Asianet Suvarna News Asianet Suvarna News

Gang Rape: ಸ್ನೇಹಿತರಿಂದಲೇ ಗೆಳತಿ ಮೇಲೆ ಗ್ಯಾಂಗ್‌ ರೇಪ್...  ಇಂಥವರು ಇರ್ತಾರ?

* ಗೆಳೆಯರು ಎಂದು ಭಾವಿಸಿದವರು ಎಂಥ ಕೆಲಸ ಮಾಡಿದರು
* ಗೆಳತಿಯನ್ನು ಕರೆಸಿಕೊಂಡು ಆಕೆ ಮೇಲೆ ಎರಗಿದ ಕಾಮಾಂಧರು
*  ಮಹಾರಾಷ್ಟ್ರದಿಂದ ಘೋರ ಘಟನೆ ವರದಿ
*  ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರಿಗಳು

21-year-old girl gang-raped by three friends Maharashtra Crime News mah
Author
Bengaluru, First Published Jan 3, 2022, 6:29 PM IST

ಅಂಬರನಾಥ್(ಮಹಾರಾಷ್ಟ್ರ) (ಜ. 03)   ಇದೊಂದು ಘೋರ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ.  ಗೆಳೆಯರು ಎನಿಸಿಕೊಂಡವರೇ ಸ್ನೇಹಿತೆಯ ಮೇಲೆ ಎರಗಿದ್ದು (Gang Rape) ಪೊಲೀಸರು ಆರೋಪಿಗಳನ್ನು (Arrest) ಬಂಧಿಸಿದ್ದಾರೆ.  21 ವರ್ಷದ ಯುವತಿ (Woman) ಮೇಲೆ ಸಾಮೂಹಿಕ (Rape) ಅತ್ಯಾಚಾರವಾಗಿದೆ. ಶಿವಾಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಥಾಣೆ ಜಿಲ್ಲೆಯ ಅಂಬರನಾಥ್‌ನ ಜಿಐಪಿ ಅಣೆಕಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಕಲ್ಯಾಣ್ ನಿವಾಸಿಯಾಗಿದ್ದು, ಅಂಬರನಾಥದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದಗ್ದರು.

ಆಕೆಯ ಸ್ನೇಹಿತ ಹನುಮಾನ್ ಹಿಲಮ್ ತನ್ನ ಸ್ನೇಹಿತರಾದ ವಿಶ್ವಾಸ್ ಮಾಧವಿ ಮತ್ತು ಜಾವೇದ್ ಅನ್ಸಾರಿ ಅವರೊಂದಿಗೆ ಭಾನುವಾರ ಜಿಐಪಿ ಅಣೆಕಟ್ಟು ಪ್ರದೇಶದಲ್ಲಿ ಮದ್ಯ ಸೇವನೆ ಮಾಖಡಿದ್ದಾರೆ.  ಇದೇ ವೇಳೆ ಹನುಮಂತ ಜಿಐಪಿ ಅಣೆಕಟ್ಟೆ ಪ್ರದೇಶಕ್ಕೆ ಯುವತಿಯನ್ನು ಬರಹೇಳಿದ್ದಾರೆ.  ಯುವತಿ ಇವರ ಮಾತು ನಂಬಿ ಅಲ್ಲಿಗೆ ಹೋದಾಗ ಆಕೆ ಮೇಲೆ ಎರಗಿದ್ದಾರೆ. 

Sexual Harassment : ಶ್ವಾನಗಳಿಗೆ ಊಟ ಹಾಕಲು ಬಂದವಳಿಗೆ ಮರ್ಮಾಂಗ ತೋರಿಸಿದವ ಸಸ್ಪೆಂಡ್!

ಹನುಮಾನ್ ಮೊದಲು ಆಕೆ ಮೇಲೆ ಕ್ರೌರ್ಯ ಮೆರೆದಿದ್ದು  ನಂತರ  ಆರೋಪಿಯ ಸ್ನೇಹಿತರಾದ ವಿಶ್ವಾಸ್ ಮತ್ತು ಜಾವೇದ್‌ರಿಂದ ಅತ್ಯಾಚಾರವೆಸಗಿದ್ದಾರೆ. . ಘಟನೆಯ ನಂತರ ಯುವತಿ ಶಿವಾಜಿನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಆಕೆಯ ದೂರಿನ ಮೇರೆಗೆ ಪೊಲೀಸರು ಕೂಡಲೇ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಪತ್ತೆ ಹಚ್ಚಿ  ಬಂಧಿಸಿದ್ದಾರೆ. .

ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಶಿವಾಜಿನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಮಧುಕರ್ ಭೋಗೆ ತಿಳಿಸಿದ್ದಾರೆ.

ಗಂಡನ ಕ್ರೌರ್ಯಕ್ಕೆ ಹೆಂಡತಿಯ ಸಾಥ್:  ಗುಜರಾತ್‌ನ ತಾಪಿ ಜಿಲ್ಲೆಯ ಸೋಂಗಾಧ್ ತಾಲೂಕಿನ ಚರ್ಚ್‌ನ 39 ವರ್ಷದ ಪಾದ್ರಿ 16 ವರ್ಷದ ಬಾಲಕಿ  ಮೇಲೆ ಅತ್ಯಾಚಾರವೆಸಗಿರುವ (Rape) ಪ್ರಕರಣ ಬೆಳಕಿಗೆ ಬಂದಿತ್ತು   ಗಂಡ (Husband) ಮಾಡುತ್ತಿರುವ ಹೀನ ಕೆಲಸವನ್ನು ಪತ್ನಿಯೇ (wife)ವಿಡಿಯೋ ಶೂಟ್ ಮಾಡಿಕೊಂಡಿದ್ದು ಅನ್ನು ಇಟ್ಟುಕೊಂಡು ಅಪ್ರಾಪ್ತೆಯನ್ನು ಬ್ಲಾಕ್ ಮೇಲ್ (Blackmail) ಮಾಡಲಾಗುತ್ತಿತ್ತು.

ಈ ವರ್ಷದ ಮೇ ತಿಂಗಳಿನಲ್ಲಿಯೇ ಪ್ರಕರಣ ನಡೆದಿದೆ. ಆದರೆ ಅದರ ಬಗ್ಗೆ ಮಂಗಳವಾರ ಸೋಂಗಧ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ದೂರಿನ ಆಧಾರದಲ್ಲಿ  ಪಾದ್ರಿ ಬಲಿರಾಮ್ ಕೊಕ್ನಿ ಮತ್ತು ಅವರ ಪತ್ನಿ ಅನಿತಾ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

16 ವರ್ಷದ ಬಾಲಕಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದಳು.  ಚರ್ಚೆ ಗೆ ಪ್ರಾರ್ಥನೆಗೆ ಬರುತ್ತಿದ್ದ ಬಾಲಕಿಯನ್ನು ಪಾದ್ರಿ ನಂಬಿಸಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ನಂತರ ಒಬ್ಬನೇ ಈರುವಾಗ ಏಕಾಂತದಲ್ಲಿ ಬಂದು ಭೇಟಿ ಮಾಡುವಂತೆ ತಿಳಿಸಿದ್ದಾನೆ.

ಅವಕಾಶ ಬಳಸಿಕೊಂಡು ಬಾಲಕಿಯ ಮೇಲೆ ಎರಗಿದ್ದು ಪತ್ನಿ ಅನಿತಾ ಪೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದಾಳೆ.  ಇವರ ಮೇಲಿನ ಭಯದ ಕಾರಣಕ್ಕೆ ಅಪ್ರಾಪ್ತೆ ಪೊಲೀಸ್ ದೂರು ದಾಖಲಿಸಲು ಹೋಗಿಲ್ಲ.  ಆದರೆ ಈಗ  ಹಿಂಸೆ ತಾಳಲಾರದೆ ದೂರು ದಾಖಲಿಸಿದ್ದು ಆರೋಪಿಗಳನ್ನು ಬಂಧಿಸಲಾಗಿತ್ತು. 

ಉತ್ತರ ಪ್ರದೇಶದ ಪ್ರಕರಣ: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ 26 ವರ್ಷದ ಯುವಕ ಅತ್ಯಾಚಾರವೆಸಗಿದ್ದ ಪ್ರಕರಣ ಕೆಲವು ದಿನಗಳ ನಂತರ ಬೆಳಕಿಗೆ ಬಂದಿತ್ತು.  ಅಪ್ರಾಪ್ತ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆರೋಪಿ ಶಹಬಾಜ್ ಕೃತ್ಯ ಎಸಗಿದ್ದ.  ಆಕೆಯನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದು ದೂರು ದಾಖಲಾಗಿತ್ತು.

ಧಾರವಾಡದ ಘೋರ ಪ್ರಕರಣ:  ಧಾರವಾಡ ಅಪ್ರಾಪ್ತಯೋರ್ವಳನ್ನು(Minor Girl)  ಕರೆದೊಯ್ದು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಇಲ್ಲಿನ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತಳ ಮೇಲೆ ಅದೇ ಬಡಾವಣೆಯ ಐವರು ಯುವಕರು ಅತ್ಯಾಚಾರ ನಡೆಸಿದ್ದರು.

ಮಿಂಚಿನ ಕಾರ್ಯಾಚರಣೆ ನಡೆಸಿ ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರು.  17 ವರ್ಷದ ಬಾಲಕಿ ಮೇಲೆ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಐದಕ್ಕಿಂತ ಹೆಚ್ಚು ಬಾಲಕರು ಅತ್ಯಾಚಾರ ನಡೆಸಿರುವ ಬಗ್ಗೆ ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಪಾಲಕರು ನಗರದ ಶಹರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಬಾಸೆಲ್ ಮಿಶನ್ ಕಾಲೇಜಿನ ವಿದ್ಯಾರ್ಥಿನಿಯನ್ನು (Student) ನಗರದ ಹೊರವಲಯಕ್ಕೆ ಒತ್ತಾಯದಿಂದ ಕರೆದುಕೊಂಡು ಹೋದ ಅಪ್ರಾಪ್ತ ಯುವಕರು, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ವಿದ್ಯಾಕಾಶಿಯಲ್ಲಿ ನಡೆದಿರುವಂತಹ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿತ್ತು.

Follow Us:
Download App:
  • android
  • ios