Asianet Suvarna News Asianet Suvarna News

2012 ಅತ್ಯಾಚಾರ, ಕೊಲೆ ಕೇಸ್‌: ಮೂವರ ಗಲ್ಲುಶಿಕ್ಷೆ ಖುಲಾಸೆಗೊಳಿಸಿದ Supreme Court

2012 ರಲ್ಲಿ 19 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಂದ ಮೂವರು ವ್ಯಕ್ತಿಗಳನ್ನು ಫೆಬ್ರವರಿ 2014 ರಲ್ಲಿ ದೋಷಿ ಎಂದು ದೆಹಲಿ ನ್ಯಾಯಾಲಯ ಘೋಷಿಸಿತು ಮತ್ತು ಅವರಿಗೆ ಮರಣದಂಡನೆ ವಿಧಿಸಿತು. ಆಗಸ್ಟ್ 26, 2014 ರಂದು ದೆಹಲಿ ಹೈಕೋರ್ಟ್ ಸಹ ಮರಣದಂಡನೆಯನ್ನು ದೃಢಪಡಿಸಿತ್ತು.

supreme court acquits 3 men on death row for teens rape murder in 2012 ash
Author
First Published Nov 7, 2022, 2:12 PM IST

2012ರಲ್ಲಿ ದೆಹಲಿಯ (Delhi) ಛಾವಾಲಾ ಪ್ರದೇಶದಲ್ಲಿ 19 ವರ್ಷದ ಯುವತಿಯೊಬ್ಬಳ (Teenage Girl) ಮೇಲೆ ಅತ್ಯಾಚಾರ (Rape) ಎಸಗಿ ಕೊಂದ (Murder) ಪ್ರಕರಣದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ ದೆಹಲಿ ನ್ಯಾಯಾಲಯವು (Delhi Court) ಮರಣದಂಡನೆ ವಿಧಿಸಿದ್ದ ಮೂವರು ಅಪರಾಧಿಗಳನ್ನು ಸುಪ್ರೀಂಕೋರ್ಟ್ (Supreme Court) ಇಂದು ಖುಲಾಸೆಗೊಳಿಸಿದೆ (Acquits). 2012ರಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದ ಮೇಲೆ ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು. ಸಂತ್ರಸ್ಥೆಯ ವಿರೂಪಗೊಂಡ ದೇಹವು ಗದ್ದೆಯಲ್ಲಿ ಪತ್ತೆಯಾಗಿದ್ದು, ಕಾರಿನ ಉಪಕರಣಗಳಿಂದ ಹಿಡಿದು ಮಣ್ಣಿನ ಮಡಿಕೆವರೆಗಿನ ವಸ್ತುಗಳಿಂದ ಆಕೆಯ ಮೇಲೆ ದಾಳಿ ಮಾಡಿದ ಗಾಯದ ಗುರುತುಗಳು ಪತ್ತೆಯಾಗಿದ್ದ ಬಗ್ಗೆ ವರದಿಯಾಗಿತ್ತು.

ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು 2012 ರಲ್ಲಿ 19 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಂದ ಮೂವರು ವ್ಯಕ್ತಿಗಳನ್ನು ಫೆಬ್ರವರಿ 2014 ರಲ್ಲಿ ದೋಷಿ ಎಂದು ಘೋಷಿಸಿತು ಮತ್ತು ಅವರಿಗೆ ಮರಣದಂಡನೆ ವಿಧಿಸಿತು. ಆಗಸ್ಟ್ 26, 2014 ರಂದು ದೆಹಲಿ ಹೈಕೋರ್ಟ್ ಸಹ ಮರಣದಂಡನೆಯನ್ನು ದೃಢಪಡಿಸಿತ್ತು. ಈ ತೀರ್ಪು ನೀಡುವ ವೇಳೆ ಅವರು ಬೀದಿಗಳಲ್ಲಿ ಚಲಿಸುವ "ಪರಭಕ್ಷಕರು" ಮತ್ತು "ಬೇಟೆಯನ್ನು ಹುಡುಕುತ್ತಿದ್ದಾರೆ" ಎಂದೂ ಹೈಕೋರ್ಟ್‌ ತೀರ್ಪು ನೀಡುವ ವೇಳೆ ಅಭಿಪ್ರಾಯಪಟ್ಟಿತ್ತು.

ಇದನ್ನು ಓದಿ: Umesh Reddy: ವಿಕೃತ ಕಾಮಿ ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ರವಿಕುಮಾರ್, ರಾಹುಲ್ ಮತ್ತು ವಿನೋದ್ ಎಂಬ ಮೂವರು ವ್ಯಕ್ತಿಗಳನ್ನು ಅಪಹರಣ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ವಿವಿಧ ಆರೋಪಗಳ ಅಡಿಯಲ್ಲಿ ದೋಷಿಗಳೆಂದು ಘೋಷಿಸಲಾಗಿತ್ತು. ಈ ಪ್ರಕರಣವು ಫೆಬ್ರವರಿ 2012 ರಷ್ಟು ಹಿಂದಿನದಾಗಿದ್ದು, ಹರ್ಯಾಣದಲ್ಲಿ 19 ವರ್ಷದ ಹುಡುಗಿಯ ಶವ ಪತ್ತೆಯಾಗಿತ್ತು. ಹಾಗೂ, ಅತ್ಯಾಚಾರಕ್ಕೆ ಒಳಗಾದ ನಂತರ ಬಾಲಕಿಯನ್ನು ಬರ್ಬರವಾಗಿ ಕೊಲ್ಲಲಾಗಿತ್ತು ಎಂದು ತಿಳಿದುಬಂದಿತ್ತು. ಈ ಕುರಿತು ದೆಹಲಿಯ ಛವಾಲಾ (ನಜಾಫ್‌ಗಢ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅತ್ಯಾಚಾರಿಗಳು ಮೊದಲು ಮಹಿಳೆಯನ್ನು ಅಪಹರಿಸಿ, ಅತ್ಯಾಚಾರ ಮಾಡಿ, ನಂತರ ಕೊಂದು ಶವವನ್ನು ಹರ್ಯಾಣದ ರೇವಾರಿ ಜಿಲ್ಲೆಯ ರೋಧೈ ಗ್ರಾಮದ ಹೊಲದಲ್ಲಿ ಎಸೆದ ಕಾರಣ ಅಪರಾಧವು ಕ್ರೂರ ಸ್ವರೂಪದಲ್ಲಿದೆ ಎಂದು ಪ್ರಾಸಿಕ್ಯೂಷನ್‌ ವಾದ ಮಾಡಿತ್ತು. 

ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆ ರದ್ದುಪಡಿಸಿದ್ದ ಸುಪ್ರೀಂಕೋರ್ಟ್‌
ಇತ್ತೀಚೆಗಷ್ಟೇ, ವಿಕೃತ ಕಾಮಿ ಉಮೇಶ್‌ ರೆಡ್ಡಿ ಮರಣ ದಂಡನೆ‌ ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಉಮೇಶ್ ರೆಡ್ಡಿಗೆ  ಮರಣದಂಡನೆ ಖಾಯಂಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಉಮೇಶ್ ರೆಡ್ಡಿಗೆ ದೊಡ್ಡ ರಿಲೀಫ್‌ ಸಿಕ್ಕಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿತ್ತು.

ಇದನ್ನೂ ಓದಿ: Crime News: ಸಂಬಂಧಿ ಮೇಲೆ ನಿರಂತರ ಅತ್ಯಾಚಾರ ಮಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ಅಮಾನತು

1998 ರಲ್ಲಿ ವಿಧವೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಲ್ಲುಶಿಕ್ಷೆ ಘೋಷಿಸಲಾಗಿತ್ತು. ಆದರೆ, ಇದನ್ನು ಖುಲಾಸೆಗೊಳಿಸಿದ ಸುಪ್ರೀಂಕೋರ್ಟ್‌, ಅಪರಾಧಿ ಈಗಾಗಲೇ ಏಕಾಂಗಿಯಾಗಿ 10 ವರ್ಷಗಳ ಜೈಲಿನಲ್ಲಿ ಕಾಲ ಕಳೆದ ಕಾರಣ ನೀಡಿತ್ತು. ಈ ರೀತಿ ಏಕಾಂಗಿಯಾಗಿ ಜೈಲು ವಾಸ ಮಾಡಿರುವುದು ಅಪರಾಧಿಯ ಆರೋಗ್ಯ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ ಎಂದೂ ದೇಶದ ಉನ್ನತ ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.

Follow Us:
Download App:
  • android
  • ios