Asianet Suvarna News Asianet Suvarna News

ಕೇರಳದಲ್ಲಿ ಅಪಘಾತ : ಪ್ರವಾಸಕ್ಕೆ ತೆರಳಿದ್ದ JDS ಮುಖಂಡ ಸೇರಿ ಮೂವರ ದುರ್ಮರಣ

ಚಿತ್ರದುರ್ಗದಿಂದ ಕೇರಳ ಪ್ರವಾಸಕ್ಕೆ ತೆರಳಿದ್ದ ಮೂವರು ಜೆಡಿಎಸ್ ನಗರಸಭಾ ಸದಸ್ಯ ಹಾಗೂ ಮತ್ತಿಬ್ಬರು ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ಕೇರಳದಲ್ಲಿ ನಡೆದಿದೆ.

3 From Karnataka Killed In Car Accident In Kerala
Author
Bengaluru, First Published Jan 15, 2020, 1:27 PM IST
  • Facebook
  • Twitter
  • Whatsapp

ಮಲಪ್ಪುರಂ [ಜ.15]: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಚಿತ್ರದುರ್ಗ ಮೂಲದ ಮೂವರು ಓರ್ವ ಜೆಡಿಎಸ್ ಮುಖಂಡ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತ್ರಿಶೂರ್​-ಕೋಯಿಕೋಡ್​ ಹೆದ್ದಾರಿಯಲ್ಲಿ ನಡೆದಿದೆ.

ತ್ರಿಶೂರಿನ ವಾಲೆಂಕೇರಿ ಸಮೀಪದ ಪಂಡಿಕಸಲ ಚೋಲಾವಲವು ಎಂಬಲ್ಲಿ ಅಪಘಾತವಾಗಿದ್ದು,  ಚಿತ್ರದುರ್ಗದಿಂದ ಪ್ರವಾಸಕ್ಕೆ ತೆರಳಿದ್ದ ಹಿರಿಯೂರಿನ ಜೆಡಿಎಸ್ ನ ನಗರಸಭಾ ಸದಸ್ಯ ಎ. ಪಾಂಡುರಂಗ,  ಮುಖಂಡ ಪ್ರಭಾಕರ್, ಅವಿನಾಶ್ ಎಂಬುವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇಂಜೆಕ್ಷನ್ ಕೊಟ್ಟು ಕೊಂದ ಗಂಡ : ಕಣ್ಮುಂದೆಯೇ ನರಳಿ ಪ್ರಾಣ ಬಿಟ್ಲು ಹೆಂಡ್ತಿ...

ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ವಾಲೆಂಕೇರಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಟಿ ಪರಾರಿ ಕೇಸ್: ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಸಾವು, ನೋಡಲು ಬಾರದ ನಾನ್‌ಸೆನ್ಸ್‌ ನಟಿ...  

ವೇಗವಾಗಿ ಬಂದ ಲಾರಿ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜುಗುಜ್ಜಾಗಿದೆ. 

Follow Us:
Download App:
  • android
  • ios