ರಾಮನಗರ [ಜ.15]: ದಾಂಪತ್ಯ ಕಲಹ ಹಿನ್ನೆಲೆ ಪತ್ನಿಗೆ ಚುಚ್ಚು ಮದ್ದು ಕೊಟ್ಟು ಗಂಡನೇ ಕೊಲೆ‌ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ. 

ಜಿಲ್ಲೆಯ ಹನುಮಂತ ನಗರದಲ್ಲಿ ಘಟನೆ ನಡೆದಿದ್ದು, ಪತ್ನಿ  ದೀಪಾಳನ್ನು (24) ಪತಿ  ವೆಂಕಟೇಶ್ (30) ಕೊಲೆ ಮಾಡಿದ್ದಾನೆ. 

ಆರೋಪಿ ವೆಂಕಟೇಶ್ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರನಾಗಿ‌ ಕೆಲಸ ಮಾಡುತ್ತಿದ್ದು, 11 ತಿಂಗಳ ಹಿಂದೆಯಷ್ಟೆ ವಡ್ಡರಹಳ್ಳಿ ದೀಪಾಳೊಂದಿಗೆ ಮದುವೆ ಮಾಡಲಾಗಿತ್ತು. 

ಹುಷಾರು.... ಬೀಗ ಒಡೆಯದೇ 5 ಕ್ವಿಂಟಾಲ್ ಕೆಂಪುಬಂಗಾರ ದೋಚಿದ ಕಳ್ಳರು!...

ವೆಂಕಟೇಶ್ -ದೀಪಾ ನಡುವೆ ಮದುವೆಯಾದಗಿನಿಂದಲೂ ನಿತ್ಯ ಜಗಳ ನಡೆಯುತ್ತಿತ್ತು. ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ನ್ಯಾಯ ತೀರ್ಮಾನ ವಾಗಿತ್ತು. ಾದರೂ ಕಲಹ ಮುಂದುವರಿದಿತ್ತು. 

ನಟಿ ಪರಾರಿ ಕೇಸ್: ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಸಾವು, ನೋಡಲು ಬಾರದ ನಾನ್‌ಸೆನ್ಸ್‌ ನಟಿ...

ಮಂಗಳವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ದೀಪಾಳಿಗೆ ಗೊತ್ತಿಲ್ಲದೇ ಚುಚ್ಚು ಮದ್ದು ಕೊಟ್ಟಿದ್ದಾನೆ. ಇದರಿಂದ ನರಳಿ ನರಳಿ ಕೊನೆಗೆ ದೀಪಾ ಮೃತಪಟ್ಟಿದ್ದಾಳೆ. 

ಈ ಸಂಬಂಧ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.