Asianet Suvarna News Asianet Suvarna News

ಧಾರವಾಡ: ಬೈಕ್‌ನಿಂದ‌ ಇಳಿಯುವಾಗ ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಕೊಂದ ಕೀಚಕರು..!

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ್ ಗ್ರಾಮದಲ್ಲಿ ನಡೆದ ಘಟನೆ 

50 Year Old Man Killed at Navalgund in Dharwad grg
Author
First Published Dec 3, 2022, 6:32 AM IST

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಡಿ.03):  ಸಾಮಾನ್ಯವಾಗಿ ನಾವು ನೀವು ಇತ್ತಿಚಿನ ದಿನಗಳಲ್ಲಿ ಕೊಲೆಗಳು ಚಿಕ್ಕ‌ ಚಿಕ್ಕ ವಿಷಯಕ್ಕೆ ಕೊಲೆ ಆಗುತ್ತಿವೆ ಎಂಬುದನ್ನ ನೋಡಿದ್ದೇವೆ ಖಂಡಿದ್ದೇವೆ.  ಸಿಗರೇಟ್ ವಿಚಾರವಾಗಿ, ಅನೇಕ ವಿಚಾರವಾಗಿ, ಕೇವಲ ಹತ್ತು ರೂಪಾಯಿ ಕೊಡುವುದರ ವಿಚಾರವಾಗಿ ಹಲ್ಲೆ ಮಾಡಿ‌ ಕೊಲೆಗಳು ಆಗಿವೆ. ಆದರೆ ವಿದ್ಯಾಕಾಶಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ್ ಗ್ರಾಮದಲ್ಲಿ ಕೇವಲ ಬೈಕ್ ನಿಂದ ಇಳಿಯುವಾಗ ನೋಡಿಕೊಂಡು ಕೆಳಗೆ ಇಳಿರಿ ಎಂದು ಪ್ರಶ್ನೆ ಮಾಡಿದ ಸಂಗನಗೌಡ್ರು ಮುದಿಗೌಡ್ರು(50) ಇವರನ್ನ  ನನಗೆ ಪ್ರಶ್ನೆ ಮಾಡ್ತಿಯಾ ಎಂದು ಹಿಗ್ಗಾ‌ಮುಗ್ಗಾ ಥಳಿಸಿ 6 ಜನರು ಸೇರಿಕೊಂಡು ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಿನ್ನೆ(ಶುಕ್ರವಾರ) ಸಂಜೆ‌ 5 ಗಂಟೆ ಸುಮಾರಿಗೆ ನಡೆದಿದೆ.

ಬೈಕ್ ನಿಂದ ಇಳಿಯುವಾಗ ಕಾಲು ಬಡಿದಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಅದೆ ಗ್ರಾಮದ ಆರೋಪಿಗಳಾದ ಈರಪ್ಪ ಕಿತ್ತಲಿ, ಪಕ್ಕಿರಪ್ಪ ಕಿತ್ತಲಿ, ಬಸವರಾಜ ಕಿತ್ತಲಿ, ಮಂಜುನಾಥ್ ಕಿತ್ತಲಿ, ನಾಗರಾಜ ಕಿತ್ತಲಿ, ಬಸವರಾಜ ಕುರುಗೋವಿನಕೊಪ್ಪ ಸೇರಿ ಒಟ್ಟು 6 ಜನರು‌ ಸೇರಿ ಹಲ್ಲೆ ಮಾಡಿ ಹತ್ಯೆ ಮಾಡಿ ಕೊಲೆ ಮಾಡಿದ್ದಾರೆ. ಸದ್ಯ 6 ಜನರ ಮೇಲೆ‌ ನವಲಗುಂದ ಪೋಲಿಸರು ಪ್ರಕರಣ ದಾಖಲಿಸಿಕೊಂಡು 6 ಜನ‌ ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಕಿರುಕುಳ ನೀಡ್ತಿದ್ದ ಮಗನ ಕೊಲೆಗೈದು ಪೊಲೀಸರಿಗೆ ಶರಣಾದ ತಂದೆ 

ಕೊಲೆಯ ಘಟನೆಯ ವಿವರ: 

ಕೇವಲ ಬೈಕ್ ನಿಂದ‌ ಕೆಳೆಗೆ ಇಳಿಯುವಾಗ ಪ್ರಶ್ನೆ ಮಾಡಿದಕ್ಕೆ‌ ಹಲ್ಲೆ ಮಾಡಿದ್ರಾ?, ಅಥವಾ ಏನಾದರೂ ಸಂಗನಗೌಡಮ  ಕೊಲೆಯ ಆರೋಪಿಗಳಿಗೆ‌ ಏನಾದರೂ ತಿಕ್ಕಾಟ ಇತ್ತ, ಅಥವಾ ಹಣದ ವ್ಯವಹಾರಗಳು ಏನಾದ್ರೂ ಇದ್ವಾ ಅನ್ನುದರ ಬಗ್ಗೆ‌ ನವಲಗುಂದ ಪೋಲಿಸರು ತನಿಖೆಯನ್ನ‌ ಮಾಡುತ್ತಿದ್ದಾರೆ. ಇನ್ನು ನವಲಗುಂದ ಪೋಲಿಸರು ಪ್ರಕರಣವನ್ನ‌ ಗಂಭಿರವಾಗಿ ತೆಗೆದು ತೆಗೆದುಕೊಂಡು ಸದ್ಯ ಕೊಲೆ ಮಾಡಿದ 6 ಜನರಿಗೆ ಕೃಷ್ಣನ ಜನ್ಮಸ್ಥಳವನ್ನ‌ ತೋರಿಸಿದ್ದಾರೆ. 

ಇನ್ನು ಸಕ್ಕರೆ ಸಚಿವ ಶಂಕರ‌ ಪಾಟೀಲ ಮುನೇನಕೊಪ್ಪ ಅವರ ಸ್ವಕ್ಷೇತ್ರ ಮತ್ತು ಸ್ವಗ್ರಾಮದಲ್ಲಿ ನಡೆದ ಕೊಲೆಯನ್ನ ಪೋಲಿಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಇನ್ನು ಕೊಲೆಗೆ ಕೇವಲ ಕಾಲು ಬಡಿದಿದಕ್ಕೆ ಕೊಲೆ ಮಾಡಿದ್ರಾ..? ಏನಾದರೂ ಹಳೆಯ ದ್ವೇಷಗಳು ಇದ್ವಾ, ಎಂಬುದರ ಹತ್ತು ಹಲವಾರು ಪ್ರಶ್ನೆಗಳನ್ನ ಆರೋಪಿಗಳಿಂದ ನವಲಗುಂದ ಪೋಲಿಸರು ಸತ್ಯಾಸತ್ತತೆಯನ್ನ ಬೆಳೆಕಿಗೆ ತರಬೇಕಿದೆ. 
 

Follow Us:
Download App:
  • android
  • ios