ಉತ್ತರ ಪ್ರದೇಶದ ಮೌ ಜಿಲ್ಲೆಯ ಕೋಪಗಂಜ್ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಶಹಪುರ್ ಗ್ರಾಮದಲ್ಲಿ ಮನೆಗೆ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬರು ಮಹಿಳೆ, ಒಬ್ಬರು ವಯಸ್ಕರು ಮತ್ತು 3 ಅಪ್ರಾಪ್ತ ವಯಸ್ಕರು ಸೇರಿದಂತೆ ಒಂದೇ ಕುಟುಂಬದ 5 ಸದಸ್ಯರು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ (Uttar Pradesh) ಮೌವಿನ (Mau) ಶಹಪುರ (Shahpur) ಗ್ರಾಮದಲ್ಲಿ ಮನೆಯಲ್ಲಿ ಬೆಂಕಿ (Fire) ಕಾಣಿಸಿಕೊಂಡು ಒಂದೇ ಕುಟುಂಬದ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮಂಗಳವಾರ ಈ ಘಟನೆ ನಡೆದಿದ್ದು, ಮಹಿಳೆ (Lady), ಒಬ್ಬರು ವಯಸ್ಕ ಮತ್ತು 3 ಅಪ್ರಾಪ್ತರು ಸೇರಿದಂತೆ ಕುಟುಂಬದ 5 ಸದಸ್ಯರು (Members) ಬಲಿಯಾಗಿದ್ದಾರೆ. ಮಾಹಿತಿ ಲಭಿಸಿದ ಕೂಡಲೇ ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. 

Add Asianetnews Kannada as a Preferred SourcegooglePreferred

ಉತ್ತರ ಪ್ರದೇಶದ ಮೌ ಜಿಲ್ಲೆಯ ಕೋಪಗಂಜ್ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಶಹಪುರ್ ಗ್ರಾಮದಲ್ಲಿ ಮನೆಗೆ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬರು ಮಹಿಳೆ, ಒಬ್ಬರು ವಯಸ್ಕರು ಮತ್ತು 3 ಅಪ್ರಾಪ್ತ ವಯಸ್ಕರು ಸೇರಿದಂತೆ ಒಂದೇ ಕುಟುಂಬದ 5 ಸದಸ್ಯರು ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ, ವೈದ್ಯಕೀಯ ಮತ್ತು ಪರಿಹಾರ ತಂಡಗಳೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಸುದ್ದಿಸಂಸ್ಥೆ ಎಎನ್‌ಐ ಮಾಹಿತಿ ನೀಡಿದೆ. 

ಇದನ್ನು ಓದಿ: Andhra Pradesh: ಫಾರ್ಮಾ ಕಂಪನಿ ಲ್ಯಾಬ್‌ನಲ್ಲಿ ಅಗ್ನಿ ಅವಘಡ: ನಾಲ್ವರ ದುರ್ಮರಣ..!

Scroll to load tweet…

ಸ್ಟೌನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಯು ತಿಳಿಸಿದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೆ, ಮೃತ ವ್ಯಕ್ತಿಗಳಿಗೆ ತಲಾ ₹ 4 ಲಕ್ಷ ನೆರವು ನೀಡುವುದಾಗಿಯೂ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. 

ಇನ್ನು, ಪ್ರತ್ಯೇಕ ಘಟನೆಯೊಂದರಲ್ಲಿ, ಡಿಸೆಂಬರ್ 11 ರಂದು ವರದಕ್ಷಿಣೆಗೆ ಕಿರುಕುಳ ನೀಡಿದ ಪತಿಯ ಕುಟುಂಬಸ್ಥರು ಸೊಸೆ ಹಾಗೂ ಮಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ 25 ವರ್ಷದ ಮಹಿಳೆ ಮತ್ತು ಆಕೆಯ 3 ವರ್ಷದ ಮಗಳು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ 2018 ರಲ್ಲಿ ವಿವಾಹವಾಗಿದ್ದರು ಮತ್ತು ವರದಕ್ಷಿಣೆಗಾಗಿ ಆಕೆಯ ಅತ್ತೆ-ಮಾವಂದಿರು ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಊರಗೌಡ್ತಿಯ ಶವಸಂಸ್ಕಾರಕ್ಕೆ ಬಂದವರಿಗೆ ಶಾಕ್: ಶವಯಾತ್ರೆ ವೇಳೆ ಸಿಡಿದ ಪಟಾಕಿಯಿಂದ ಭಾರೀ ಅಗ್ನಿ ಅವಘಡ

ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದೂ ತಿಳಿದುಬಂದಿದೆ. 

ಇನ್ನು, ಈ ದುರಂತದ ಸುದ್ದಿ ಸಮುದಾಯದ ಮೂಲಕ ಆಘಾತ ಸೃಷ್ಟಿ ಮಾಡಿದೆ ಮತ್ತು ಕುಟುಂಬಕ್ಕೆ ಸಾಂತ್ವನ ಹರಿದುಬರುತ್ತಿದೆ. ಇದು ಅಗ್ನಿ ಸುರಕ್ಷತಾ ಕ್ರಮಗಳ ಮಹತ್ವವನ್ನು ನೆನಪಿಸುತ್ತದೆ ಮತ್ತು ಅಂತಹ ದುರಂತಗಳು ಸಂಭವಿಸದಂತೆ ಎಚ್ಚರವಹಿಸುವ ಅವಶ್ಯಕತೆಯಿದೆ.

ಇದನ್ನು ಓದಿ: Secunderabad: ಇ-ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 8 ಸಾವು, ಮೇಲಿನ ಮಹಡಿಗಳಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿದ ಹಲವರು