1994ರಲ್ಲಿ ಇಬ್ಬರು ಸಹೋದರರಿಂದ ಅತ್ಯಾಚಾರ ಅತ್ಯಾಚಾರದ ಬಳಿಕ ಮಗು ಹೆತ್ತ ಮಹಿಳೆ ಪುತ್ರನ ದತ್ತು ನೀಡಿ ಬೇರೆ ಮದುವೆ ಮಾಡಿಸಿದ ಕುಟುಂಬ ಅತ್ಯಾಚಾರ ವಿಚಾರ ತಿಳಿದು ದೂರಾದ ಪತಿ
ಶಹಜಹಾನ್‌ಪುರ(ಏ.7): 28 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣವೊಂದರಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಆರೋಪಿಗಳು ಜೈಲು ಪಾಲಾಗುವ ಸಾಧ್ಯತೆ ಇದೆ. 1994ರಲ್ಲಿ ನಡೆದ ಪ್ರಕರಣ ಇದಾಗಿದ್ದು, ಸಂತ್ರಸ್ತೆಯೂ 13 ವರ್ಷದವಳಿದ್ದಾಗ ಇಬ್ಬರು ಸಹೋದರರು ಆಕೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದರು, ಪರಿಣಾಮ ಬಾಲಕಿ ಗರ್ಭಿಣಿಯೂ ಆಗಿದ್ದಲ್ಲದೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಿದಾಗ ಅತ್ಯಾಚಾರವೆಸಗಿದ ಇಬ್ಬರು ಆರೋಪಿಗಳ ಪೈಕಿ ಒಬ್ಬರ ಡಿಎನ್‌ಎಗೆ ಮಗುವಿನ ಡಿಎನ್‌ಎ ಹೋಲಿಕೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ವರ್ಷ ಮಾರ್ಚ್‌ನಲ್ಲಿ ಆರೋಪಿಗಳಾದ ಹಸನ್ (Hasan) ಮತ್ತು ಗುಡ್ಡು (Guddu)ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಗಳ ಡಿಎನ್‌ಎ ಪರೀಕ್ಷೆಯನ್ನು ನಡೆಸಲಾಗಿದೆ. ಸಂತ್ರಸ್ತೆಯ ಮಗ ಮತ್ತು ಇಬ್ಬರು ಆರೋಪಿಗಳ ಮಾದರಿಗಳನ್ನು ಪರಿಶೀಲಿಸಲಾಗಿದೆ. ಗುಡ್ಡುವಿನ ಡಿಎನ್‌ಎ ಸಂತ್ರಸ್ತೆಯ ಮಗನಿಗೆ ಹೊಂದಿಕೆಯಾಗುತ್ತಿದೆ ಎಂದು ವರದಿ ದೃಢಪಡಿಸಿದೆ. ಈ ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ತಂಡ ರಚಿಸಿದ್ದೇವೆ. ಪೊಲೀಸರ ಪ್ರಕಾರ, ಮಹಿಳೆಯು 1994 ರಲ್ಲಿ ತನ್ನ ಸಂಬಂಧಿಕರೊಂದಿಗೆ ಶಹಜಹಾನ್‌ಪುರದಲ್ಲಿ ನೆಲೆಸಿದ್ದಳು ಮತ್ತು ಆರೋಪಿಗಳು ಕೂಡ ಅದೇ ನೆರೆಹೊರೆಯಲ್ಲಿ ವಾಸಿಸುತ್ತಿದ್ದರು ಮತ್ತು ಅವಳಿಗಿಂತ ದೊಡ್ಡವರು ಎಂದು ಪೊಲೀಸ್ ಅಧೀಕ್ಷಕ (ನಗರ) ಸಂಜಯ್ ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಆಕೆ ಗರ್ಭಿಣಿಯಾದಾಗ ಅತ್ಯಾಚಾರ ನಡೆದಿರುವ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿದು ಬಂದಿದ್ದು, ಅದೇ ವರ್ಷ ಮಗುವಿಗೆ ಆಕೆ ಜನ್ಮ ನೀಡಿದ್ದಾಳೆ ಆದಾಗ್ಯೂ, ಮಗುವನ್ನು ಅವಳಿಂದ ಬೇರ್ಪಡಿಸಲಾಯಿತು ಮತ್ತು ಆ ಮಗುವನ್ನು ಮಕ್ಕಳಿಲ್ಲದ ದಂಪತಿಗಳು ದತ್ತು ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ಮಹಿಳೆಯನ್ನು ಬೇರೆ ವ್ಯಕ್ತಿಗೆ ವಿವಾಹ ಮಾಡಿ ಕೊಡಲಾಯಿತು. ಆದರೆ ಅತ್ಯಾಚಾರ ಘಟನೆಯ ಬಗ್ಗೆ ಪತಿಗೆ ತಿಳಿದಾಗ, ಪತಿಯೂ ಅವಳನ್ನು ತೊರೆದನು. ಇದಾಗಿ ಹಲವು ವರ್ಷಗಳವರೆಗೆ ಮಹಿಳೆ ಒಂಟಿಯಾಗಿಯೇ ಜೀವಿಸುತ್ತಿದ್ದರು. ಅಲ್ಲದೇ ಕೆಲ ವರ್ಷಗಳ ಹಿಂದೆ ತನ್ನ ಪುತ್ರನ ಸಂಪರ್ಕಕ್ಕೆ ಬಂದ ಮಹಿಳೆ ಆತನಿಗೆ ಈ ವಿಚಾರವನ್ನು ತಿಳಿಸಿದಳು. ಈ ವೇಳೆ ಪುತ್ರ ತಾಯಿಗೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪ್ರೋತ್ಸಾಹಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.
Kerala Adoption Battle: ಕರುಳ ಕುಡಿಗಾಗಿ ಹೋರಾಡಿ ಗೆದ್ದ ಅಮ್ಮ, ಕಂದ ಮರಳಿ ತಾಯಿ ಮಡಿಲಿಗೆ!
ಮಹಿಳೆ ಮೊದಲು ಈ ವಿಷಯದ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದಳು ಮತ್ತು ನಂತರ ಎಫ್‌ಐಆರ್ (FIR) ದಾಖಲಿಸಲು ಕೋರಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. ಅತ್ಯಾಚಾರ ಆರೋಪಿಗಳು ಶಹಜಹಾನ್‌ಪುರದಲ್ಲಿ (Shahjahanpur) ಸಣ್ಣ ವ್ಯಾಪಾರ ನಡೆಸುತ್ತಿದ್ದು, ಈಗಲೂ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಎನ್‌ಎ ವರದಿ ನಂತರ ಕಳೆದ ವಾರದಿಂದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
Adoption Battle| 1 ವರ್ಷದ ಮಗುವಿಗಾಗಿ ಕೇರಳ- ಆಂಧ್ರ ಜಗಳ, DNA ಟೆಸ್ಟ್‌ವರೆಗೆ ತಲುಪಿದ ಕೇಸ್!
ಮಧ್ಯಪ್ರದೇಶದ ರೇವಾ ಜಿಲ್ಲೆಯ ಸರ್ಕ್ಯೂಟ್ ಹೌಸ್‌ನಲ್ಲಿ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯೊಬ್ಬಳು ಪ್ರಖ್ಯಾತ ಕಥಾವಾಚಕ ಮಹಂತ್ ಸೀತಾರಾಮ್ ದಾಸ್ ಅವರ ವಿರುದ್ಧ ತನಗೆ ಬಲವಂತವಾಗಿ ಮದ್ಯ ಕುಡಿಸಿ ಸರ್ಕ್ಯೂಟ್ ಹೌಸ್‌ನಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಆರೋಪಿ ಇಲ್ಲಿನ ಪ್ರಮುಖ ಸಾಧುವಾಗಿದ್ದು, ಸದ್ಯ ರೇವಾದಿಂದ ತಲೆಮರೆಸಿಕೊಂಡಿದ್ದಾನೆ.
