* ಇನ್ಸ್ಟಾಗ್ರಾಮ್ ನಲ್ಲಿ " Sorry" ಎಂದು ಬರೆದು ಯುವಕ ಆತ್ಮಹತ್ಯೆ* 19 ವರ್ಷದ ಮನೋಜ್ ಸಾವಿಗೆ ಶರಣಾದ ಯುವಕ* ಅಮ್ಮ-ಅಪ್ಪನನ್ನು ನೋಡಿಕೊಳ್ಳಬೇಕಾದ ಮಗ ಇಲ್ಲದೆ ಕುಟುಂಬ ಅನಾಥ
ಬೆಂಗಳೂರು, (ಜೂನ್.02) : ಇನ್ಸ್ಟಾಗ್ರಾಮ್‌ನಲ್ಲಿ SORRY ಅಂತಾ ಸ್ಟೋರಿ ಹಾಕಿ 19 ವರ್ಷದ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ನಗರದ ಜ್ಞಾನಭಾರತಿಯಲ್ಲಿ ನಡೆದಿದೆ.. 19 ವರ್ಷದ ಮನೋಜ್ ಸಾವಿಗೆ ಶರಣಾದ ಯುವಕ.
ಮಂಡ್ಯ ಮೂಲದ ರಮೇಶ್ ಗೌಡ ಮತ್ತು ಲತಾ ದಂಪತಿಯ ಪುತ್ರನಾದ ಮನೋಜ್ ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ವಾಸವಾಗಿದ್ದ.. ನಾಗರಬಾವಿ ಬಳಿಯ ಕೆಎಲ್ಇ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ. ಎಲ್ಲರ ಜೊತೆಗೆ ಖುಷಿ ಖುಷಿಯಾಗೇ ಇದ್ದ.ಆದ್ರೆ ಅದೇನಾಯ್ತೋ ಏನೋ ಒಂದು ತಿಂಗಳಿಂದ ಕಾಲೇಜಿಗೂ ಹೋಗ್ತಿರ್ಲಿಲ್ವಂತೆ. ಅಷ್ಟೇ ಅಲ್ಲ ಒಂದು ವಾರದಿಂದ ವಾಟ್ಸ್ ಆ್ಯಪ್ ಸ್ಟೇಟಸ್, ಇನ್ಸ್ಟಾಗ್ರಾಮ್ ನಲ್ಲಿ ಸ್ಯಾಡ್ ಸ್ಟೋರಿಸ್ ಹಾಕ್ತಿದ್ನಂತೆ.
ಕಂದಮ್ಮನ ಕಣ್ಣೇದುರೇ ನೇಣಿಗೆ ಶರಣಾದ ತಾಯಿ, ಶವದ ಮುಂದೆ ಎರಡೂವರೆ ಗಂಟೆ ರೋಧಿಸಿದ ಮಗು
ಇವತ್ತು(ಗುರುವಾರ) ಬೆಳಗ್ಗೆ ಎಷ್ಟು ಬಾರಿ ಕರೆ ಮಾಡಿದ್ರು ಉತ್ತರಿಸದಿದ್ದಾಗ ಮನೋಜ್ ತಂದೆಗೆ ಸ್ನೇಹಿತರು ಕರೆ ಮಾಡಿದ್ದಾರೆ.ಆಗ ವಿಚಾರ ಗೊತ್ತಾಗಿದೆ. ಮನೋಜ್ ಹಾಗು ಅಜ್ಜಿ ಮನೆ ಅಕ್ಕಪಕ್ಕದಲ್ಲೇ ಇದೆ. ಹಾಗಾಗಿ ಪ್ರತಿ ದಿನ ಮನೆಯಲ್ಲಿ ಊಟ ಮಾಡಿ ಅಜ್ಜಿ ಮನೆಗೆ ಹೋಗಿ ಮಲಗ್ತಿದ್ದ.ಅದರಂತೆ ನಿನ್ನೆ(ಬುಧವಾರ) ರಾತ್ರಿ ಕೂಡ ಊಟ ಮಾಡಿ ಚಿಕ್ಕಮಗಳೂರು ಟ್ರಿಪ್ ಹೋಗೋ ಬಗ್ಗೆಯೂ ಕುಟುಂಬಸ್ಥರು ಮಾತುಕತೆ ನಡೆಸಿ ಅಜ್ಜಿ ಮನೆಗೆ ಹೋಗಿದ್ದ.
ಆದ್ರೆ ರಾತ್ರಿ ಹೊತ್ತು ಮನೋಜ್ ಗೆ ಅದ್ಯಾವ ನೋವು ಅತಿಯಾಗಿ ಕಾಡಿತ್ತೋ ಏನೋ ಇನ್ಸ್ಟಾಗ್ರಾಮ್ ನಲ್ಲಿ SORRY ಅಂತಾ ಸ್ಟೋರಿ ಹಾಕಿ ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ 7.30 ಆದರೂ ತಾಯಿಯನ್ನ ಆಫೀಸಿಗೆ ಡ್ರಾಪ್ ಮಾಡಲು ಎದ್ದು ಬಾರದೇ ಇದ್ದಾಗ ರೂಮ್ ಬಾಗಿಲು ಒಡೆದು ಒಳಗೆ ಹೋದಾಗ ಫ್ಯಾನಿನಲ್ಲಿ ನೇತಾಡ್ತಿದ್ದ ದೃಶ್ಯ ಕಂಡಿದೆ. ಚಿಕ್ಕ ವಯಸ್ಸಿನ ಹುಡುಗನ ಸಾವು ಕಂಡು ಕುಟುಂಬಕ್ಕೆ ದಿಕ್ಕೇ ದೋಚದಂತಾಗಿದೆ.
ಸದ್ಯ ಕುಟುಂಬಸ್ಥರು ಮತ್ತು ಸ್ನೇಹಿತರು ಪ್ರೀತಿ ಪ್ರೇಮ ಏನು ಇಲ್ಲ ಅಂತಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಆತನ ಸ್ಟೇಟಸ್ ನೋಡ್ತಿದ್ರೆ ಲವ್ ಫೇಲ್ಯೂರ್ ನಿಂದಲೇ ಸಾವನ್ನಪ್ಪಿದ್ದಾನೆ ಅನ್ನೋ ಅನುಮಾನ ಸಹಜವಾಗೇ ಮೂಡತ್ತೆ. ಘಟನೆ ಸಂಬಂಧ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೊಬೈಲ್ ಪರಿಶೀಲನೆ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ. ಅದೇನೆ ಇರಲಿ ಬದುಕಿನ ಮುಸ್ಸಂಜೆಯಲ್ಲಿ ಅಮ್ಮ-ಅಪ್ಪನನ್ನು ನೋಡಿಕೊಳ್ಳಬೇಕಾದ ಮಗ ಇಲ್ಲದೆ ಕುಟುಂಬ ಅನಾಥವಾಗಿದೆ..
ಕಂದಮ್ಮನ ಕಣ್ಣೇದುರೇ ನೇಣಿಗೆ ಶರಣಾದ ತಾಯಿ,
ಮಂಡ್ಯ, (ಜೂನ್.02): ತನ್ನ ಪುಟ್ಟ ಮಗುವಿನ ಎದರೇ ತಾಯಿ ನೇಣಿಗೆ ಶರಣಾದ ಮನಕಲಕುವ ಘಟನೆ ಮಂಡ್ಯದ ಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ. 36 ವರ್ಷದ ಕವಿತಾ ಮಗುವಿನ ಜೋಕಾಲಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದು ವರ್ಷ ಹೆಣ್ಣು ಮಗು ಎದುರೇ ಕವಿತಾ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ತಾಯಿಯ ಎದುರು ಕುಳಿತಿದ್ದ ಪುಟ್ಟ ಮಗು ಎರಡೂವರೆ ಗಂಟೆಗೂ ಹೆಚ್ಚು ಕಾಲ ರೋಧಿಸಿದೆ.
ಮೂಲತಃ ಕನಕಪುರದವರಾದ ಕವಿತಾ ಕಳೆದ 9 ವರ್ಷಗಳ ಹಿಂದೆ ರವಿಕುಮಾರ್ ಎಂಬುವರನ್ನ ವಿವಾಹವಾಗಿದ್ರು. ದಂಪತಿಗಳಿಗೆ 7 ವರ್ಷದ ಗಂಡು ಮತ್ತು 1 ವರ್ಷದ ಹೆಣ್ಣು ಮಗುವಿದೆ. ಮೂಲತಃ ಮಂಡ್ಯದವರಾದ ರವಿಕುಮಾರ್ ದೈಹಿಕ ಶಿಕ್ಷಕರಾಗಿ ಕೆಲಸ ಮಾಡ್ತಿದ್ದಾರೆ. ಆರಂಭದಲ್ಲಿ ಬೆಂಗಳೂರು ನಗರದಲ್ಲಿ ವಾಸವಾಗಿದ್ದ ಜೋಡಿ. ರವಿಕುಮಾರ್ ಮೈಸೂರಿಗೆ ವರ್ಗಾವಣೆಗೊಂಡ ನಂತರ ಕಳೆದ 3 ತಿಂಗಳ ಹಿಂದೆ ಮಂಡ್ಯದಲ್ಲಿ ನೆಲೆಸಿದ್ರು.
