Asianet Suvarna News Asianet Suvarna News

ರಾತ್ರೋರಾತ್ರಿ ಮನೆಯಿಂದ ಹೊರಗೆ ಬರಲು ಹೇಳಿ 17 ವರ್ಷದ ಯುವತಿಯ ಕತ್ತು ಸೀಳಿ ಕೊಂದ ಬಾಯ್‌ಫ್ರೆಂಡ್‌..!

ಸಂತ್ರಸ್ತೆಯನ್ನು ನಸುಕಿನ ಜಾವ 1:30 ರ ಸುಮಾರಿಗೆ ತನ್ನ ಮನೆಯಿಂದ ಹೊರಗೆ ಬರುವಂತೆ ಯುವತಿಗೆ ಹೇಳಿದ ಬಾಯ್‌ಫ್ರೆಂಡ್‌, ನಮತರ ಆಕೆಯನ್ನು  ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಗಳು ತಿಳಿಸಿವೆ.

17 year old girl asked to come out at night throat slit by friend in keralas varkala ash
Author
First Published Dec 28, 2022, 11:50 AM IST

ಕೇರಳದ (Kerala) ರಾಜಧಾನಿ ತಿರುವನಂತಪುರಂ (Thiruvananthapuram) ಬಳಿಯ ವರ್ಕಲಾದಲ್ಲಿ (Varkala) ಭೀಕರ ಕೊಲೆ ಪ್ರಕರಣ (Murder Case) ವರದಿಯಾಗಿದೆ. 17 ವರ್ಷದ ಯುವತಿಯನ್ನು (Girl) ಆಕೆಯ ಬಾಯ್‌ಫ್ರೆಂಡ್‌ (Boy Friend) ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆಯನ್ನು ನಸುಕಿನ ಜಾವ 1:30 ರ ಸುಮಾರಿಗೆ ತನ್ನ ಮನೆಯಿಂದ ಹೊರಗೆ ಬರುವಂತೆ ಯುವತಿಗೆ ಹೇಳಿದ ಬಾಯ್‌ಫ್ರೆಂಡ್‌, ನಂತರ ಆಕೆಯನ್ನು  ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಗಳು ತಿಳಿಸಿವೆ. ಭೀಕರ ಹತ್ಯೆ ನಡೆದ ಕೆಲವೇ ಗಂಟೆಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದೂ ತಿಳಿದುಬಂದಿದೆ.

ವರ್ಕಳದ ವಡಸ್ಸೆರಿಕೋಣಂ ಮೂಲದ ಸಂಗೀತಾ ಅವರನ್ನು ತಿರುವನಂತಪುರಂ ಜಿಲ್ಲೆಯ ಪಳ್ಳಿಕಲ್ ಪ್ರದೇಶದ ಗೋಪು ಎಂದು ಗುರುತಿಸಲಾದ ಆರೋಪಿ ತನ್ನ ಮನೆಯಿಂದ ಹೊರಗೆ ಬರುವಂತೆ ಹೇಳಿದ್ದಾನೆ. ನಿನ್ನ ಜತೆ ವಿಷಯವೊಂದರ ಬಗ್ಗೆ ಮಾತನಾಡಬೇಕೆಂದು ಹೇಳಿ ಸಂಗಿತಾಳನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಮದುವೆಗೆ ನಿರಾಕರಿಸಿದ ಯುವತಿ: ಅಮಾನುಷವಾಗಿ ಹಲ್ಲೆ ಮಾಡಿದ ಬಾಯ್‌ಫ್ರೆಂಡ್‌; ಕ್ಯಾಮೆರಾದಲ್ಲಿ ಸೆರೆ

ಇಬ್ಬರೂ ಪ್ರೇಮಿಗಳಾಗಿದ್ದರು. ಆದರೂ, ಸಂಗೀತಾಳ ನಿಷ್ಠೆಯ ಮೇಲೆ ಆರೋಪಿ ಗೋಪಿಗೆ ಅನುಮಾನ ಇತ್ತು ಎಂದು ಸುದ್ದಿ ವರದಿಗಳು ತಿಳಿಸಿವೆ. ಅವಳು ಇನ್ನೊಬ್ಬ ಯುವಕನೊಂದಿಗೆ ಹತ್ತಿರವಾಗುತ್ತಿದ್ದಾಳೆಂದು ನಂಬಿದ್ದ ಆರೋಪಿ, ಬುಧವಾರ ನಸುಕಿನ ಜಾವ ಈ ವಿಷಯವನ್ನು ಚರ್ಚಿಸಲು ಅವಳ ಮನೆಗೆ ಭೇಟಿ ನೀಡಿದ್ದನು ಎಂದು ತಿಳಿದುಬಂದಿದೆ.

ಬಳಿಕ, ಬಾಲಕಿ ಮನೆಯಿಂದ ಹೊರಗೆ ಬಂದಾಗ ಅವರ ನಡುವೆ ಮಾರಾಮಾರಿ ನಡೆದಿದ್ದು, ಗೋಪು ತನ್ನ ಬಳಿಯಿದ್ದ ಆಯುಧದಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಕೇರಳದ ಮಾದ್ಯಮವೊಂದು ವರದಿ ಮಾಡಿದೆ. ಇನ್ನು, ಆಕೆಯ ಕಿರುಚಾಟದಿಂದ ಸಂಗೀತಾ ಅವರ ಕುಟುಂಬ ಮತ್ತು ನೆರೆಹೊರೆಯವರು ಎಚ್ಚರಗೊಳ್ಳುವ ಹೊತ್ತಿಗೆ, ಗೋಪು ಆಕೆಯ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದ ಎಂದೂ ವರದಿಯಾಗಿದೆ.

ಇದನ್ನೂ ಓದಿ: ಮಗಳ ಅಶ್ಲೀಲ ವಿಡಿಯೋ ವೈರಲ್: ಕೇಳಲು ಹೋದ ಅಪ್ಪನ ಕೊಲೆ

ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಸ್ಥಳೀಯರು ಕಂಡು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೂ ಸಂಗೀತಾಳ ಪ್ರಾಣ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಆರೋಪಿ ಕೊಲೆ ಮಾಡಿದ ಆಯುಧ ಮತ್ತು ಮೊಬೈಲ್ ಫೋನ್ ಅನ್ನು ಗೋಪು ಅಪರಾಧ ಸ್ಥಳದಲ್ಲಿ ಬಿಟ್ಟುಹೋಗಿದ್ದ ಎಂದು ತಿಳಿದುಬಂದಿದ್ದು, ನಂತರ ಪೊಲೀಸರು ದಾಳಿಕೋರನನ್ನು ಗುರುತಿಸಿ ಬಂಧಿಸಿದ್ದಾರೆ. ಹಾಗೂ ಸಂಗೀತಾ ಅವರ ನೆರೆಹೊರೆಯವರು ಸ್ಥಳಕ್ಕೆ ಬಂದಾಗ ಯುವಕ ಓಡಿಹೋಗುತ್ತಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದೂ ವರದಿಯಾಗಿದೆ.

ಸದ್ಯ, ಆರೋಪಿ ಪೊಲೀಸ್ ವಶದಲ್ಲಿ ಉಳಿದಿದ್ದು, ಈ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. 

ಇದನ್ನೂ ಓದಿ: Hassan: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಕತ್ತು ಸೀಳಿದ ದುಷ್ಕರ್ಮಿಗಳು

ಮಧ್ಯ ಪ್ರದೇಶದಲ್ಲಿ ಯುವತಿ ಮೇಲೆ ಅಮಾನುಷ ಹಲ್ಲೆ..!
ಇನ್ನೊಂದೆಡೆ, ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, 24 ವರ್ಷದ ಯುವಕನೊಬ್ಬ ತನ್ನನ್ನು ಮದುವೆಯಾಗಲು  ನಿರಾಕರಿಸಿದ ಆರೋಪದ ಮೇಲೆ 19 ವರ್ಷದ ಯುವತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಯುವಕನ ಗೆಳೆಯ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ಇದು ವೈರಲ್‌ ಆಗಿದೆ. ಈ ವೈರಲ್‌ ವಿಡಿಯೋದಲ್ಲಿ ಯುವಕ ಹಾಗೂ ಯುವತಿ ಇಬ್ಬರೂ ಕೈ ಹಿಡಿದುಕೊಂಡು ನಡೆದಾಡುತ್ತಿರುವುದನ್ನು ತೋರಿಸಿದೆ. ಆಗ ಇದ್ದಕ್ಕಿದ್ದಂತೆ ಯುವಕ ತನ್ನ ಗರ್ಲ್‌ಫ್ರೆಂಡ್‌ ಅನ್ನು ಕಪಾಳಮೋಕ್ಷ ಮಾಡಿ, ಆಕೆಯ ಕೂದಲನ್ನು ಹಿಡಿದು, ನೆಲಕ್ಕೆ ಬಲವಾಗಿ ಹೊಡೆದಿದ್ದಾನೆ.

ನಂತರ ಅವನು ನಿರ್ದಯವಾಗಿ ಯುವತಿಯ ಮುಖದ ಮೇಲೆ ಮತ್ತು ಅವಳ ದೇಹದ ಹಲವೆಡೆ ಪೂರ್ಣ ಬಲದಿಂದ ಹೊಡೆದಿದ್ದಾನೆ. ಯುವಕನ ಈ ದಾಳಿಯಿಂದ ಯುವತಿಯು ಪ್ರಜ್ಞಾಹೀನಳಾಗಿದ್ದಾಳೆ ಎಂದು ಕಂಡುಬಂದಿದೆ. ಈ ಹಿನ್ನೆಲೆ ಆಕೆಯನ್ನು ಸ್ಥಿರವಾ ಗಿಹಿಡಿಯಲು ಯುವಕ ಪ್ರಯತ್ನಿಸಿದ್ದಾನೆ. ಇನ್ನು, ಈ ವಿಡಿಯೋವನ್ನು ಯುವಕನ ಗೆಳೆಯ ರೆಕಾರ್ಡ್‌ ಮಾಡುತ್ತಿದ್ದ ಎನ್ನಲಾಗಿದ್ದು, ಈ ಫೂಟೇಜ್‌ ಡಿಲೀಟ್‌ ಮಾಡುವಂತೆಯೂ ಹೇಳಿದ್ದಾನೆ. ನಂತರ, ಯುವತಿ ರಸ್ತೆ ಬದಿಯಲ್ಲಿ ಗಂಟೆಗಟ್ಟಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Davanagere crime: ಪ್ರೀತಿ ನಿರಾಕರಿಸಿದ ಯವತಿಯನ್ನು ನಡುರಸ್ತೆಯಲ್ಲೇ ಕತ್ತು ಸೀಳಿ ಕೊಂದು, ವಿಷ ಸೇವಿಸಿದ ಪಾಗಲ್ ಪ್ರೇಮಿ

Follow Us:
Download App:
  • android
  • ios