ಶಿವಮೊಗ್ಗ: ತುಳಸಿ ಪೂಜೆ ಮಾಡಿ, ಅರಿಸಿನ ಕುಂಕುಮ ಸ್ವೀಕರಿಸಿ ನವವಿವಾಹಿತೆ ಆತ್ಮಹತ್ಯೆ

ಶಿವಮೊಗ್ಗದ ಪ್ರತಿಷ್ಠಿತ ವೈದ್ಯಯ ಸೊಸೆ ಆತ್ಮಹತ್ಯೆಗೆ ಶರಣು, ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ನವ್ಯಶ್ರೀ. ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ 23 ವರ್ಷದ ನವವಿವಾಹಿತೆ.

23 Year Old Married Woman Committed Suicide in Shivamogga grg

ಶಿವಮೊಗ್ಗ(ನ.06):  ನವ ವಿವಾಹಿತ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಅಶ್ವತ್ ನಗರದಲ್ಲಿ ನಡೆದಿದೆ.  ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ.  ಆಕೆ ಹಾಗೂ ಆಕಾಶ್ ಎಂಬ ಯುವಕ 5 ತಿಂಗಳ ಹಿಂದೆ ವಿವಾಹವಾಗಿದ್ದು, ನಗರದ ಖ್ಯಾತ ವೈದ್ಯ ಡಾ. ಜಯಶ್ರೀ ಹೊಮ್ಮರಾಡಿ ಅವರ ಸೊಸೆ ಯಾಗಿದ್ದಾರೆ

 ನಿನ್ನೆ ರಾತ್ರಿ ನವ್ಯಶ್ರೀ ತುಳಸಿ ಪೂಜೆ ಮಾಡಿ ಅರಿಶಿನ ಕುಂಕುಮ ಪಡೆದರು.  ಬಳಿಕ ಕಾರ್ ಶೆಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಆಕೆಯ ಕುಟುಂಬಸ್ಥರು ಕೌಟುಂಬಿಕ ಸಮಸ್ಯೆಯಿಂದ ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಿದ್ದಾರೆ.

 ಆದರೆ, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.  ನವ್ಯಶ್ರೀ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಅವರ ಪತಿ ಕೂಡ ವೈದ್ಯರಾಗಿದ್ದು ಅವರು ಕೂಡ ಆತ್ಮಹತ್ಯೆಗೆ ಶರಣಾಗಿದ್ದರು ಇದು ವೈದ್ಯ ಕುಟುಂಬದಲ್ಲಿ ಎರಡನೆಯ ಆತ್ಮಹತ್ಯೆಯ ಪ್ರಕರಣವಾಗಿದೆ . ನಮ್ಮ ಶ್ರೀ ಅವರ ಸಹೋದರ ಹೃದಯ ಹೇಳುವ ಪ್ರಕಾರ ನಿನ್ನೆ ಸಂಜೆ 7.20ರ ಸುಮಾರಿಗೆ ತಾಯಿಯ ಜೊತೆಗೆ ನವಶ್ರೀ ದೂರವಾಣಿ ಕರೆ ಮಾಡಿ ಮಾತನಾಡಿದರು.

ನಂತರ ಆಕೆ ಟಿಕ್ ಟಾಕ್ ಮಾಡಿರುವ ಒಂದು ವಿಡಿಯೋ ಒಂದನ್ನು ಕಳುಹಿಸಿದಳು ಅದನ್ನು ನೋಡಿದ ಸಹೋದರ ಹೃದಯ ಆಕೆ ಸಣ್ಣದಾಗಿ ಇರುವುದನ್ನು ಕಂಡು ನಂತರ ಆಕೆಗೆ ಕರೆ ಮಾಡಬೇಕು ಎಂದುಕೊಂಡಿದ್ದರು. ಸುಮಾರು ಎಂಟು ಮೂವತ್ತರ ಸುಮಾರಿಗೆ ಕರೆ ಮಾಡಿದರು ಕೂಡ ಆಕೆ ಫೋನನ್ನು ಎತ್ತಿರಲಿಲ್ಲ ಕೊನೆಗೆ ನಮ್ಮ ಶ್ರೀ ಅತ್ತೆ ಡಾ. ಜಯಶ್ರೀ ಅವರನ್ನ ಸಂಪರ್ಕ ಮಾಡಿದಾಗ ಅವರು ಆಗಸ್ಟೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಆಕೆ ಫೋನನ್ನು ಮನೆಯಲ್ಲಿ ಬಿಟ್ಟು ತೆರಳಿದ್ದಾಳೆ ಎಂದು ತಿಳಿಸಿದ್ದಾರೆ. ನಂತರ ನವ್ಯಶ್ರೀ ಎಲ್ಲಿ ಹೋಗಿದ್ದಾರೆ ಎಂದು ಹುಡುಕಾಟ ಶುರುವಾಗಿದೆ ಈ ಸಂದರ್ಭದಲ್ಲಿ ನವ್ಯಶ್ರೀ ಪತಿ ಆಕಾಶ್ ಮದುವೆ ಮನೆ ಒಂದಕ್ಕೆ ತೆರಳಿದ್ದರು. ಅವರು ಕೂಡ ವಿಷ್ಯ ಗೊತ್ತಾಗಿ ವಾಪಸ್ ಮನೆಗೆ ಮರಳುವ ದಾರಿಯಲ್ಲಿದ್ದರೂ ಸಹೋದರ ಹೃದಯ ಮತ್ತು ಅವರ ತಂದೆ ತಾಯಿ ತಕ್ಷಣವೇ ಚಿಕ್ಕಮಗಳೂರಿನ ದೇವಿರಪುರದ ಮನೆಯಿಂದ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದ್ದಾರೆ.  ಶಿವಮೊಗ್ಗ ತಲುಪುವ ವೇಳೆಗಾಗಲೇ ರಾತ್ರಿ 11 ಆಗಿತ್ತು.
 

23 Year Old Married Woman Committed Suicide in Shivamogga grg

ಪತ್ನಿ ಸಾವು... ಐದು ವರ್ಷದ ಕಂದನನ್ನು ಕೊಂದು ನೇಣಿಗೆ ಶರಣಾದ ತಂದೆ

ಈ ವೇಳೆಗಾಗಲೇ ಕುಟುಂಬಸ್ಥರು ಎಲ್ಲರೂ ಹುಡುಕಿದರೂ ನವ್ಯಶ್ರೀ ಪತ್ತೆ ಆಗಿರಲಿಲ್ಲ. ಕೊನೆಗೆ ನವ್ಯಶ್ರೀ ಕುಟುಂಬಸ್ಥರು ಎಲ್ಲರೂ ಸೇರಿ ಹುಡುಕಾಟವನ್ನು ಮುಂದುವರಿಸಿದಾಗ ಮನೆಯ ಕಾರ್ ಶೆಡ್ ನ ದೀಪ ಬೆಳಗುವುದನ್ನು ಕಂಡಿದ್ದಾರೆ.  ಆ ಕೂಡಲೇ ಕಾರ್ ಶೆಡ್ಡಿನ ಬೀಗ ಹಾಕುವ ಜಾಗದಿಂದ ಇಣುಕಿ ನೋಡಿದಾಗ ನವ್ಯಶ್ರೀ ಆತ್ಮಹತ್ಯೆ ಶರಣಾಗಿರೋದು ಗೊತ್ತಾಗಿದೆ ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ ಎಲ್ಲಿಯೂ ಕೂಡ ಆಕೆ ಯಾವುದೇ ಡೆತ್ ನೋಟ್ (Death Note) ಬರೆದಿಟ್ಟು ಸಾವನ್ನಪ್ಪಿರುವುದು ಪತ್ತೆಯಾಗಿಲ್ಲ ಇದ್ದಕ್ಕಿದ್ದ ಹಾಗೆ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿಕೊಂಡು ತುಳಸಿ ಪೂಜೆಯನ್ನು ಆಚರಿಸಿ ಅರಿಶಿನ ಕುಂಕುಮ ಪಡೆದು ನಗುನಗುತ್ತಾ ಸಂತೋಷದಿಂದ ಇದ್ದ ನವ್ಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದು ದಿಗ್ರಾಂತಿಯನ್ನು ಉಂಟು ಮಾಡಿತ್ತು. ಇದೀಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಸಹಜ ಸಾವಿನ (UnNatural Death) ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ನವ್ಯಶ್ರೀ ಅವರ ಶವದ ಮರಣೋತ್ತರ ಪರೀಕ್ಷೆಯನ್ನು ಮುಗಿಸಿ ಶವವನ್ನು ಕೊಂಡೊಯ್ಯುಲಾಗಿದೆ.

ಈ ಮೊದಲು ವೈದ್ಯೆ ಜಯಶ್ರೀ ಅವರ ಪತಿ, ಇದೀಗ ಸೊಸೆ ಇಬ್ಬರು ಆತ್ಮಹತ್ಯೆಯ ಹಾದಿ ತುಳಿದಿರುವುದು ಇಡೀ ಕುಟುಂಬದಲ್ಲಿ ಬೇಸರ ಮೂಡಿಸಿದ್ದು ಹಣೆ ಬರಹವನ್ನು ಹಳಿಯುವಂತಾಗಿದೆ. 

Latest Videos
Follow Us:
Download App:
  • android
  • ios