ಮಂಗಳವಾರ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ 50 ವರ್ಷದ ಸರ್ಕಾರಿ ನೌಕರ ಬಳಿಕ ಮನೆಯಲ್ಲಿದ್ದ ಮೇಕೆಯ ಮೇಲೂ ಅತ್ಯಾಚಾರ ಮಾಡಿದ್ದಾನೆ. 

ನವದೆಹಲಿ (ಆ.13): ಅತ್ಯಂತ ಅಸಹ್ಯಕರ ಘಟನೆಯಲ್ಲಿ50 ವರ್ಷದ ಸರ್ಕಾರಿ ನೌಕರನೊಬ್ಬ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆದರೆ, ಇದರಿಂದ ತೃಪ್ತಿ ಸಿಗದ ಹಿನ್ನಲೆಯಲ್ಲಿ ಬಳಿಕ ಆಕೆಯ ಮನೆಯಲ್ಲಿದ್ದ ಮೇಕೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಮಂಗಳವಾರ ನಡೆದಿದೆ. ವರದಿಗಳ ಪ್ರಕಾರ, ಆರೋಪಿಯನ್ನು 50 ವರ್ಷದ ಗಜೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಎಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರನನ್ನು ಬಂಧಿಸಲಾಗಿದೆ. ತನ್ನ ಪರಿಚಯಸ್ಥರ ಮನೆಗೆ ಹೋಗಿದ್ದ ಗಜೇಂದ್ರ ಸಿಂಗ್‌ ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿಯನ್ನು ಕಂಡು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಆದರೆ, ಆಕೆಯಿಂದ ತೃಪ್ತಿ ಸಿಗದ ಹಿನ್ನಲೆಯಲ್ಲಿ ಮನೆಯ ಎದುರಲ್ಲಿಯೇ ಕಂಬಕ್ಕೆ ಕಟ್ಟಿ ಇಟ್ಟಿದ್ದ ಮೇಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ವಿಡಿಯೋದಲ್ಲಿ ಗಜೇಂದ್ರ ಸಿಂಗ್‌ ಮನೆಯ ಹೊರಗಡೆ ಇರುವ ಮಂಚದ ಮೇಲೆ ಮಲಗಿದ್ದಾನೆ. ಈ ವೇಳೆ ತನ್ನ ಮರ್ಮಾಂಗವನ್ನು ಸ್ಪರ್ಶಿಸಲು ಬಾಲಕಿಯನ್ನು ಕೇಳುತ್ತಿರುವುದು ದಾಖಲಾಗಿದೆ. ಆ ಬಳಿಕ ಬಾಲಕಿಗೆ ಮುತ್ತು ಕೂಡ ನೀಡಿದ್ದಾನೆ. ಅದಾದ ನಂತರದ ಇನ್ನೊಂದು ವಿಡಿಯೋದಲ್ಲಿ ಆತ ಮೇಕೆಯ ಮೇಲೆ ರೇಪ್‌ ಮಾಡುತ್ತಿರುವುದು ದಾಖಲಾಗಿದೆ.

ವೀಡಿಯೊಗಳಿಗೆ ಪ್ರತಿಕ್ರಿಯಿಸಿದ ಅಹ್ಮದ್‌ಗಢ ಪೊಲೀಸರು, ಸಹರಾನ್‌ಪುರ ನಿವಾಸಿ ಮತ್ತು ಶಿಕರ್‌ಪುರ ಬ್ಲಾಕ್‌ನಲ್ಲಿ ಸಹಾಯಕ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡ ಆರೋಪಿಯನ್ನು 6 ವರ್ಷದ ಬಾಲಕಿಗೆ ಕಿರುಕುಳ ನೀಡಿ ನಂತರ ಮೇಕೆ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಕ್ಕಪಕ್ಕದಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿನಲ್ಲೇ ಅಪ್ರಾಪ್ತ ಯುವತಿ ಜೊತೆ ಅಸಭ್ಯ ವರ್ತನೆ, ಎಸ್‌ಪಿ ನಾಯಕ & ಡಿಂಪಲ್‌ ಯಾದವ್‌ ಆಪ್ತ ನವಾಬ್‌ ಸಿಂಗ್‌ ಬಂಧನ!

“ಬುಲಂದ್‌ಶಹರ್‌ನಿಂದ ನಾಚಿಕೆಗೇಡಿನ ಘಟನೆಯೊಂದು ಬೆಳಕಿಗೆ ಬಂದಿದೆ. "ಗಜೇಂದ್ರ ಸಿಂಗ್" ಎಂಬ ವ್ಯಕ್ತಿ 6 ವರ್ಷದ ಮುಗ್ಧ ಹುಡುಗಿಯನ್ನು ತನ್ನ ಕಾಮಕ್ಕೆ ಬಳಸಿಕೊಂಡಿದ್ದಾನೆ. ನಂತರ ಅವನು ಮೇಕೆಯೊಂದಿಗೆ ಅಸ್ವಾಭಾವಿಕ ಲೈಂಗಿಕತೆ ಕೂಡ ನಡೆಸಿದ್ದಾನೆ. ಮೂಲತಃ ಸಹರಾನ್‌ಪುರದ ನಿವಾಸಿಯಾದ "ಗಜೇಂದ್ರ ಸಿಂಗ್" ಸಹಾಯಕ ಅಭಿವೃದ್ಧಿ ಅಧಿಕಾರಿಯಾಗಿ ( ADO ಪಂಚಾಯತ್) ಶಿಕಾರ್‌ಪುರ ಬ್ಲಾಕ್‌ನಲ್ಲಿ ಕೆಲಸ ಮಾಡುತ್ತಿದ್ದರು..' ಎಂದು ಪೊಲೀಸರು ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ರಾತ್ರಿ 7.30ಕ್ಕೆ ಹೊರಗಡೆ ಹೋಗಿದ್ಯಾಕೆ..' ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಪ್ರಶ್ನಿಸಿದ ಪೊಲೀಸರು!

Scroll to load tweet…