ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೂಡ್ಲು ಬಳಿ ನಡೆದ ಘಟನೆ 

ಬೆಂಗಳೂರು(ಅ.28): ದೀಪಾವಳಿ ಹಬ್ಬದ ವೇಳೆ ಜೂಜಾಡುವಾಗ ಹಣದ ವಿಚಾರವಾಗಿ ನಿಂದಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಆಟೋ ಚಾಲಕನೊಬ್ಬನನ್ನು ಆತನ ಸ್ನೇಹಿತರೇ ಕೊಂದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೂಡ್ಲು ಬಳಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಡೇಪಾಳ್ಯ ನಿವಾಸಿ ರಾಜು (40) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತನ ಸ್ನೇಹಿತರಾದ ವಿಜಯ್‌ ರೆಡ್ಡಿ, ವಿನಯ್‌ ರೆಡ್ಡಿ ಹಾಗೂ ಗಂಗಾಧರ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೂಡ್ಲು ಬಳಿ ಕುಡಿದ ಅಮಲಿನಲ್ಲಿ ಬುಧವಾರ ರಾತ್ರಿ ಈ ನಾಲ್ವರು ಸ್ನೇಹಿತರ ಮಧ್ಯೆ ಜಗಳವಾಗಿದೆ. ಆಗ ಆತನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಗಂಡನನ್ನೇ ಕೊಂದ ಮಹಿಳೆ..!

ಬಂಡೇಪಾಳ್ಯದ ರಾಜು ಆಟೋ ಚಾಲಕನಾಗಿದ್ದು, ತನ್ನ ಕುಟುಂಬದ ಜತೆ ನೆಲೆಸಿದ್ದ. ದೀಪಾವಳಿ ಹಬ್ಬದ ದಿನ ಸ್ನೇಹಿತರ ಜತೆ ಆತ ಜೂಜಾಡುತ್ತಿದ್ದ. ಆ ವೇಳೆ ಹಣದ ವಿಚಾರವಾಗಿ ವಿಜಯ್‌, ವಿನಯ್‌ ಹಾಗೂ ಗಂಗಾಧರ್‌ ಅವರಿಗೆ ರಾಜು ಬೈದಿದ್ದ. ಇದರಿಂದ ಕೆರಳಿದ ಆರೋಪಿಗಳು, ಮದ್ಯ ಸೇವನೆ ನೆಪದಲ್ಲಿ ಬುಧವಾರ ರಾತ್ರಿ ಕರೆಸಿಕೊಂಡಿದ್ದಾರೆ. ಆಗ ಮತ್ತೆ ಇಸ್ಪೀಟ್‌ ವಿಚಾರ ಪ್ರಸ್ತಾಪವಾಗಿ ಜಗಳವಾಗಿದೆ. ಈ ಹಂತದಲ್ಲಿ ರಾಜು ಮೇಲೆ ಹಲ್ಲೆ ನಡೆಸಿ ಆರೋಪಿಗಳು ಕೊಂದಿದ್ದಾರೆ. ಘಟನೆ ವಿಚಾರ ತಿಳಿದ ಕೂಡಲೇ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.