ಬೆಂಗಳೂರು, [ಜ.12]: ಬೆಂಗಳೂರು ದಕ್ಷಿಣ ತಾಲೂಕಿನ ದೇವಮಾಚೋಹಳ್ಳಿ ಸಮೀಪ ಕಾರೊಂದು ಕೆರೆಗೆ ಉರುಳಿ ಬಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಮಂಜು, ರಘು, ಸುನಿಲ್, ಸಂತೋಷ್ ಮೃತರು. ಇಂದು [ಭಾನುವಾರ] ಬೆಂಗಳೂರಿನಿಂದ ಹುಲಿಯೂರು ದುರ್ಗಕ್ಕೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. 

ಬೆಂಗಳೂರಿಗರಿಗೆ ಆತಂಕ ತಂದಿಟ್ಟ ಅಂಕಿ-ಅಂಶ, ಮಸ್ಟ್ ರೀಡ್!

ಅತಿ ವೇಗವಾಗಿ ಬಂದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ್ದು, ಕೆರೆಯಿಂದ‌ ಹೊರಬರಲಾಗದೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಶವಗಳನ್ನು ಕರೆಯಿಂದ ಹೊರತೆಗೆದು ನೆಲಮಂಗಲ ಆಸ್ಪತ್ರೆಗೆ ರವಾನಿಸಿದ್ದಾರೆ. 

ಈ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.