ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿಪತಿ ರಾಜ್‌ ಕುಂದ್ರಾ ಕುಂದ್ರಾ ವಿರುದ್ಧ ಈಗ 3000 ಕೋಟಿ ರು.ಗಳ ವಂಚನೆ ಆರೋಪ ಒಂದರ ಮೇಲೋಂದು ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾ

ಮುಂಬೈ (ಜು.31): ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿಪತಿ ರಾಜ್‌ ಕುಂದ್ರಾ ವಿರುದ್ಧ ಈಗ 3000 ಕೋಟಿ ರು.ಗಳ ವಂಚನೆ ಆರೋಪ ಕೇಳಿಬಂದಿದೆ. 

ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ ಕದಂ ಈ ಆರೋಪ ಮಾಡಿದ್ದು, ರಾಜ್‌ ಕುಂದ್ರಾ ಅವರ ಒಡೆತನದ ವಿಯಾನ್‌ ಇಂಡಸ್ಟ್ರೀಸ್‌ ಕಂಪನಿಯು ‘ಗೇಮ್‌ ಆಫ್‌ ಡಾಟ್‌’ ಎಂಬ ಆನ್‌ಲೈನ್‌ ಗೇಮ್‌ ಬಿಡುಗಡೆ ಮಾಡಿತ್ತು. ದೇಶಾದ್ಯಂತ ಅದರ ವಿತರಣೆಯ ಹಕ್ಕುಗಳನ್ನು ನೀಡುವುದಾಗಿ ಅನೇಕ ಡಿಸ್ಟ್ರಿಬ್ಯೂಟರ್‌ಗಳಿಂದ ಹಣ ಸಂಗ್ರಹಿಸಿ, ನಂತರ ವಂಚನೆ ಎಸಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಬಯಲಾಯ್ತು ಕುಂದ್ರಾ ಅಶ್ಲೀಲ ದಂಧೆ ಅಚ್ಚರಿ ವಿಚಾರ!

ಇನ್ನು, ರಾಜ್‌ ಕುಂದ್ರಾ ವಿರುದ್ಧ ನಟಿ ಹಾಗೂ ಮಾಡೆಲ್‌ ಒಬ್ಬರು ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಪೊಲೀಸರಿಗೆ ದೈಹಿಕ ಕಿರುಕುಳದ ದೂರು ನೀಡಿದ್ದರು. ಆದರೆ ನಂತರ ಆಕೆಯ ಮೇಲೆ ಮತ್ತು ಪೊಲೀಸರ ಮೇಲೆ ಒತ್ತಡ ತಂದು ಆ ದೂರಿನ ತನಿಖೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದೂ ಆರೋಪಿಸಿದ್ದಾರೆ.

ಎರಡು ದಿನದ ಹಿಂದಷ್ಟೇ ಬಾಲಿವುಡ್‌ ನಟಿ ಶೆರ್ಲಿನ್‌ ಚೋಪ್ರಾ ಅವರು ಕುಂದ್ರಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಈಗ ರಾಮ್‌ ಕದಂ ಹೇಳುತ್ತಿರುವ ನಟಿಯೂ ಆಕೆಯೇ ಆಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.