ಬೆಂಗಳೂರು: ಮೇಲೆ 500, ಒಳಗೆ ಬಿಳಿಹಾಳೆ ಬಿಟ್ಟು 20 ಲಕ್ಷ ವಂಚನೆ..!
ಆದಿತ್ಯ ಮತ್ತು ಅವರ ದೊಡ್ಡಪ್ಪ ಹಣದ ಪೊಟ್ಟಣಗಳನ್ನು ಬಿಚ್ಚಿ ನೋಡಿದಾಗ 500 ಮುಖಬೆಲೆಯ ನೋಟಿನ 10 ಕಟ್ಟುಗಳು ಕಂಡು ಬಂದಿವೆ. ಈ ಪೈಕಿ ಒಂದು ಕಟ್ಟನ್ನು ಬಿಚ್ಚಿನೋಡಿದಾಗ ಕಟ್ಟಿನ ಮೇಲೆ ₹500 ಮುಖಬೆಲೆಯ ಅಸಲಿ ನೋಟು ಇರಿಸಿ, ಒಳಗೆ ಬಳ ಹಾಳೆ ಇರುವುದು ಕಂಡು ಬಂದಿದೆ.
ಬೆಂಗಳೂರು(ಜು.30): ತರಕಾರಿ ವ್ಯಾಪಾರಿಯೊಬ್ಬರಿಂದ ₹20 ಲಕ್ಷ ಮೌಲ್ಯದ 3 ಲೋಡ್ ಟೊಮೆಟೋ ಪಡೆದು ಕೊಂಡು ಬಳಿಕ ಹಣವೆಂದು ಬಿಳಿ ಹಾಳೆಗಳ ಕಟ್ಟುಗಳನ್ನು ನೀಡಿ ವಂಚಿಸಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ವೈಟ್ ಫೀಲ್ಡ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಲಾರದ ತರಕಾರಿ ವ್ಯಾಪಾರಿ ಅದಿತ್ಯ ಷಾ ನೀಡಿದ ದೂರಿನ ಮೇರೆಗೆ ಜಿ.ಸಂಜಯ್ ಮತ್ತು ಜಿ.ಮುಖೇಶ್ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆ ಹಗರಣ, ಐಡಿಬಿಐ ಬ್ಯಾಂಕ್ ಉದ್ಯೋಗಿ ಅರೆಸ್ಟ್
ಏನಿದು ಪ್ರಕರಣ?:
ದೂರುದಾರ ಆದಿತ್ಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ದೊಡ್ಡಪ್ಪನ ಹೆಸರಿನಲ್ಲಿ ಟ್ರೇಡಿಂಗ್ ಲೈಸೆನ್ಸ್ ಪಡೆದು ತರಕಾರಿ ವ್ಯವಹಾರ ಮಾಡುತ್ತಿದ್ದಾರೆ. ಅಲ್ಲಿನ ಟ್ರೇಡರ್‌ಗಳು ತರಕಾರಿ ಸ್ವೀಕರಿಸಿ ಬಳಿಕ ಬ್ಯಾಂಕ್ ಅಥವಾ ಬೆಂಗಳೂರಿನಲ್ಲಿ ಅವರ ಪರಿ ಚಿತ ವ್ಯಾಪಾರಿಗಳ ಮುಖಾಂತರ ನಗದು ರೂಪದಲ್ಲಿ ಹಣ ಕೊಡುತ್ತಾರೆ.
ಸಿಲಿಗುರಿಗೆ 3 ಲೋಡ್ ಟೊಮೆಟೋ:
ಅದರಂತೆ ಜು.10ರಂದು ಮುಖೇಶ್ ಎಂಬಾತ ಪಶ್ಚಿಮ ಬಂಗಾಳದ ಸಿಲಿಗಿರಿಗೆ ೨ ಲೋಡ್ ಟೊಮೆಟೋ ಕಳುಹಿಸುವಂತೆ ಆದಿತ್ಯಗೆ ಕರೆ ಮಾಡಿ ಕೇಳಿದ್ದಾನೆ. ಅದರಂತೆ ಅದಿತ್ಯ ಕೋಲಾ ರದಿಂದ ಟೊಮೆಟೋ ಕಳುಹಿಸಿದ್ದಾರೆ. ಟೊಮೆಟೋ ಸ್ವೀಕರಿಸಿದ ಬಳಿಕ ಮುಖೇಶ್, ಆದಿತ್ಯನ ದೊಡ್ಡಪ್ಪಗೆ ಕರೆ ಮಾಡಿ ಬೆಂಗಳೂರಿನ ಹಣ ಕಳುಹಿಸಿದ್ದೇನೆ. ಅವರು ವೈಟ್‌ಫೀಲ್ಡ್‌ನ ಹಗದೂರಿನ ಬೇಕರಿ ಬಳಿ ಹಣ ನೀಡುತ್ತಾರೆ ಎಂದು ತಿಳಿಸಿದ್ದಾನೆ. ಆದಿತ್ಯ ಜು.15ರಂದು ಮಧ್ಯಾಹ್ನ ಹಗದೂರಿನ ಬೇಕರಿ ಬಳಿ ಸಂಜಯ್ ನನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಂಜಯ್ 20 ಲಕ್ಷ ಇದೆ ಎಂದು 500 ಮುಖಬೆಲೆಯ ಆಕ್ಸಿಸ್ ಬ್ಯಾಂಕ್‌ನ ಚೀಟಿಯಿದ್ದ ಹಣದ ನಾಲ್ಕು ಪೊಟ್ಟಣಗಳನ್ನು ಆದಿತ್ಯಗೆ ನೀಡಿ ದ್ದಾನೆ. ಬೇಕರಿ ಬಳಿ ಸಾಕಷ್ಟು ಜನರು ಇದ್ದ ಹಿನ್ನೆಲೆಯಲ್ಲಿ ಹಣದ ಪೊಟ್ಟಗಳನ್ನು ಬಿಚ್ಚಿ ಪರಿಶೀಲಿಸದೆ ಆ ಹಣದೊಂದಿಗೆ ಆದಿತ್ಯ ಕೋಲಾರಕ್ಕೆ ತೆರಳಿದ್ದಾರೆ.
ಹುಬ್ಬಳ್ಳಿ ಧಾರವಾಡ ನಗರದಲ್ಲಿ ಹೆಚ್ಚಾದ ಸೈಬರ್ ಅಪರಾಧ: ದಿನಕ್ಕೊಂದು ವರಸೆ, ಮೋಸ..ಕ್ರಿಮಿನಲ್‌ಗಳ ನಾನಾ ವೇಷ!
ಒಂದು ಕಟ್ಟಿನಲ್ಲಿ ಒಂದೇ ಅಸಲಿ!
ಆದಿತ್ಯ ಮತ್ತು ಅವರ ದೊಡ್ಡಪ್ಪ ಹಣದ ಪೊಟ್ಟಣಗಳನ್ನು ಬಿಚ್ಚಿ ನೋಡಿದಾಗ 500 ಮುಖಬೆಲೆಯ ನೋಟಿನ 10 ಕಟ್ಟುಗಳು ಕಂಡು ಬಂದಿವೆ. ಈ ಪೈಕಿ ಒಂದು ಕಟ್ಟನ್ನು ಬಿಚ್ಚಿನೋಡಿದಾಗ ಕಟ್ಟಿನ ಮೇಲೆ ₹500 ಮುಖಬೆಲೆಯ ಅಸಲಿ ನೋಟು ಇರಿಸಿ, ಒಳಗೆ ಬಳ ಹಾಳೆ ಇರುವುದು ಕಂಡು ಬಂದಿದೆ. ತಕ್ಷಣ ಮುಖೇಶ್ ಮತ್ತು ಸಂಜಯ್ ಕರೆ ಮಾಡಿದಾಗ ಇಬ್ಬರ ಮೊಬೈಲ್‌ಗಳು ಸ್ವಿಟ್ಸ್ ಆಫ್ ಬಂದಿದೆ.
ಒಟ್ಟು ₹32 ಲಕ್ಷ ವಂಚನೆ ಆರೋಪ
ಆದಿತ್ಯ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮುಖೇಶ್ ಮತ್ತು ಸಂಜಯ್ 3 ಲೋಡ್ ಟೊಮೆಟೋ ಪಡೆದು ಬಿಳಿ ಪೇಪರ್ ಕಟ್ಟುಗಳನ್ನೇ ಹಣವೆಂದು ನಂಬಿಸಿ ವಂಚನೆ ಮಾಡಿ ದ್ದಾರೆ. ಮೂರು ಲೋಡ್ ಟೊಮೆ 220 0 212 ಲಕ್ಷ ಸೇರಿ ಒಟ್ಟು 5 32 ಲಕ್ಷ ವಂಚಿಸಿ ರುವ ಈ ಆರೋಪಿ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.