* ಸಾಂಬಾರ್ ಗೆ ಬಿದ್ದು ಬಾಲಕಿ ದುರ್ಮರಣ* ವಿಜಯವಾಡದಲ್ಲಿ ದಾರುಣ ಘಟನೆ* ಹುಟ್ಟುಹಬ್ಬ ಆಚರಣೆಗೆ  ಊರಿಗೆ ತೆರಳಿದ್ದರು* ಆಸ್ಪತ್ರೆಗೆ ಸೇರಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ

ವಿಜಯವಾಡ (ಫೆ. 15) ಇದೊಂದು ದಾರುಣ ಘಟನೆ. ಕೃಷ್ಣಾ (Vijayawada) ಜಿಲ್ಲೆಯ ವಿಜನ್ನಪೇಟ ವಲಯದಲ್ಲಿ ದುರಂತ (Tragedy)ಸಂಭವಿಸಿದೆ. ಸಾಂಬಾರ್ ಪಾತ್ರೆಗೆ ಬಿದ್ದು ಎರಡು ವರ್ಷದ ತೇಜಸ್ವಿನಿ (Death) ಸಾವನ್ನಪ್ಪಿದ್ದಾಳೆ. ಕರುಮಂಚಿ ಶಿವ, ಬನ್ನು ದಂಪತಿಯ ಪುತ್ರಿ ತೇಜಸ್ವಿನಿ ದಾರುಣ ಸಾವಿಗೀಡಾಗಿದ್ದಾಳೆ.

ತಂದೆ ತಾಯಿ ಮಗಳನ್ನು ಕರೆದುಕೊಂಡು ಹುಟ್ಟುಹಬ್ಬದ (Birth Day) ಆಚರಣೆಗಾಗಿ ತಮ್ಮ ಊರಿಗೆ ತೆರಳಿದ್ದರು. ಅಲ್ಲಿ ಹುಟ್ಟುಹಬ್ಬ ಆಚರಿಸಲು ಊಟದ ವ್ಯವಸ್ಥೆ ಮಾಡಲಾಗಿತ್ತು. 

ಅದೇ ವೇಳೆ ಡೈನಿಂಗ್ ಏರಿಯಾದಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ತೇಜಸ್ವಿನಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸಾಂಬಾರ್ ಬೌಲ್ ಗೆ ಬಿದ್ದಿದ್ದಾರೆ. ಕುಟುಂಬಸ್ಥರು ತೇಜಸ್ವಿನಿ ಅವರನ್ನು ತಿರುವೂರಿನ ಖಾಸಗಿ ಆಸ್ಪತ್ರೆಗೆ (Hospital)ಕರೆದೊಯ್ದರು. ಪ್ರಥಮ ಚಿಕಿತ್ಸೆಯ ಬಳಿಕ ವಿಜಯವಾಡಕ್ಕೆ ಸ್ಥಳಾಂತರಿಸಲಾಯಿತು. ತೇಜಸ್ವಿನಿ ವಿಜಯವಾಡ ಆಸ್ಪತ್ರೆಯಲ್ಲಿ ಸೋಮವಾರ ನಿಧನವಾಗಿದ್ದಾಳೆ.

ಇಂಥದ್ದೇ ಘಟನೆ: ಜನವರಿ 31, 2020 ರಂದು ಸಂಭವಿಸಿದ ಇದೇ ರೀತಿಯ ಘಟನೆಯಲ್ಲಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದ.ಸಂಬಂಧಿಕರ ಮನೆಗೆ ತೆರಳಿದ್ದ ಬಾಲಕ ಸಾಂಬಾರ್ ಪಾತ್ರಯಲ್ಲಿ ಬಿದ್ದಿದ್ದ. ಗಾಯಗೊಂಡಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

Bengaluru: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

ದುಪ್ಪಟ್ಟಾ ಕೊರಳಿಗೆ ಸುತ್ತಿ ಸಾವು: ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕೊರಳಿಗೆ ದುಪ್ಪಟ್ಟ ಸುತ್ತಿಕೊಂಡು 11 ವರ್ಷದ ಬಾಲಕಿ ಮೃತಪಟ್ಟಿದ್ದಳು. ಗುಜರಾತ್‌ನ ಸೂರತ್‌ ನಿಂದ ಪ್ರಕರಣ ವರದಿಯಾಗಿತ್ತು.

ಮಹಿದಾಪುರದ ಜದಖಡಿಯಲ್ಲಿ ಈ ಸಾವು ಸಂಭವಿಸಿದೆ. ಬಾಲಕಿ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಮಧ್ಯಾಹ್ನ ಕೆಲಸಕ್ಕೆಂದು ತೆರಳಿದ್ದಾರೆ. 11 ವರ್ಷದ ಬಾಲಕಿ ಹಾಗೂ ಪುಟ್ಟ ಸಹೋದರ ಮಾತ್ರ ಮನೆಯಲ್ಲಿದ್ದರು. ಮನೆಬಿಟ್ಟು ಎಲ್ಲೂ ಹೋಗದಂತೆ ಹಾಗೂ ಪುಟ್ಟ ಸಹೋದರರನ್ನು ನೋಡಿಕೊಳ್ಳುವಂತೆ ಹೇಳಿ ತಾಯಿ ಕೆಲಸಕ್ಕೆ ತೆರಳಿದ್ದರು.

ಬಾಲಕಿಗೆ ಡ್ಯಾನ್ಸ್ ಮೇಲೆ ತುಸು ಹೆಚ್ಚೇ ಪ್ರೀತಿ ಇತ್ತು. ವಾರಕ್ಕೆ ಹಲವು ಬಾರಿ ಡ್ಯಾನ್ಸ್ ವಿಡಿಯೋ ರೆಕಾರ್ಡ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಳು. ತನ್ನ ದೈನಂದಿನ ಚಟುವಟಿಕೆಯಿಂದ ಚೂಡಿದಾರ, ದುಪ್ಪಟ್ಟ ಹಾಕಿ ಡ್ಯಾನ್ಸ್ ಮಾಡಿದ್ದಾಳೆ. ಆದರೆ ಮನೆಯ ಕಿಟಕಿಯ ಗ್ರಿಲ್‌ ಹಾಗೂ ಕೊರಳಿಗೆ ವಿಡಿಯೋ ಸುತ್ತಿಕೊಂಡು ಬಾಲಕಿ ದಾರುಣ ಅಂತ್ಯ ಕಂಡಿದ್ದಳು. 

ಜೀವ ತೆಗೆದ ಬಿಸಿಯೂಟ: ಶಾಲೆಯ ಬಿಸಿಯೂಟ ತಯಾರಿಸುವ ಕಡಾಯಿಯಲ್ಲಿ ಮೂರು ವರ್ಷದ ಮಗುವೊಂದು ಬಿದ್ದು ಅಸುನೀಗಿರುವ ದಾರುಣ ಘಟನೆ ಉತ್ತರಪ್ರದೇಶದ ಮಿರ್ಜಾಪುರ್ ನಿಂದ ವರದಿಯಾಗಿತ್ತು.

ಲಾಲ್’ಗಂಜ್ ಬಳಿಯಿರುವ ರಾಂಪುರ್ ಅಟ್ಟಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ವೇಳೆ, ಆಟ ಆಡುತ್ತಿದ್ದ ಮೂರು ವರ್ಷದ ಪುಟ್ಟ ಕಂದ ಅಂಚಲ್ ಬಿಸಿ ಕಡಾಯಿಯಲ್ಲಿ ಬಿದ್ದು ಅಸುನೀಗಿದ್ದಳು