* ಬೋರ್​ವೆಲ್​ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಸಾವು* ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಘಟನೆ* ಮಗುವನ್ನು ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿ 

ಬೆಳಗಾವಿ, (ಸೆ.18): ರಾಜ್ಯದಲ್ಲಿ ಮತ್ತೆ ಬೋರ್​ವೆಲ್​ ದುರಂತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಬೋರ್​ವೆಲ್​ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ.

ಅಗ್ನಿಶಾಮಕ ಸಿಬ್ಬಂದಿ ಮಗುವಿನ ಮೃತದೇಹವನ್ನು ಹೊರ ತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಶರತ್ ಹಸಿರೆ ಎಂಬ ಎರಡೂವರೆ ವರ್ಷದ ಮಗುವೇ ಬೋರ್ವೆಲ್‌ಗೆ ಬಿದ್ದಿದ್ದ ಮಗು.

ಉಯಿಲಮುಡಿ ಕಡಲ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಯ ಮೃತದೇಹ ಪತ್ತೆ

ಎರಡು ದಿನಗಳಿಂದ ಮಗು ನಾಪತ್ತೆಯಾಗಿತ್ತು. ಈ ಬಗ್ಗೆ ಮಗುವಿನ ತಂದೆ ಪೊಲಿಸ್ ಠಾಣೆಗೆ ಹೋಗಿ ಕಿಡ್ನಾಪ್ ದೂರು ನೀಡಿದ್ದರು. ಆದ್ರೆ, ಮಗು ಬೋರ್‌ವೆಲ್‌ಗೆ ಬಿದ್ದಿರುವುದು ಇಂದು (ಸೆ.18) ಗೊತ್ತಾಗಿದೆ.

ವಿಷಯ ತಿಳಿದು ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಮಗು ರಕ್ಷಣೆಗೆ ಕಾರ್ಯಚರಣೆಗಿಳಿದೆ. ಆದ್ರೆ, ದುರದೃಷ್ಟವಶಾತ್ ಮಗು ಬದುಕಿ ಬರಲಿಲ್ಲ. ಸದ್ಯ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.