ನಿದ್ರೆ ಹಾಳು ಮಾಡಿದ್ದಕ್ಕೆ 1.5 ವರ್ಷದ ಕಂದಮ್ಮನನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ..!
ಪುಟ್ಟ ಮಕ್ಕಳನ್ನು ದೇವರು ಅನ್ನುತ್ತಾರೆ. ಆದರೆ, ಕ್ಷುಲ್ಲಕ ಕಾರಣಕ್ಕೆ ಪುಟ್ಟ ಮಗುವನ್ನು ಹೆತ್ತ ತಂದೆಯೇ ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಪಾಪಿ ತಂದೆ ಒಂದೂವರೆ ವರ್ಷದ ಮಗುವನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ. ಮನೆಯಲ್ಲಿ ಒಬ್ಬರೇ ಇದ್ದಾಗ ಮಗು ತನ್ನ ಮಧ್ಯಾಹ್ನದ ನಿದ್ದೆಗೆ ಭಂಗ ತಂದಿದೆ ಎಂದು ತಂದೆ ಮಗುವನ್ನು ಕೊಲೆ ಮಾಡಿದ್ದಾರೆ. ಹರಿಯಾಣ ರಾಜ್ಯದ ಫರಿದಾಬಾದ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಕೆಲಸ ಮುಗಿಸಿ ಹಿಂತಿರುಗಿದ ವ್ಯಕ್ತಿ ಮಧ್ಯಾಹ್ನ ಮಲಗಿದ್ದಾಗ ಮಗು ಅಳುತ್ತಲೇ ಇತ್ತು. ಈ ಹಿನ್ನೆಲೆ ಮಗುವಿನ ಅಳುವಿಗೆ ವಿಚಲಿತನಾದ ತಂದೆ ಕೋಪಗೊಂಡು ದಿಂಬಿನಿಂದ ಮಗುವಿನ ಕತ್ತು ಹಿಸುಕಿ ಅದರ ಸಾವಿಗೆ ಕಾರಣನಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಗೆ ಮಾತನಾಡಿದ ಫರಿದಾಬಾದ್ ಸ್ಟೇಷನ್ ಹೌಸ್ ಆಫೀಸರ್ (Station House Officer) ದಿನೇಶ್ ಈ ಪ್ರಕರಣವನ್ನು ಖಚಿತಪಡಿಸಿದ್ದಾರೆ ಮತ್ತು ಮಗುವನ್ನು ತನ್ನ ತಂದೆಯೇ ಕೊಂದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಮಗು ಅಳುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ್ದಕ್ಕೆ ನೆರೆಹೊರೆಯವರು ಅನುಮಾನಗೊಂಡು ಆ ವ್ಯಕ್ತಿಯ ಮನೆಗೆ ಹೋಗಿ ನೋಡಿದಾಗ ಮಗುವಿನ ಮೂಗು ಹಾಗೂ ಬಾಯಿಯಿಂದ ರಕ್ತಸ್ರಾವವನ್ನು ಕಂಡುಕೊಂಡರು ಎಂದೂ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೂಲ್ ಡ್ರಿಂಕ್ಸ್ ವಿಚಾರವಾಗಿ ಜಗಳ: 15 ವರ್ಷದ ಹುಡುಗಿಯನ್ನು ಶೂಟ್ ಮಾಡಿ ಕೊಂದ 9 ವರ್ಷದ ಬಾಲಕ..!
ಅಲ್ಲದೆ, ಮಗುವಿನ ಸ್ಥಿತಿಯನ್ನು ಕಂಡ ನೆರೆಹೊರೆಯವರು ಆ ಬಗ್ಗೆ ಆರೋಪಿಯನ್ನು ವಿಚಾರಿಸಿದಾಗ ಆ ಮಗುವಿನ ತಂದೆ ಗಾಬರಿಗೊಂಡು ಓಡಿಹೋಗಿದ್ದಾರೆ. ಆರೋಪಿಯ ಪತ್ನಿ ಹಾಗೂ ಆ ಮಗುವಿನ ಸಹೋದರ ರಕ್ಷಾ ಬಂಧನವನ್ನು ಆಚರಿಸಲು ತನ್ನ ಸಹೋದರನ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. "ಆರೋಪಿಯು ನೆರೆಹೊರೆಯವರಿಂದ ವಿಚಾರಿಸಿದಾಗ ಓಡಿಹೋದರು. ಆರೋಪಿಯ ಹೆಂಡತಿ ಮತ್ತು ಆ ದಂಪತಿಯ ಮತ್ತೊಂದು ಮಗು ರಕ್ಷಾ ಬಂಧನವನ್ನು ಆಚರಿಸಲು ಮಗುವಿನ ತಾಯಿ ಪ್ರಿಯಾ ಅವರ ಸಹೋದರನ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಆರೋಪಿ ತಂದೆಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಸ್ಟೇಷನ್ ಹೌಸ್ ಆಫೀಸರ್ ತಿಳಿಸಿದ್ದಾರೆ.
ಮನೆಗೆ ಹಿಂದಿರುಗಿದ ನಂತರ ಆರೋಪಿಯ ಪತ್ನಿ ಪ್ರಿಯಾ ತನ್ನ ಮಗು ಮೃತಪಟ್ಟಿದ್ದನ್ನು ಮತ್ತು ತನ್ನ ಮಗುವಿನ ಮೂಗು, ಕಿವಿ ಹಾಗೂ ಬಾಯಿಯಿಂದ ರಕ್ತಸ್ರಾವವಾಗುತ್ತಿರುವುದನ್ನು ಕಂಡರು. ಬಳಿಕ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮಗುವಿನ ಶವವನ್ನು ಪೋಸ್ಟ್‌ಮಾರ್ಟಂಗೆ ಕಳಿಸಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ ಬೆಂಕಿ ಹಚ್ಚಿದ ಪತ್ನಿ..!
ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ತಂದೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಾವಿಗೆ ಕಾರಣ ದೃಢಪಡಿಸಲು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, "ನಾವು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ. ಆರೋಪಿಯನ್ನು ಆದಷ್ಟು ಬೇಗ ಬಂಧಿಸಲಾಗುವುದು" ಎಂದು ಪೊಲೀಸ್ ವಕ್ತಾರ ಸುಬೆ ಸಿಂಗ್ ತಿಳಿಸಿದ್ದಾರೆ. ಈ ಮಧ್ಯೆ, ಆರೋಪಿ ಗಂಡ ಹಾಗೂ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ರೀತಿ, ಗುರುವಾರ ರಾತ್ರಿಯೂ ಜಗಳ ನಡೆದಿತ್ತು ಎಂದು ಹೆಂಡತಿ ಆರೋಪಿಸಿದ್ದು, ಅಲ್ಲದೆ, ಒಂದು ಮಗುವನ್ನೂ ಬೇಕಂತಲೇ ಮನೆಯಲ್ಲಿ ಇರಿಸಿಕೊಂಡಿದ್ದರು ಎಂದೂ ಹೇಳಿಕೊಂಡಿದ್ದಾರೆ.