ಕೆಂಗೇರಿ ಸ್ಯಾಟ್‌ಲೈಟ್‌ನ ಅರುಂಧತಿ ನಗರದ ನಿವಾಸಿ ಚೇತನ್ ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿದ ಬಳಿಕ ಪೊಲೀಸರಿಗೆ ಮೃತನ ಗೆಳೆಯ ಸನ್‌ಸಿಟಿಯ ನಿವಾಸಿ ಅಮಾನುಲ್ಲಾ ಶರಣಾಗಿದ್ದಾನೆ. ಕೊಮ್ಮಘಟ್ಟದ ಮೈದಾನ ಸಮೀಪ ಮಂಗಳವಾರ ರಾತ್ರಿ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಈ ಗೆಳೆಯರ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರು(ಆ.10): ಹಳೇ ದ್ವೇಷದ ಹಿನ್ನೆಲೆಯಲ್ಲಿ ಪರಿಚಿತ ಯುವಕನನ್ನು ಹತ್ಯೆಗೈದು ಬಳಿಕ ಕೆಂಗೇರಿ ಠಾಣೆಗೆ ಪೊಲೀಸರಿಗೆ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಮಧ್ಯವರ್ತಿಯೊಬ್ಬ ಶರಣಾಗಿರುವ ಘಟನೆ ನಡೆದಿದೆ.
ಕೆಂಗೇರಿ ಸ್ಯಾಟ್‌ಲೈಟ್‌ನ ಅರುಂಧತಿ ನಗರದ ನಿವಾಸಿ ಚೇತನ್ (25) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿದ ಬಳಿಕ ಪೊಲೀಸರಿಗೆ ಮೃತನ ಗೆಳೆಯ ಸನ್‌ಸಿಟಿಯ ನಿವಾಸಿ ಅಮಾನುಲ್ಲಾ ಶರಣಾಗಿದ್ದಾನೆ. ಕೊಮ್ಮಘಟ್ಟದ ಮೈದಾನ ಸಮೀಪ ಮಂಗಳವಾರ ರಾತ್ರಿ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಈ ಗೆಳೆಯರ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಚೇತನ್‌ಗೆ ಕಲ್ಲಿನಿಂದ ಹೊಡೆದು ಹತ್ಯೆಗೈದು ಬಳಿಕ ರಾತ್ರಿ 11 ಗಂಟೆಗೆ ಕೆಂಗೇರಿ ಠಾಣೆಗೆ ತೆರಳಿ ಅಮಾನುಲ್ಲಾ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Davanagere: ಕೊಲೆ ಆರೋಪಿ 8 ಕಿ.ಮೀ. ದೂರವಿದ್ದರೂ ಪತ್ತೆಹಚ್ಚಿದ ಪೊಲೀಸ್ ಡಾಗ್ ತಾರಾ
ಹಳೇ ಗಲಾಟೆ ದ್ವೇಷಕ್ಕೆ ಬಲಿ
ಜ್ಞಾನಭಾರತಿ ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಯಾಗಿದ್ದ ಅಮಾನುಲ್ಲಾ, ತನ್ನ ಕುಟುಂಬದ ಜತೆ ಸನ್ ಸಿಟಿಯಲ್ಲಿ ನೆಲೆಸಿದ್ದ. ಹಲವು ದಿನಗಳಿಂದ ಸ್ಥಳೀಯ ವಿಚಾರವಾಗಿ ಚೇತನ್ ಹಾಗೂ ಅಮಾನುಲ್ಲಾ ಮಧ್ಯೆ ಮನಸ್ತಾಪವಾಗಿತ್ತು. ಕಳೆದ ವರ್ಷ ಗಣೇಶೋತ್ಸವದ ವೇಳೆ ಇಬ್ಬರು ಗಲಾಟೆ ಸಹ ಮಾಡಿಕೊಂಡಿದ್ದರು. ಇದಾದ ಬಳಿಕ ಪರಸ್ಪರ ಕತ್ತಿ ಮಸೆಯುತ್ತಿದ್ದರು. ಕೊಮ್ಮಘಟ್ಟದ ಮೈದಾನ ಬಳಿ ಮಂಗಳವಾರ ರಾತ್ರಿ ಚೇತನ್ ಹಾಗೂ ಅಮಾನುಲ್ಲಾ ಮುಖಾಮುಖಿಯಾಗಿದ್ದಾರೆ. ಆಗ ಮದ್ಯದ ಅಮಲಿನಲ್ಲಿದ್ದ ಅವರ ಮಧ್ಯೆ ಹಳೇ ಗಲಾಟೆ ವಿಷಯ ಪ್ರಸ್ತಾಪವಾಗಿ ಜಗಳ ಶುರುವಾಗಿದೆ. ಈ ಹಂತದಲ್ಲಿ ಕೆರಳಿದ ಅಮಾನುಲ್ಲಾ, ಚೇತನ್ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಬಳಿಕ ಕೆಂಗೇರಿ ಠಾಣೆಗೆ ತೆರಳಿ ತಾನು ಸ್ನೇಹಿತನನ್ನು ಹತ್ಯೆ ಮಾಡಿದ್ದಾಗಿ ಹೇಳಿ ಅಮಾನುಲ್ಲಾ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
