ನ್ಯುಮೋನಿಯಾನಿಂದ ಬಳಲುತ್ತಿದ್ದ 3 ತಿಂಗಳ ಹಸುಗೂಸಿಗೆ ಬಿಸಿ ರಾಡ್‌ನಿಂದ ಚುಚ್ಚಿ ಚಿಕಿತ್ಸೆ: ಕಂದಮ್ಮ ಬಲಿ..!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಆಸ್ಪತ್ರೆಗೆ ತಲುಪಿದಾಗ, ಈ ಮೂಢ ನಂಬಿಕೆಯ ಆಘಾತಕಾರಿ ಪ್ರಕರಣವು 15 ದಿನಗಳ ಹಿಂದೆ ನಡೆದಿರುವುದು ಮತ್ತು ನ್ಯುಮೋನಿಯಾಕ್ಕೆ ಚಿಕಿತ್ಸೆ ನೀಡದ ಕಾರಣ ಮಗುವಿನ ಸ್ಥಿತಿ ಹದಗೆಟ್ಟಿರುವುದು ಕಂಡುಬಂದಿದೆ ಎಂದು ಶಹದೋಲ್ ಕಲೆಕ್ಟರ್ ಹೇಳಿದ್ದಾರೆ.

3 month old baby poked 51 times with hot rod to treat pneumonia dies ash

ಭೋಪಾಲ್ (ಫೆಬ್ರವರಿ 4, 2023): ಮಧ್ಯಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಬಾಲಕಿಯ ಹೊಟ್ಟೆಯ ಮೇಲೆ ಕಾದ ಕಬ್ಬಿಣದ ರಾಡ್‌ನಿಂದ 51 ಬಾರಿ ಚುಚ್ಚಿದ್ದಾರೆ ಎಂದು ತಿಳಿದುಬಂದಿದೆ. ಚಿಕಿತ್ಸೆಯ ಭಾಗವಾಗಿ ಮಗುವನ್ನು ಆಸ್ಪತ್ರೆಗೂ ಸೇರಿಸುವ ಮುನ್ನ ಹೀಗೆ ಮಾಡಲಾಗಿದ್ದು, ಇದಾದ ಕೆಲ ದಿನಗಳ ಬಳಿಕ ಮಗು ಮೃತಪಟ್ಟಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗು ಈ ಘಟನೆ ನಡೆದ 15 ದಿನಗಳ ನಂತರ ಆಸ್ಪತ್ರೆಯಲ್ಲಿ ಬಲಿಯಾಗಿದ್ದು, ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸಮಾಧಿ (Bury) ಮಾಡಿರುವ 3 ತಿಂಗಳ ಹೆಣ್ಣು ಮಗುವಿನ ಶವವನ್ನು (Dead Body) ಶನಿವಾರದಂದು ಮರಣೋತ್ತರ ಪರೀಕ್ಷೆಗಾಗಿ (Post Mortem) ಹೊರತೆಗೆಯಲಾಗುವುದು ಎಂದು ಅಧಿಕಾರಿಗಳು (Officials) ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು (Women and Child Development Officers) ಆಸ್ಪತ್ರೆಗೆ (Hospital) ತಲುಪಿದಾಗ, ಈ ಮೂಢ ನಂಬಿಕೆಯ ಆಘಾತಕಾರಿ ಪ್ರಕರಣವು 15 ದಿನಗಳ ಹಿಂದೆ ನಡೆದಿರುವುದು ಮತ್ತು ನ್ಯುಮೋನಿಯಾಕ್ಕೆ ಚಿಕಿತ್ಸೆ ನೀಡದ ಕಾರಣ ಮಗುವಿನ ಸ್ಥಿತಿ ಹದಗೆಟ್ಟಿರುವುದು ಕಂಡುಬಂದಿದೆ ಎಂದು ಶಹದೋಲ್ ಕಲೆಕ್ಟರ್ ವಂದನಾ ವೈಧ್ ಹೇಳಿದ್ದಾರೆ.

ಇದನ್ನು ಓದಿ: Tamil Nadu: ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಬಿಸಾಡಿದ 11ನೇ ಕ್ಲಾಸ್‌ ಬಾಲಕಿ: 10ನೇ ತರಗತಿ ಬಾಲಕ ಸೆರೆ

ಈ ಘಟನೆ ಬಳಿಕ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಗುವಿನ ತಾಯಿಗೆ ಬುದ್ಧಿ ಹೇಳಿದ್ದು, ಮಗುವಿಗೆ ಬಿಸಿ ರಾಡ್‌ನಿಂದ ಚುಚ್ಚದಂತೆ ವಿನಂತಿ ಮಾಡಿದ್ದರು ಎಂದೂ ವಂದನಾ ವೈಧ್ ತಿಳಿಸಿದ್ದಾರೆ. ಬಳಿಕ, ಕೆಲ ದಿನಗಳ ನಂತರ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ನಂತರ ಅದನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೂ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗು ಬಲಿಯಾಗಿದೆ. 

ಮಗು ಉಸಿರಾಡಲು ಕಷ್ಟಪಡುತ್ತಿದ್ದ ನಂತರವೇ ಅದನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಹಾಗೂ ಇಂಗ್ಲೀಷ್‌ ಔಷಧಿ ಆ ವೇಳೆಗೆ ನೀಡಿದ್ದಾರೆ. ಮಗುವನ್ನು ಮೊದಲೇ ಆಸ್ಪತ್ರೆಗೆ ಕರೆತಂದಿದ್ದರೆ, ಅದನ್ನು ಉಳಿಸಬಹುದಿತ್ತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆಂದು ಸಹ ವರದಿಯಾಗಿದೆ.

ಇದನ್ನೂ ಓದಿ: ನಿದ್ರೆ ಹಾಳು ಮಾಡಿದ್ದಕ್ಕೆ 1.5 ವರ್ಷದ ಕಂದಮ್ಮನನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ..!

ಮಧ್ಯಪ್ರದೇಶದ ಅನೇಕ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ, ನ್ಯುಮೋನಿಯಾಗೆ "ಚಿಕಿತ್ಸೆ" ನೀಡಲು ಬಿಸಿ ಕಬ್ಬಿಣದ ರಾಡ್‌ನಿಂದ ಚುಚ್ಚುವ ಅಭ್ಯಾಸವು ಸಾಮಾನ್ಯವಾಗಿದೆಯಂತೆ.ಈ ಮಧ್ಯೆ, ಈ ಘಟನೆ ಬಗ್ಗೆ ಮಾತನಾಡಿದ ವೈದ್ಯರು ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಡಾ. ವಿಕ್ರಾಂತ್ ಭುರಿಯಾ, ಕಬ್ಬಿಣದ ರಾಡ್‌ನಿಂದ ಚುಚ್ಚುವುದು ಸಾವಿಗೆ ಕಾರಣವಾಗಬಹುದು. ಇದು ನೋವನ್ನು ಕಡಿಮೆ ಮಾಡಲು ಒಂದು ಮಾರ್ಗವಾಗಿದೆ, ಆದರೆ ಸಮಸ್ಯೆಯೆಂದರೆ ಇದರಿಂದ ಸೋಂಕು ಹರಡುತ್ತದೆ, ಇದರಿಂದ ಸಾವಿಗೆ ಕಾರಣವಾಗಬಹುದು ಎಂದೂ ಹೇಳಿದರು.

ಇಂತಹ ಮೂಢನಂಬಿಕೆಯ ಪದ್ಧತಿಗಳು ಇನ್ನೂ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆ ಇಂತಹ ಪ್ರಕರಣಗಳ ಬಗ್ಗೆ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುವಂತೆ ಆ ಪ್ರದೇಶದ ಮುಖ್ಯ ವೈದ್ಯಾಧಿಕಾರಿಗೆ ಮನವಿ ಮಾಡುತ್ತೇನೆ ಎಂದು ಬಿಜೆಪಿ ವಕ್ತಾರ ಡಾ. ಹಿತೇಶ್ ವಾಜಪೇಯಿ ತಿಳಿಸಿದ್ದಾರೆ.

ಇದನ್ನು ಓದಿ: Raichur: ರಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ!

Latest Videos
Follow Us:
Download App:
  • android
  • ios