ಹೊಲದಲ್ಲಿ ಹಾಕಲಾಗಿದ್ದ ಮೆಣಸಿನಕಾಯಿ ರಾಶಿ ಸಂಬಂಧಿಸಿದಂತೆ ಸಾವಿಗೀಡಾದ ಉಮೇಶ ಮತ್ತು ಆರೋಪಿ ಮಲ್ಲೇಶನ ನಡುವೆ ಜಗಳ ನಡೆದಿತ್ತು. ರಾತ್ರಿ ಹೊಲದಲ್ಲಿ ಮಲಗಿದ್ದ ಉಮೇಶನಿಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಮಲ್ಲೇಶ. 

ಸಿರವಾರ(ಮೇ.11): ಕ್ಷುಲ್ಲಕ ಕಾರಣಕ್ಕೆ ಸಹೋದರರ ನಡುವೆ ನಡೆದ ಜಗಳದಲ್ಲಿ ಉಮೇಶ (40) ಕೊಲೆಯಾದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಹೊಲದಲ್ಲಿ ಹಾಕಲಾಗಿದ್ದ ಮೆಣಸಿನಕಾಯಿ ರಾಶಿ ಸಂಬಂಧಿಸಿದಂತೆ ಸಾವಿಗೀಡಾದ ಉಮೇಶ ಮತ್ತು ಆರೋಪಿ ಮಲ್ಲೇಶನ ನಡುವೆ ಜಗಳ ನಡೆದಿತ್ತು. ರಾತ್ರಿ ಹೊಲದಲ್ಲಿ ಮಲಗಿದ್ದ ಉಮೇಶನಿಗೆ ಮಲ್ಲೇಶನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯ ಸಾವಿನ ನಂತರ ದು:ಖದ ಬಗ್ಗೆ ಪುಸ್ತಕ ಬರೆದ ಮಹಿಳೆ: ಕೊಲೆ ಆರೋಪದ ಮೇಲೆ ಬಂಧಿಸಿದ ಪೊಲೀಸರು!

ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಸಿರವಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.