ಮುಂಡಗೋಡ: ಗೋಡಂಬಿ ಕೊಡಿಸೋದಾಗಿ ನಂಬಿಸಿ 28 ಲಕ್ಷ ವಂಚನೆ

* ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದ ಘಟನೆ
* 28 ಲಕ್ಷ ಹಣದ ಬ್ಯಾಗ್‌ ಕಸಿದುಕೊಂಡು ಪರಾರಿಯಾದ ವಂಚಕರು
* ಈ ಸಂಬಂಧ ಮುಂಡಗೋಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು
 

28 lakh Fraud in The Name of Cashew at Mundgod in Uttara Kannada grg

ಮುಂಡಗೋಡ(ಜು.17): ಗೋಡಂಬಿ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು 28 ಲಕ್ಷ ನಗದುಳ್ಳ ಬ್ಯಾಗ್‌ನ್ನು ಎಗರಿಸಿ ಪರಾರಿಯಾದ ಘಟನೆ ತಾಲೂಕಿನ ಮಳಗಿ ಗ್ರಾಮ ಧರ್ಮಾ ಜಲಾಶಯ ಬಳಿ ಶುಕ್ರವಾರ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಶಿವನಗೌಡ ಪಾಟೀಲ ಹಾಗೂ ಇವರ ಸ್ನೇಹಿತ ಅಸ್ಲಂ ನದಾಫ್‌ ಇಬ್ಬರು 28 ಲಕ್ಷ ಹಣದೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ಇವರನ್ನು ಭೇಟಿಯಾದ ವಂಚಕರ ತಂಡ ಗೋಡಂಬಿ ಕೊಡಿಸುವುದಾಗಿ ನಂಬಿಸಿ ಧರ್ಮಾ ಜಲಾಶಯ ಬಳಿ ಕರೆದುಕೊಂಡು ಹೋಗಿದೆ. ಅಲ್ಲಿ ಇವರ ಬಳಿ ಇದ್ದ 28 ಲಕ್ಷ ಹಣದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ವಂಚಕರ ತಂಡದಲ್ಲಿ ನಾಲ್ವರಿಗಿಂತ ಅಧಿಕ ಜನರಿದ್ದರು ಎನ್ನಲಾಗಿದೆ.
ಈ ಕುರಿತು ಮುಂಡಗೋಡ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಹುಬ್ಬಳ್ಳಿ; 'ಮಿಂಚುಳ್ಳಿ ಗಾಯಕಿ' ಬಣ್ಣದ ಮಾತಿಂದ ಮರುಳು ಮಾಡಿ ಎಲ್ಲವ ದೋಚಿದಳು!

ಘಟನಾ ಸ್ಥಳಕ್ಕೆ ಶಿರಸಿ ಡಿವೈಎಸ್‌ಪಿ ರವಿ ನಾಯ್ಕ, ಮುಂಡಗೋಡ ಸಿಪಿಐ ಪ್ರಭುಗೌಡ, ಪಿಎಸ್‌ಐ ಎನ್‌.ಡಿ. ಜಕ್ಕಣ್ಣವರ ಹಾಗೂ ಬಸವರಾಜ ಮಬನೂರ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಕೂಡ ಆಗಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ.

ಗೋಡಂಬಿ ಖರೀದಿಸಲು ಲಕ್ಷಾಂತರ ರುಪಾಯಿಯೊಂದಿಗೆ ಯಾರೋ ಅಪರಿಚಿತರ ಬಳಿ ಹೋಗಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಗೋಡಂಬಿ ಬದಲಾಗಿ ಗಟ್ಟಿ ಬಂಗಾರ ಕೊಡುವುದಾಗಿ ಕರೆಸಿ ಹಣದ ಚೀಲ ಎಗರಿಸಿ ಪರಾರಿಯಾಗಿರಬಹುದು ಎಂಬ ಮಾತು ಸ್ಥಳಿಯರಿಂದ ಕೇಳಿ ಬರುತ್ತಿದೆ. ಪೊಲೀಸ್‌ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
 

Latest Videos
Follow Us:
Download App:
  • android
  • ios