ಮನಿಷ ಹಾಗೂ ಶೀಲತ ಶೆಟ್ಟಿ ದಂಪತಿಗೆ 10 ತಿಂಗಳದ ಒಂದು ಹೆಣ್ಣು ಮಗು ಇದೆ. ಪತಿ ವಿದೇಶ ಪ್ರವಾಸದಲ್ಲಿದ್ದಾಗ ಈ ಘಟನೆ ಜರುಗಿದ್ದು, ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟಪ್ರಭಾ(ಅ.03):  ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ. ಸ್ಥಳೀಯ ಮಹಾಂತೇಶ ನಗರದ ನಿವಾಸಿ ಹಾಗೂ ಖ್ಯಾತ ಉದ್ಯಮಿ ಜಯಶೀಲ ಶೆಟ್ಟಿ ಅವರ ಸೊಸೆ ಶೀತಲ್ ಶೆಟ್ಟಿ (27) ಮೃತ ದುರ್ದೈವಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶೀತಲ್ ಶೆಟ್ಟಿಯವರು ಉದ್ಯಮಿ ಜಯಶೀಲ ಶೆಟ್ಟಿ ಅವರ ಪುತ್ರ ಮನಿಷ ಇವರೊಂದಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. 

ರಾತ್ರಿ 10 ಗಂಟೆಗೆ ಮೇಲಿಂದ ಬಿತ್ತು ಹೆಣ..! ಗಣೇಶ ಹಬ್ಬಕ್ಕೆ ಬಂದವಳು ಹೆಣವಾಗಿದ್ಲು..!

ಮನಿಷ ಹಾಗೂ ಶೀಲತ ಶೆಟ್ಟಿ ದಂಪತಿಗೆ 10 ತಿಂಗಳದ ಒಂದು ಹೆಣ್ಣು ಮಗು ಇದೆ. ಪತಿ ವಿದೇಶ ಪ್ರವಾಸದಲ್ಲಿದ್ದಾಗ ಈ ಘಟನೆ ಜರುಗಿದ್ದು, ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.