ಭೋಪಾಲ್(ಡಿ. 21)  ಮಲತಾಯಿಯ ಮೇಲೆ ಮಲಮಗನೇ ಅತ್ಯಾಚಾರ ಎಸಗಿರುವ ಪ್ರಕರಣ ಮಧ್ಯಪ್ರದೇಶದಿಂದ ವರದಿಯಾಗಿದೆ. ಮಲಮಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದುನ 24 ವರ್ಷದ ವಿಧವೆ ದೂರು ಸಲ್ಲಿಸಿದ್ದಾರೆ.

 ಮಳೆಯ ಸಂಬಂಧಿಕರಿಗೆ ಘೋರ ಕೃತ್ಯದ ಬಗ್ಗೆ  ಗೊತ್ತಾದರೂ ಮೊದಲು ದೂರು ಕೊಡುವುದನ್ನು ತಡೆದಿದ್ದಾರೆ. ಅತ್ಯಾಚಾರ ಸಂತ್ರಸ್ತೆ ಎಂದರೆ ಸಮಾಜ ಬೇರೆ ಕಣ್ಣಿನಿಂದ ನೋಡುತ್ತದೆ ಎಂದು ಭಾವಿಸಿ ಕೆಲಸ ಮಾಡಿದ್ದರು. ಆದರೆ ನೋವು ಉಂಡ ಮಹಿಳೆ ಧೈರ್ಯವಾಗಿ ಪೊಲೀಸರ ಮೊರೆ ಹೋಗಿ ನ್ಯಾಯ ಕೇಳಿದ್ದಾರೆ.

ಟೆಂಟ್ ಹೌಸ ನಲ್ಲಿ ಕೆಲಸ ಮಾಡುವ ಯುವತಿಯನ್ನು 25 ವರ್ಷದ  ಆರೋಪಿ ಮದುವೆಯಾಗಿದ್ದ.  ಇನ್ನೊಂದು ಕಡೆ ಆರೋಪಿಯ ತಂದೆ  ಪತ್ನಿ ಸಾವಿನ ನಂತರ ಮತ್ತೊಬ್ಬರನ್ನು ಮದುವೆಯಾಗಿದ್ದ.  ಮದುವೆಯಾಗಬೇಕಿದ್ದರೆ 24 ವರ್ಷದ ಮಹಿಳೆಗೆ ಇಬ್ಬರು ಮಕ್ಕಳಿದ್ದರು. ಹಾಗಾಗಿ ಸಂಬಂಧದಲ್ಲಿ ಈಕೆ ತಾಯಿಯಾಗಿದ್ದಳು. ಕೆಲ ದಿನಗಳ ಹಿಂದೆ ತಂದೆ ತೀರಿಕೊಂಡಿದ್ದರು.

ಸೆಕ್ಸ್ ವರ್ಕರ್ ಇಲ್ಲ ಎಂದಿದ್ದಕ್ಕೆ ಹೋಟೆಲ್ ಸಿಬ್ಬಂದಿಯನ್ನೇ ಮೇಲೆ ದೌರ್ಜನ್ಯ

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಆರೋಪಿ ಮಲತಾಯಿಯ ಕೋಣೆಗೆ ನುಗ್ಗಿದ್ದಾನೆ. ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಮಕ್ಕಳು ಇನ್ನೊಂದು ಕೋಣೆಯಲ್ಲಿ ಮಲಗಿದ್ದವು. ಒಂದು ವೇಳೆ ವಿಚಾರ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆಯನ್ನು ಹಾಕಿ ಬಂದಿದ್ದಾನೆ.

ಮರುದಿನ ಮಹಿಳೆ ಸಂಬಂಧಿಕರಿಗೆ ವಿಚಾರ ಹೇಳಿದ್ದಾರೆ. ಆದರೆ ಅವರು ಸಮಾಜದ ಭಯಕ್ಕೆ  ವಿಚಾರ ಯಾರಿಗೂ ತಿಳಿಸುವುದು ಬೇಡ ಎಂದಿದ್ದಾರೆ. ಆದರೆ ಮಹಿಳೆ ಠಾಣೆಗೆ ಆಗಮಿಸಿ ಲಿಖಿತ ದೂರು ನೀಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.