Asianet Suvarna News Asianet Suvarna News

ಬೆಂಗಳೂರು: ಸಹೋದರಿಯರ ಜಗಳ ಬಿಡಿಸಲು ಹೋಗಿ ಬಡಿದು ಕೊಂದ ಬಂಧು..!

ಸಿಂಗಸಂದ್ರದ ನಿವಾಸಿ ಗೂಡಿಯಾ ದೇವಿ ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಸಂಬಂಧಿ ರಾಜೇಶ್ ಕುಮಾರ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ದೇವಿ ಹಾಗೂ ಆಕೆಯ ತಂಗಿ ನಡೆದ ಜಗಳದಲ್ಲಿ ಮಧ್ಯೆ ಪ್ರವೇಶಿಸಿ ಅವರ ಸಂಬಂಧಿ ರಾಜೇಶ್ ಈ ಕೃತ್ಯ ಎಸಗಿದ್ದಾನೆ.

42 Year Old Woman Killed in Bengaluru grg
Author
First Published Mar 26, 2024, 7:59 AM IST

ಬೆಂಗಳೂರು(ಮಾ.26):  ಮೊಬೈಲ್ ವಿಚಾರವಾಗಿ ಜಗಳವಾಡುತ್ತಿದ್ದ ತಂಗಿಯರ ಮಧ್ಯೆ ಪ್ರವೇಶಿಸಿದ ಸಂಬಂಧಿ, ಸಿಟ್ಟಿಗೆದ್ದು ಅಕ್ಕನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆಗೈದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿಂಗಸಂದ್ರದ ನಿವಾಸಿ ಗೂಡಿಯಾ ದೇವಿ (42) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಸಂಬಂಧಿ ರಾಜೇಶ್ ಕುಮಾರ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಭಾನುವಾರ ದೇವಿ ಹಾಗೂ ಆಕೆಯ ತಂಗಿ ನಡೆದ ಜಗಳದಲ್ಲಿ ಮಧ್ಯೆ ಪ್ರವೇಶಿಸಿ ಅವರ ಸಂಬಂಧಿ ರಾಜೇಶ್ ಈ ಕೃತ್ಯ ಎಸಗಿದ್ದಾನೆ.

ವಿಜಯಪುರ: ಅನೈತಿಕ ಸಂಬಂಧ ಶಂಕೆ, ಜೋಡಿ ಕೊಲೆ

ಮೃತ ದೇವಿ ಹಾಗೂ ಸಂಬಂಧಿ ರಾಜೇಶ್ ಮೂಲತಃ ಬಿಹಾರ ರಾಜ್ಯದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಬಳಿಕ ಗಾರ್ಮೆಂಟ್ಸ್‌ನಲ್ಲಿ ದೇವಿ ಸೋದರಿಯರು ಕೆಲಸಕ್ಕೆ ಅಕ್ಕ- ಸೇರಿದರೆ, ಸ್ವಿಗ್ಗಿ ಡೆಲವರಿ ಬಾಯ್ ಆಗಿ ರಾಜೇಶ್ ದುಡಿಯುತ್ತಿದ್ದ. ಈ ಮೂವರು ಸಿಂಗಸಂದ್ರದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ನೆಲೆಸಿದ್ದರು. ಮನೆಯಲ್ಲಿ ಸಣ್ಣಪುಟ್ಟ ವಿಚಾರವಾಗಿ ದೇವಿ ಸೋದರರು ಕಿತ್ತಾಡುತ್ತಿದ್ದರು.

ಅಂತೆಯೇ ಭಾನುವಾರ ಮಧ್ಯಾಹ್ನ ಮೊಬೈಲ್ ವಿಷಯವಾಗಿ ಅವರಿಬ್ಬರು ಜಗಳ ವಾಡುತ್ತಿದ್ದರು. ಆಗ ಸಿಟ್ಟಿಗೆದ್ದ ರಾಜೇಶ್, 'ಯಾವಾಗಲೂ ಯಾಕೆ ಜಗಳವಾಡುತ್ತೀರಾ' ಎಂದು ಬೈದಿದ್ದಾನೆ. ಈ ಮಾತಿಗೆ ದೇವಿ ಆಕ್ಷೇಪಿಸಿದಾಗ ಕೆರಳಿದ ಆತ, ದೇವಿ ತಲೆಗೆ ದೊಣ್ಣೆಯಿಂದ ಬಾರಿಸಿದ್ದಾನೆ. ಆಗ ಕೆಳಗೆ ಆಕೆಯ ಕುತ್ತಿಗೆಯನ್ನು ಹಿಸುಕಿ ಉಸಿರುಗಟ್ಟಿಸಿ ಕೊಂದು ಪರಾರಿ ಆಗಿದ್ದಾನೆ. ಕೂಡಲೇ ಈ ಘಟನೆ ಬಗ್ಗೆ ಪೊಲೀಸರಿಗೆ ಮೃತಳ ಸೋದರಿ ಮಾಹಿತಿ ನೀಡಿದ್ದಾಳೆ.
ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ ರಾಜೇಶ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Follow Us:
Download App:
  • android
  • ios