* ಶ್ವಾನಗಳಿಗೆ ಊಟ ನೀಡಲು ಬಂದ ಮಹಿಳೆಗೆ ಮರ್ಮಾಂಗ ತೋರಿಸಿದವ ಸಸ್ಪೆಂಡ್* ಅಮೃತಹಳ್ಳಿ  ಪೊಲೀಸ್ ಠಾಣೆ ಸಿಬ್ಬಂದಿ ಚಂದ್ರಶೇಖರ್ ಮೇಲೆ ಎಫ್ಐಆರ್ ದಾಖಲಾಗಿತ್ತು*ತಡರಾತ್ರಿ ಯಲಹಂಕ ನ್ಯೂಟೌನ್ ನ ಹೌಸಿಂಗ್ ಬೋರ್ಡ್ ಬಳಿಯಲ್ಲಿ ಘಟನೆ ನಡೆದಿತ್ತು* ಪೊಲೀಸ್ ಸಿಬ್ಬಂದಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು

ಬೆಂಗಳೂರು(ಡಿ. 21) ಶ್ವಾನಗಳಿಗೆ ಊಟ ಹಾಕಲು ಬಂದ ಮಹಿಳೆಗೆ (Woman) ಮರ್ಮಾಂಗ (Private Part) ತೋರಿಸಿ ವಿಕೃತಿ (Sexual Harassment) ಮೆರೆದಿದ್ದ ಆರೋಪ ಹೊತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. 

ಅಮೃತಹಳ್ಳಿ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಅಮಾನತಾಗಿದ್ದಾರೆ.. ಸೋಮವಾರ ತಡರಾತ್ರಿ ಯಲಹಂಕ ನ್ಯೂಟೌನ್ ನ ಹೌಸಿಂಗ್ ಬೋರ್ಡ್ ಬಳಿಯಲ್ಲಿ ಘಟನೆ ನಡೆದಿತ್ತು. 

ಬರ್ತ್ ಡೇ ಪಾರ್ಟಿ ಮುಗಿಸಿ ಚಂದ್ರಶೇಖರ್ ಮೂತ್ರವಿಸರ್ಜನೆಗೆ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬೀದಿ ಬದಿಯ ನಾಯಿಗಳಿಗೆ ಊಟ ನೀಡಲು ಬಂದಿದ್ದರು. ಈ ಸಮಯಲ್ಲಿ ಚಂದ್ರಶೇಖರ್ ಮಹಿಳೆಗೆ ಮರ್ಮಾಂಗ ತೋರಿಸಿ ಅನುಚಿತವಾಗಿ ವರ್ತಿಸಿರುವ ಆರೋಪ ಬಂದಿದೆ. ಸದ್ಯ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ IPC ಸೆಕ್ಷನ್ 354(a) (ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ) ನಿಯಮದಡಿ ಪ್ರಕರಣ ದಾಖಲಾಗಿತ್ತು ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಹ ಹಂಚಿಕೊಳ್ಳಲಾಗಿತ್ತು. 

ಮಹಿಳೆ ಮುಂದೆ ಹಸ್ತ ಮೈಥುನ ಮಾಡಿಕೊಂಡ ಓಲಾ ಕ್ಯಾಬ್ ಚಾಲಕ

ನಾನು ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು ನಿಮ್ಮನ್ನು ಏನು ಬೇಕಾದರೂ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದು ದಾಖಲಾಗಿತ್ತು. ಈ ಎಲ್ಲ ಆಧಾರದದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಗೆಳೆಯನ ಅಂಗವನ್ನೇ ಕತ್ತರಿಸಿದ್ದಳು:  ಗೆಳೆಯಯ ಖಾಸಗಿ ಅಂಗವನ್ನೇ(Private Part) ಈಕೆ ಕತ್ತರಿಸಿ ಹಾಕಿದ್ದಾಳೆ. ಯೋಗ (Yoga Teacher) ಶಿಕ್ಷಕಿ ಇಂಥ ಕೆಲಸ ಮಾಡಿದ್ದಾಳೆ. ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಮರಳಿದ ಬಳಿಕ ಯುವಕ ಜೈಪುರದ ಭಂಕ್ರೋಟಾ ಠಾಣೆಗೆ ದೂರು ನೀಡಿದ್ದ.

ಯುವಕ ಮತ್ತು ಯುವತಿ ಇಬ್ಬರು ಯೋಗ ತರಬೇತುದಾರರಾಗಿದ್ದು ಬಿಕಾನೇರ್ ನಿವಾಸಿಗಳು. ಕಳೆದ ಎರು ವರ್ಷಗಳಿಂದ ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕನಿಗೆ ರೀಮಾ (Social Media) ಪರಿಚಯವಾಗಿದೆ. ಒಂದು ದಿನ ಮನೆಗೆ ಕರೆಸಿಕೊಂಡ ಯುವತಿ ಆತನಿಗೆ ಊಟ ನೀಡಿದ್ದಳು. ಊಟದಲ್ಲಿ ಅಮಲು ಪದಾರ್ಥ ಹಾಕಿ ನೀಡಿದ್ದು ಯುವಕ ಅಮಲಿಗೆ ಜಾರಿದ್ದಾನೆ. ಮಧ್ಯರಾತ್ರಿ ಎರಡು ಗಂಟೆ ನಂತರ ಎಚ್ಚರವಾಗಿ ನೋಡಿದಾಗ ಎಲ್ಲ ಕಡೆ ರಕ್ತ ಚೆಲ್ಲಿತ್ತು. ಯುವಕನ ಮರ್ಮಾಂಗ ಕತ್ತರಿಸಿ ಬಿದ್ದಿದೆ. ಯುವತಿ ಇನ್ನೊಂದು ಕಡೆ ಮುದುಡಿ ಕುಳಿತುಕೊಂಡಿದ್ದಳು. ಮರ್ಮಾಂಗ ಕತತ್ತರಿಸಿದ್ದ ಆಕೆಯೇ ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದಾಳೆ. ನನ್ನನ್ನು ಕ್ಷಮಿಸಿ ಎಂದು ಅಳುತ್ತಾ ಕುಳಿತುಕೊಂಡಿದ್ದಳು.

ಎಟಿಎಂನಲ್ಲಿ ದೌರ್ಜನ್ಯ:  ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ ಮಹಿಳೆಗೆ ತನ್ನ ಮರ್ಮಾಂಗ ತೋರಿಸಿದ್ದಾನೆ. ದಿಟ್ಟತನ ಮೆರೆದಿರುವ ಮಹಿಳೆ ಆತನ ಕೃತ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಹಾಕಿದ್ದರು.

ಮುಂಬೈ ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಭಾನುವಾರ ಬೆಳಗಿನ ಜಾವ 3 ಕೃತ್ಯ ನಡೆದಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ಥಾಣೆಯ ಕೊಪಾರಿ ಪ್ರದೇಶದಲ್ಲಿ 23 ವರ್ಷದ ಮಹಿಳೆ ಭಾನುವಾರ ಎಟಿಎಂಗೆ ಹಣ ತೆಗೆಯಲು ಹೋಗಿದ್ದಾಳೆ. ಮಹಿಳೆ ಹಿಂಬಾಲಿಸಿ ಬಂದವ ಅಶ್ಲೀಲವಾಗಿ ವರ್ತಿಸತೊಡಗಿದ್ದಾನೆ. ಆದರೆ ದಿಟ್ಟ ಮಹಿಳೆ ಆತನ ವಿಡಿಯೋ ಮಾಡಿದ್ದಾಳೆ. ತಕ್ಷಣ ಕ್ರಮ ತೆಗೆದುಕೊಂಡ ಪೊಲೀಸರು ಆರೋಪಿ ಸಂದೀಪ್ ಕುಂಭಕರ್ಣ(38)ನನ್ನು ಬಂಧಿಸಿದ್ದರು.

ಮಂಡ್ಯದ ಪ್ರಕರಣ: ಕಳೆದ ವರ್ಷ ಪ್ರೇಮಿಗಳ ದಿನದಂದೇ ಅಪ್ರಾಪ್ತ ಯುವಕನ ಮರ್ಮಾಂಗ ಕತ್ತರಿಸಿರುವ ಪೈಶಾಚಿವ ಘಟನೆ ಮಂಡ್ಯದಲ್ಲಿ ನಡೆದಿತ್ತು. . ಕಿಡ್ನಾಪ್‌ ಮಾಡಿ ಅಪ್ರಾಪ್ತ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿದೆ. ಪ್ರೇಮಿಗಳ ದಿನದಂದೇ ಕಿಡಿಗೇಡಿಗಳಿಂದ ಪೈಶಾಚಿಕ ಕೃತ್ಯ ನಡೆದಿದ್ದು, ಕಿಡ್ನಾಪ್‌ ಮಾಡಿ ಅಪ್ರಾಪ್ತ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿತ್ತು.