ಕಾರವಾರ: ಪಿಎಸ್‌ಐನಿಂದ ಮಾನಸಿಕ ಕಿರುಕುಳ ಆರೋಪ, ಠಾಣೆ ಎದುರೇ ಯುವಕ ಆತ್ಮಹತ್ಯೆಗೆ ಯತ್ನ
ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಭಾಸ್ಕರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪಿಎಸ್ಐ ವಿರುದ್ಧ ವಿಡಿಯೋ ಮಾಡಿ ಭಾಸ್ಕರ್ ಆರೋಪ ಮಾಡಿದ್ದಾನೆ.
ಕಾರವಾರ(ಜೂ.14): ಪಿಎಸ್‌ಐ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮದ್ಯದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ.
ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಭಾಸ್ಕರ್ ಬೋಂಡೆಲ್ಕರ್ (36) ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ. ಪಿಎಸ್ಐ ಬಸವರಾಜ್ ಮಗನೂರು ಜೂಜಾಟ ಆರೋಪದಡಿ ಭಾಸ್ಕರ್ ಬೋಂಡೆಲ್ಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಿನ್ನೆ ದಿನ ಜಮೀನು ವಿಚಾರದಲ್ಲಿ ಭಾಸ್ಕರ್ ಮದ್ಯ ಸೇವಿಸಿ ಬೈಕ್ ನಲ್ಲಿ ಠಾಣೆಗೆ ತೆರಳಿದ್ದನು. ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್ಐ ಸೂಚಿಸಿದ್ದರು.
ಅಮೆರಿಕದ ಮಹಿಳೆಗೆ ಮಹಾಮೋಸ, 300 ರೂಪಾಯಿ ಆಭರಣ 6 ಕೋಟಿಗೆ ಮಾರಾಟ!
ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಭಾಸ್ಕರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪಿಎಸ್ಐ ವಿರುದ್ಧ ವಿಡಿಯೋ ಮಾಡಿ ಭಾಸ್ಕರ್ ಆರೋಪ ಮಾಡಿದ್ದಾನೆ. ಜೂಜಾಟದಲ್ಲಿ ಸಿಕ್ಕಿ ಬಿದ್ದಾಗ 3,60,00 ರೂ. ಅನ್ನು 36,000 ರೂ. ಎಂದು ಪೊಲೀಸರು ತೋರಿಸಿದ್ರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದೆ. ತಾನೀಗ ಚಾಲಕ ವೃತ್ತಿ ನಡೆಸುತ್ತಿದ್ದು, ರಾಮನಗರ ತೆರಳಿದಾಗ ಮತ್ತೆ ಪೊಲೀಸರು ಕಿರುಕುಳ ನೀಡಿದ್ದಾರೆ. ಈ ಕಾರಣದಿಂದ ಆತ್ಮಹತ್ಯೆ ನಡೆಸಲು ಯತ್ನಿಸಿದ್ದೇನೆ ಎಂದು ಭಾಸ್ಕರ್ ಹೇಳಿದ್ದನೆ. ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡ ಭಾಸ್ಕರ್‌ನನ್ನು ಬೆಳಗಾವಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.