ಬೆಂಗಳೂರು(ಅ.14): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾನೂನು ಬಾಹಿರವಾಗಿ ಸಾಗಾಣಿಕೆಯಾಗುತ್ತಿದ್ದ 23 ಲಕ್ಷ ಮೌಲ್ಯದ ವಿದೇಶಿ ಸಿಗರೆಟ್‌ ಅನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ. 

ಶಾರ್ಜಾದಿಂದ ಆಗಮಿಸಿದ ಎಕ್ಸ್‌ ರೇ ಯಂತ್ರಗಳಲ್ಲಿ ಅಡಗಿಸಿಟ್ಟು ಸಿಗರೆಟ್‌ ಸಾಗಾಟಕ್ಕೆ ಕೆಲವರು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಎಕ್ಸ್‌ ರೇ ಯಂತ್ರಗಳನ್ನು ಪರಿಶೀಲಿಸಿದಾಗ ಸಿಗರೆಟ್‌ ಪತ್ತೆಯಾಗಿದೆ. ಇವುಗಳು ಯಾರಿಗೆ ತಲುಪಬೇಕಿತ್ತು ಎಂಬುದು ಖಚಿತವಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆದಿದೆ ಎಂದು ಕಸ್ಟಮ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಯಾಣಿಕರ ಸೋಗಲ್ಲಿ ಕಳ್ಳತನ: 10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಡನ್‌ ಹಿಲ್‌ ಮತ್ತು ಬೆನ್ಸನ್‌ ಮತ್ತು ಹೆಡ್ಜಸ್‌ ಕಂಪನಿಯ ಸಿಗರೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಎಕ್ಸ್‌ ರೇ ಸ್ಕ್ಯಾನಿಂಗ್‌ನ ಯಂತ್ರಗಳೆಂದು ಹೇಳಿ ಎಂಟು ಪೆಟ್ಟಿಗೆಗಳಲ್ಲಿ ತುಂಬಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.