Asianet Suvarna News Asianet Suvarna News

ರಾಯಚೂರು: ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಸುಟ್ಟ ರೀತಿಯಲ್ಲಿ ಮಹಿಳೆಯ ಶವ ಪತ್ತೆ

ಸ್ಥಳಕ್ಕೆ ಹಟ್ಟಿ‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಹೊಸಗೇರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

45 Year Old Woman Killed at Hatti Gold Mines Town in Raichur grg
Author
First Published Oct 26, 2023, 9:36 AM IST

ರಾಯಚೂರು(ಅ.26):  ಸುಟ್ಟ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಘಟನೆ ರಾಯಚೂರು ಜಿಲ್ಲೆಯ ‌ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ಮಂಜುಳಾ (45) ಎಂಬಾಕೆಯೇ ಮೃತ ದುರ್ದೈವಿ‌ಯಾಗಿದ್ದಾರೆ.

ಕೊಲೆಯಾದ ಮಂಜುಳಾ ಹಟ್ಟಿ ಚಿನ್ನದ ಗಣಿ ಕಂಪನಿಯ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು. ಪತಿಯನನ್ನ ಕಳೆದುಕೊಂಡಿದ್ದ ಮಂಜುಳಾ ಮಕ್ಕಳೊಂದಿಗೆ ಹಟ್ಟಿಯಲ್ಲಿ ವಾಸವಾಗಿದ್ದರು. ಹಟ್ಟಿ ಕಂಪನಿಯ ಕ್ಯಾಂಪ್ ನ ಜಿ.ಆರ್.ಕಾಲೋನಿಯಲ್ಲಿ ಮನೆ ನಂ. 45/6 ಮನೆಯಲ್ಲಿ ವಾಸವಿದ್ದರು. 

ಚಾಮರಾಜನಗರ: ಹಣಕಾಸಿನ ವಿಚಾರಕ್ಕೆ ಜಗಳ, ಆಯುಧದಿಂದ ಹೊಡೆದು ಹೆಂಡ್ತಿ ಕೊಲೆ

ಆದರೆ, ಪತಿಯನ್ನ ಕಳೆದುಕೊಂಡ ಬಳಿ ಮಂಜುಳಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಇಂದು ಬೆಳಿಗ್ಗೆ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ. ಮಹಿಳೆಯ ಸಾವಿನ ಬಗ್ಗೆ ಯಾರ ಮೇಲೂ ಸಂಶಯವಿಲ್ಲ ಎಂದು ಮೃತ ಮಂಜುಳಾ ಸಹೋದರ ಬಸವರಾಜ ಬುದ್ದಿನ್ನಿ ಎಂಬುವರು ಪೊಲೀಸರು ತಿಳಿಸಿದ್ದಾರೆ. 

ಮನೆಯಿಂದ 100 ಮೀಟರ್ ದೂರದಲ್ಲಿ ಮಂಜುಳಾ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹಟ್ಟಿ‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಹೊಸಗೇರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios