Asianet Suvarna News Asianet Suvarna News

Chikkamagaluru: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್‌ನಿಂದ ಮೂವರು ಸಾವು

ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕಿಯರೂ ಸೇರಿದಂತೆ ಮೂವರು ದಾರುಣ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ. ಹೊಸಹಳ್ಳಿಯಲ್ಲಿ ಸಂಭವಿಸಿದೆ. 

3 people died due to electric shock in chikkamagaluru gvd
Author
First Published Sep 7, 2022, 9:23 AM IST

ಚಿಕ್ಕಮಗಳೂರು (ಸೆ.07): ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕಿಯರೂ ಸೇರಿದಂತೆ ಮೂವರು ದಾರುಣ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ. ಹೊಸಹಳ್ಳಿಯಲ್ಲಿ ಸಂಭವಿಸಿದೆ. 

ಅಲಂಕಾರಗೊಂಡಿದ್ದ ಕಮಾನ್‌ಗೆ ತಗುಲಿದ ವಿದ್ಯುತ್ ತಂತಿ: ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿದ ಗಣಪತಿಯನ್ನು ವಿಸರ್ಜನೆ ಮಾಡುವ ಸಲುವಾಗಿ ಟ್ರ್ಯಾಕ್ಟರ್ ಅನ್ನು ಸಿಂಗಾರಗೊಳಿಸಲಾಗಿತ್ತು. ಗ್ರಾಮದಲ್ಲೇ ಗಣಪತಿ ಯನ್ನು ವಿಸರ್ಜಿಸಿ ವಾಪಸ್ ಬರುವ ವೇಳೆಯಲ್ಲಿ ಟ್ಯಾಕ್ಟರ್‌ನಲ್ಲಿ ನಿರ್ಮಿಸಿದ್ದ ಕಮಾನಿಗೆ ವಿದ್ಯುತ್ ತಂತಿ ತಗಲಿದ ಪರಿಣಾಮ  ದುರ್ಘಟನೆಯಲ್ಲಿ ಮೂವರು ಮೃತರಾಗಿದ್ದಾರೆ. ಘಟನೆಯಲ್ಲಿ ರಾಜು (47) ರಚನಾ (35) ಪಾರ್ವತಿ (26) ಮೃತಪಟ್ಟಿದ್ದಾರೆ, ಗಂಭೀರ ಗಾಯಗೊಂಡ ಆರು ಜನರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ ಅವರಲ್ಲಿ ಮೂವರನ್ನು ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. 

ವಿದ್ಯುತ್ ಸ್ಪರ್ಶಿಸಿ ಯುವತಿ ಬಲಿ; ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾವು..?

ಇದರಲ್ಲಿ ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಸ್ಥಿತಿ ಗಂಭೀರ ಎನ್ನಲಾಗಿದೆ. ಘಟನೆ ವೇಳೆ ಟ್ರಾಕ್ಟರ್‌ನ ಇಂಜಿನ್ ಮೇಲೆ ಕೂಳಿತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ‌. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳೆದ ರಾತ್ರಿಯೇ ಎಸ್ಪಿ ಉಮಾ ಪ್ರಶಾಂತ್ ಮೂಡಿಗೆರೆಗೆ ತೆರಳಿ ಘಟನೆಯ ವರದಿ ಪಡೆದಿದ್ದಾರೆ. ಮೃತರೆಲ್ಲಾ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದ್ದು ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆ ವಿದ್ಯುತ್ ಕಂಬದ ವೈರ್‌ಗಳು ಸಡಿಲಗೊಂಡ ಕಾರಣ ಟ್ರಾಕ್ಟರ್‌ನ ಕಮಾನಿಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದುಜಿಲ್ಲೆಯಾದ್ಯಂತ ಆಘಾತಕಾರಿ ಸುದ್ದಿ ನೋವು ತಂದಿದೆ.

ಹಳ್ಳದಲ್ಲಿ ಕೊಚ್ಚಿ ಹೋಗಿ ಕರ್ತವ್ಯ ನಿರತ ಪೊಲೀಸ್‌ ಸಾವು: ಸೋಮವಾರ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಜರುಗಿದ ರೈತರ ಪ್ರತಿಭಟನಾ ಕಾರ್ಯಕ್ರಮದ ಕರ್ತವ್ಯಕ್ಕೆ ತೆರಳಿದ್ದ ಮುಂಡರಗಿ ಪೊಲೀಸ್‌ ಠಾಣೆಯ ಇಬ್ಬರ ಪೊಲೀಸ್‌ ಪೇದೆಗಳು ಕರ್ತವ್ಯ ಮುಗಿಸಿಕೊಂಡು ವಾಪಾಸ್ಸಾಗುವ ಸಮಯದಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತೊಂಡಿಹಾಳ ಸಮೀಪದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಅದರಲ್ಲಿ ನಿಂಗಪ್ಪ ಹಲವಾಗಲಿ (28) ಎನ್ನುವ ಪೊಲೀಸ್‌ ಪೇದೆ ಮೃತ ದೇಹ ಮಂಗಳವಾರ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ. ಮೃತ ಪೊಲೀಸ್‌ ಪೇದೆಯು ಮೂಲತಃ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ್ದರು. 

ಕೌಟುಂಬಿಕ ದೌರ್ಜನ್ಯದಿಂದ ತಾಯಿ ರಕ್ಷಿಸಲು ತಂದೆಯನ್ನೇ ಕೊಂದ ಪುತ್ರಿ

ಕಳೆದ 7-8 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತ ಪೊಲೀಸ್‌ ಪೇದೆ ತಂದೆ, ತಾಯಿ ಹಾಗೂ ಓರ್ವ ಸಹೋದರ ಮತ್ತು ಓರ್ವ ಸಹೋದರಿಯನ್ನು ಇದ್ದಾರೆ. ಗ್ರಾಮದಲ್ಲಿ ಅಗಲಿದ ಯುವ ಪೊಲೀಸ್‌ ಪೇದೆಯನ್ನು ನೆನೆದು ಜನತೆ ಕಣ್ಣೀರು ಹಾಕುತ್ತಿದ್ದಾರೆ. ಇಡೀ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ಗ್ರಾಮಕ್ಕೆ ಇನ್ನೂ ಮೃತ ದೇಹ ಬಂದಿಲ್ಲ. ಇದೇ ಸಂದರ್ಭದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇನ್ನೋರ್ವ ಪೇದೆಗಾಗಿ ಹುಡುಕಾಟ ನಡೆಯುತ್ತಿದೆಯಾದರೆ ಸಂಜೆ 5 ಗಂಟೆಯವರೆಗೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಸ್ಥಳದಲ್ಲಿಯೇ ಪೊಲೀಸ್‌ ಸಿಬ್ಬಂದಿ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಮೊಕ್ಕಾಂ ಹೂಡಿ ಹುಡುಕಾಟ ನಡೆಸಿದ್ದಾರೆಂದು ತಿಳಿದು ಬಂದಿದೆ.

Follow Us:
Download App:
  • android
  • ios