ಜೈಪುರ(ಡಿ. 20)   ಉದ್ಯಮಿಯೊರ್ವರನ್ನು ಕೊಲ್ಲಲು ಸುಪಾರಿ ಪಡೆದುಕೊಂಡು ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ  ಕಾಮುಕರು ಸೆಕ್ಸ್ ವರ್ಕರ್ ಇಲ್ಲ ಅಂದಿದ್ದಕ್ಕೆ ಹೋಟೆಲ್ ಮಹಿಳಾ ಸಿಬ್ಬಂದಿಯನ್ನೇ ಗ್ಯಾಂಗ್ ರೇಪ್ ಮಾಡಿದ್ದಾರೆ. 

ರಾಜಸ್ಥಾನದ ನೀಮ್ರಾನಾದಲ್ಲಿ ಈ ಘಟನೆ ನಡೆದಿದೆ. ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಆರೋಪಿಗಳಾದ ಪ್ರಿನ್ಸ್ ತಿವಾರಿ, ದನ್ವೀರ್,  ಲೋಕೇಶ್, ರಾಹುಲ್ ಮತ್ತು ನರೇಶ್ ಗುಜ್ಜರ್ ನನ್ನು ಪೊಲೀಸರು ಬಂಧಿಸಿದ್ದಾರೆ. 

ಮದುವೆಯಾಗುವುದಾಗಿ ನಂಬಿಸಿ ರೇಪ್.. ಎಲ್ಲವೂ ಅತ್ಯಾಚಾರ ಅಲ್ಲ

ಉದ್ಯಮಿಯೊಬ್ಬರನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದೆವು ಎಂದು ತ್ರಿಸ್ಟಾರ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದವರು ಬಾಯಿ ಬಿಟ್ಟಿದ್ದಾರೆ.

ಹೋಟೆಲ್ ರೂಂ ಪಡೆದ ನಂತರ ಸೆಕ್ಸ್ ವರ್ಕರ್ ರನ್ನು ಕಳುಹಿಸುವಂತೆ ಕೇಳಿದ್ದಾರೆ. ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದಕ್ಕೆ ಆರೋಪಿಗಳು ಮಹಿಳಾ ಸಿಬ್ಬಂದಿ ಮಲಗಿದ್ದ ರೂಂಗೆ ನುಗ್ಗಿದ್ದಾರೆ. ಇಬ್ಬರು ರೂಂನ ಒಳ ಹೋಗಿ ಗನ್ ತೋರಿಸಿ ಇಬ್ಬರು ಮಹಿಳಾ ಕ್ರೌರ್ಯ ಮೆರೆದಿದ್ದಾರೆ.  

ಘಟನೆ ವಿವರಣೆಯನ್ನು ಪೊಲೀಸರಿಗೆ ಮ್ಯಾಜೇಜರ್ ನೀಡಿದ್ದು ಆರೋಪಿಗಳನ್ನು  ಬಂಧಿಸಿ ಕೊಲೆ ಸಂಚಿನ ವಿಚಾರವನ್ನು ಬಾಯಿ ಬಿಡಿಸಲಾಗುತ್ತಿದೆ.