ವಿಜಯಪುರ(ನ.28): ಮಠದ ಆವರಣದಲ್ಲೇ ಬೆಳೆದಿದ್ದ 13 ಗಾಂಜಾ ಗಿಡಗಳನ್ನ ಪೊಲೀಸರು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. ದಾಳಿ ವೇಳೆ 19 ಕೆ.ಜಿಯಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ. 

ಬಸವನ ಬಾಗೇವಾಡಿನ ಪಟ್ಟಣದಲ್ಲಿರುವ ಯಲ್ಲಾಲಿಂಗ ಮಠದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನ ಬೆಳೆಯಲಾಗಿದೆ ಎಂದು ದೂರುಗಳು ಬಂದಿದ್ದವು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ತಡರಾತ್ರಿ ವಿಜಯಪುರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದರು. 

ಹೊಸಪೇಟೆ: ದೀಪಾವಳಿ ಹಬ್ಬದಂದೇ ಭರ್ಜರಿ ಕಾರ್ಯಾಚರಣೆ, 7 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ದಾಳಿ ವೇಳೆ ಅಕ್ರಮವಾಗಿ ಬೆಳದಿದ್ದ ಗಾಂಜಾ ಗಿಡಗಳನ್ನ ಕಿತ್ತು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಠಕ್ಕೆ ಬರುವ ಸಾಧು-ಬೈರಾಗಿಗಳು ಧ್ಯಾನ ಏಕಾಗ್ರತೆಗೆಂದು ಗಾಂಜಾ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.