ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ: 6 ಮಂದಿ ಬಂಧನ
20.5 ಲಕ್ಷ ನಗದು, 4 ಕಾರು ವಶ| ಪ್ರಮುಖ ಆರೋಪಿ ಕವಿರಾಜ್ ಮೇಲೆ ವಿವಿಧ ಠಾಣೆಗಳಲ್ಲಿ 10 ಪ್ರಕರಣ ದಾಖಲು| ಡಿ.ಕವಿರಾಜ್ ವಿಚಾರಣೆ ನಡೆಸಿದ ನಂತರ ಉಳಿದ ಆರೋಪಿಗಳ ವಶ|
ಕೋಲಾರ(ಡಿ.24): ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್‌ಗೆ ಸಂಬಂಧಿಸಿದಂತೆ ಇದುವರೆಗೆ 6 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ 20.50 ಲಕ್ಷ ನಗದು, 4 ಕಾರು, ಒಂದು ದ್ವಿಚಕ್ರವಾಹನ ಹಾಗೂ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದ ಮಾಸ್ಟರ್ ಮೈಂಡ್ ತಮಿಳುನಾಡಿನ ಮೂಲದ ಬೆಂಗಳೂರಿನ ವಿನಾಯಕ ನಗರ ನಿವಾಸಿ ಡಿ.ಕವಿರಾಜ್ (43), ಬಿಕಾಂ ವಿದ್ಯಾರ್ಥಿ ಎಸ್.ಲಿಖಿತ್(20), ಎಚ್.ಎ.ಉಲ್ಲಾಸ್ (21), ಪ್ರವೀಣ್ (20), ಮನೋಜ್ (20), ಎನ್.ರಾಘವೇಂದ್ರ (34) ಬಂಧಿತ ಆರೋಪಿಗಳು. ಇವರನ್ನು ಎಎಸ್‌ಪಿ ಸಾಹಿಲ್ ಬಾಗ್ಲಾ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಡಿ.ಕವಿರಾಜ್‌ನನ್ನು ವಿಚಾರಣೆ ನಡೆಸಿದ ನಂತರ ಉಳಿದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್, ತನಿಖೆ ವೇಳೆ ಬಯಲಾಯ್ತು ಸ್ಫೋಟಕ ಸಂಗತಿ!
ಆರೋಪಿಗಳು ವರ್ತೂರು ಪ್ರಕಾಶ್ ಅವರಿಂದ 48 ಲಕ್ಷ ಪಡೆದಿದ್ದರು. ಇದೀಗ 20.5 ಲಕ್ಷವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣ ವಸೂಲಿಗೆ ತನಿಖೆ ಮುಂದುವರೆದಿದೆ. ಪ್ರಮುಖ ಆರೋಪಿ ಕವಿರಾಜ್ ಮೇಲೆ ವಿವಿಧ ಠಾಣೆಗಳಲ್ಲಿ 10 ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.