Asianet Suvarna News Asianet Suvarna News

10 ರು. ರಿಚಾರ್ಜ್‌ ನೆಪದಲ್ಲಿ 2.98 ಲಕ್ಷ ವಂಚನೆ: ದುಡ್ಡು ಕಳಕೊಂಡು ಕಂಗಾಲಾದ ವೃದ್ಧ

* ನಿವೃತ್ತ ಸರ್ಕಾರಿ ನೌಕರ ಅಮಿತ್‌ ಬಾಧೂರಿ ವಂಚನೆಗೆ ಒಳಗಾದ ವ್ಯಕ್ತಿ
* ಯುಪಿಐ ಪಿನ್‌ ಪಡೆದು ಆನ್‌ಲೈನ್‌ನಲ್ಲಿ 2.98 ಲಕ್ಷ ರು. ವರ್ಗಾವಣೆ 
* ಈ ಸಂಬಂಧ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲು
 

2.98 Lakh Fraud in The Name of 10 Rs Mobile Recharge in Dharwad grg
Author
Bengaluru, First Published Jul 21, 2021, 8:16 AM IST

ಹುಬ್ಬಳ್ಳಿ(ಜು.21): ಧಾರವಾಡದ 80 ವರ್ಷದ ವೃದ್ಧರೊಬ್ಬರಿಗೆ 24 ಗಂಟೆಯೊಳಗೆ 10 ರು. ರಿಚಾರ್ಜ್‌ ಮಾಡದಿದ್ದರೆ ಸಿಮ್‌ ಬ್ಲಾಕ್‌ ಆಗುತ್ತದೆ ಎಂದು ಸಂದೇಶ ಕಳಿಸಿದ ವಂಚಕರು ಬಳಿಕ ಟ್ರಿಮ್‌ ವೀವರ್‌ ಕ್ವಿಕ್‌ ಸಪೋರ್ಟ್‌ ಆ್ಯಪ್‌ ಡೌನ್ಲೋಡ್‌ ಮಾಡಿಸಿ ಅವರ ಯುಪಿಐ ಪಿನ್‌ ಪಡೆದು ಆನ್‌ಲೈನ್‌ನಲ್ಲಿ 2.98 ಲಕ್ಷ ರು. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.

ಧಾರವಾಡದ ಸರಸ್ವತಪುತ ರೆಡ್ಡಿ ಕಾಲನಿ ನಿವಾಸಿ ನಿವೃತ್ತ ಸರ್ಕಾರಿ ನೌಕರ ಅಮಿತ್‌ ಬಾಧೂರಿ ವಂಚನೆಗೆ ಒಳಗಾದವರು. 

ಯುವಕರೇ ಹುಷಾರ್‌: ಯುವತಿಯರ ಬಣ್ಣದ ಮಾತಿಗೆ ಮರುಳಾದ್ರೆ ಪಂಗನಾಮ ಗ್ಯಾರಂಟಿ..!

10 ರು. ರಿಚಾರ್ಜ್‌ ಮಾಡಲು ಸಹಾಯಕ್ಕಾಗಿ ಸಂಪರ್ಕಿಸಲು ವಂಚಕರು ಮೊಬೈಲ್‌ ನಂಬರ್‌ ಕಳಿಸಿದ್ದಾರೆ. ಇದನ್ನು ನಂಬಿ ಕರೆ ಮಾಡಿದಾಗ ಟ್ರಿಮ್‌ ವೀವರ್‌ ಕ್ವಿಕ್‌ ಸಪೋರ್ಟ್‌ ಆ್ಯಪ್‌ ಇನ್ಸ್ಟಾಲ್‌ ಮಾಡಿಸಿದ್ದಾರೆ. ಬಳಿಕ ಏರ್ಟೆಲ್‌ ಥ್ಯಾಂಕ್ಸ್‌ ಆ್ಯಪ್ಲಿ ರಿಚಾರ್ಜ್‌ ಮಾಡಲು ತಿಳಿಸಿದ್ದಾರೆ. ಅದಾದ ನಂತರ ಯುಪಿಐ ಪಿನ್‌ ಪಡೆದು ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios