ಜೊಸೇಫ್‌ನನ್ನ ಹತ್ಯೆಗೈದು ಆರೋಪಿ ಗಿರೀಶ್‌ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. 

ಕೊಡಗು(ಅ.03): ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕಡಿದು ವ್ಯಕ್ತಿಯ ಕೊಲೆಗೈದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. 

ಕೂಡ್ಲೂರು ಗ್ರಾಮದ ನಿವಾಸಿ ಜೊಸೇಫ್ (45) ಮೃತ ದುರ್ದೈವಿ. ಪಕ್ಕದ ಮನೆಯ ನಿವಾಸಿ ಗಿರೀಶ್ ಎಂಬಾತ ಕೊಡಲಿಯಿಂದ ಕಡಿದು ಜೊಸೇಫ್‌ನನ್ನ ಕೊಲೆ ಮಾಡಿದ್ದಾನೆ. 

ಹಾವೇರಿ: ಕಾಮದಾಹಕ್ಕೆ ಗಂಡನನ್ನೇ ಕೊಂದ ಐನಾತಿ ಹೆಂಡ್ತಿ!

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜೊಸೇಫ್‌ನನ್ನ ಹತ್ಯೆಗೈದು ಆರೋಪಿ ಗಿರೀಶ್‌ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.