ಪ್ರದೇಶದಲ್ಲಿ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ. ಸಿಧ್ರಾದ ತವಿ ವಿಹಾರ್‌ ಪ್ರದೇಶದ ಎರಡು ವಸತಿಗೃಹಗಳಲ್ಲಿ ಈ ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುದ್ದಿ ತಿಳಿದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಶವಗಳನ್ನು ಸುಪರ್ದಿಗೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ.

ಮೃತರೆಲ್ಲರೂ ಕಾಶ್ಮೀರದವರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು ಜೆಎಂಸಿಯ ಹಿರಿಯ ವೈದ್ಯರೊಬ್ಬರು ಈ ಎಲ್ಲಾ ಮೃತದೇಹಗಳಿಗೆ ಡ್ರಿಪ್ ಅಳವಡಿಸಲಾಗಿತ್ತು. ಆದರೆ ಸಾವಿಗೆ ನಿಖರ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವೇ ತಿಳಿದು ಬರಲಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಎಲ್ಲಾ ಮೃತರ ವಾರಸುದಾರರು ಜಮ್ಮುವಿಗೆ ಆಗಮಿಸಿದ ನಂತರ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ. 

48 ಗಂಟೆಯ ಬಳಿಕ ಬಾಲಕಿ ಸನ್ನಿಧಿ ಮೃತದೇಹ ಪತ್ತೆ!

ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದ್ದು, ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ಕೂಡ ರಚಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೃತರನ್ನು ದಿವಂಗತ ಗುಲಾಂ ಹಸನ್ ಅವರ ಪತ್ನಿ ಸಕೀನಾ ಬೇಗಂ, ಅವರ ಮಗಳು ನಸೀಮಾ ಅಖ್ತರ್, ರುಬಿನಾ ಬಾನೋ, ಜಾಫರ್ ಅಲಿ, ಹಬೀಬುಲ್ಲಾ ಅವರ ಮಗ ನೂರ್-ಉಲ್-ಹಬೀಬ್ ಮತ್ತು ಫಾರೂಕ್ ಅಹ್ಮದ್ ಮಗ್ರೇ ಅವರ ಪುತ್ರ ಸಜದ್ ಅಹ್ಮದ್ ಎಂದು ಗುರುತಿಸಲಾಗಿದೆ. 

ದೆಹಲಿಯಲ್ಲಿ ವ್ಯಕ್ತಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟ ಪಾತಕಿ..!

Follow Us:
Download App:
  • android
  • ios