ಮಂಗಳೂರು (ಏ. 02) ಅನ್ಯಕೋಮಿನ ಯುವಕ-ಯುವತಿ ಚಲಿಸುತ್ತಿದ್ದ ಬಸ್ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ ಪ್ರಕರಣ ವರದಿಯಾಗಿದೆ. ಮಂಗಳೂರಿನ ಪಂಪ್ ವೆಲ್ ಬಳಿ ಗುರುವಾರ ತಡರಾತ್ರಿ ಘಟನೆ ನಡೆದಿದೆ.

ಯುವಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಯುವತಿಯನ್ನು ಸಂಘಟನೆ ಯುವಕರು ಥಳಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ ಹೊರಟಿದ್ದ ಯುವಕ-ಯುವತಿ ಮೇಲೆ ದಾಳಿ ಮಾಡಲಾಗಿದೆ.

ಕೊರಗಜ್ಜನ ಪವಾಡ; ಕಾಂಡೋಮ್ ಹಾಕಿದ್ದವರ ಪರಿಸ್ಥಿತಿ ಏನಾಗಿದೆ? 

ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವಾರ ವಿದ್ಯದಾಯಿನಿ ಸರ್ಕಲ್ ಬಳಿ ಅನ್ಯಕೋಮಿನ ಜೋಡಿ ಮೇಲೆ ದಾಳಿ ಮಾಡಿದ್ದ ಪ್ರಕರಣವೂ ವರದಿಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಏಳೆಂಟು ಜನರನ್ನು ಬಂಧಿಸಲಾಗಿದೆ. ಬಜರಂಗದಳಕ್ಕೆ ಸೇರಿದ ನಾಲ್ವರ ಮೇಲೆ ಆರೋಪ ಕೇಳಿ ಬಂದಿದ್ದು ಅವರನ್ನು ಬಂಧಿಸಲಾಗುವುದು ಎಂದು ಮಂಗಳೂರು ಕಮಿಷನರ್ ಶಶಿ ಕುಮಾರ್ ತಿಳಿಸಿದ್ದಾರೆ.

ಬಸ್ಸಿಗೆ ಅಡ್ಡಬಂದ ನಾಲ್ವರು  ಯುವಕನನ್ನು ಕೆಳಕ್ಕೆ ಇಳಿಸಿ ಹಲ್ಲೆ ಮಾಡಿದ್ದಾರೆ, ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ.  ಯುವಕ ತನಗೆ ಪರಿಚಯವಿದೆ ಎಂಬುದನ್ನು ಯುವತಿ ಹೇಳಿದ್ದಾಳೆ.  ಯುವಕ ಮತ್ತು ಯುವತಿ  ಸಹಪಾಠಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಕೊಲೆಗೆ ಯತ್ನ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.