ಹಾವೇರಿ: ಡೆತ್ ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ, ಓದಿನಲ್ಲಿ ಮುಂದೆ ಇದ್ದಿದ್ದೇ ಕಂಟಕವಾಯ್ತಾ?

ಮೊರಾರ್ಜಿ ವಸತಿ ಶಾಲಾ ಶಿಕ್ಷಕನೊರ್ವನ ಕುಟುಂಬದಿಂದ ಅರ್ಚನಾಗೆ ಕಿರುಕುಳ ಆರೋಪ ಕೇಳಿ ಬಂದಿದೆ. ಮೊರಾರ್ಜಿ ಶಾಲೆಯ ಹಿಂದಿ ಶಿಕ್ಷಕನಾಗಿದ್ದ ಆರಿತವುಲ್ಲಾ ಮಗಳು ಝೋಯಾ ಹಾಗೂ‌ ಮೃತ ಅರ್ಚನಾ ಇಬ್ಬರೂ ಒಂದೇ ಕ್ಲಾಸಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅರ್ಚನಾ ಓದಿನಲ್ಲಿ ಝೋಯಾಗಿಂತ ಮುಂದಿದ್ದಳಂತೆ. ಇದೆ ಕಾರಣದಿಂದ ಝೋಯಾ ತಾಯಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 

16 years old student committed self death at hirekerur in haveri grg

ಹಾವೇರಿ(ಜು.12):  ಡೆತ್ ನೋಟ್‌ ಬರೆದಿಟ್ಟು ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಅರ್ಚನಾ ಗೌಡಣ್ಣನವರ (16)ಆತ್ಮಹತ್ಯೆ ಮಾಡಿಕೊಂಡಿ ವಿದ್ಯಾರ್ಥಿನಿಯಾಗಿದ್ದಾಳೆ.  ಮೃತ ಅರ್ಚನಾ ಗೌಡಣ್ಣನವರ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಒಂದು ವಾರದ ಹಿಂದೆ ಅರ್ಚನಾ ಮನೆಯಲ್ಲಿ ಸಾವನ್ನಪ್ಪಿದ್ದಳು. ಮೃತ ಬಾಲಕಿ ಡೆತ್ ನೋಟ್‌ನಲ್ಲಿ ಸಾವಿಗೆ ಕಾರಣ ಉಲ್ಲೇಖಿಸಿದ್ದಾಳೆ. 

ಮೃತ ಅರ್ಚನಾ ಹಿರೇಕೆರೂರು ತಾಲೂಕಿನ ದೂದಿಹಳ್ಲಿಯ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಓದಿನಲ್ಲಿ ಮುಂದೆ ಇದ್ದಿದ್ದೆ ಈ ವಿದ್ಯಾರ್ಥಿನಿಗೆ ಕಂಟಕವಾಯಿತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.  ಮೊರಾರ್ಜಿ ವಸತಿ ಶಾಲಾ ಶಿಕ್ಷಕನೊರ್ವನ ಕುಟುಂಬದಿಂದ ಅರ್ಚನಾಗೆ ಕಿರುಕುಳ ಆರೋಪ ಕೇಳಿ ಬಂದಿದೆ. ಮೊರಾರ್ಜಿ ಶಾಲೆಯ ಹಿಂದಿ ಶಿಕ್ಷಕನಾಗಿದ್ದ ಆರಿತವುಲ್ಲಾ ಮಗಳು ಝೋಯಾ ಹಾಗೂ‌ ಮೃತ ಅರ್ಚನಾ ಇಬ್ಬರೂ ಒಂದೇ ಕ್ಲಾಸಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅರ್ಚನಾ ಓದಿನಲ್ಲಿ ಝೋಯಾಗಿಂತ ಮುಂದಿದ್ದಳಂತೆ. ಇದೆ ಕಾರಣದಿಂದ ಝೋಯಾ ತಾಯಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 

ಸಾಲಬಾಧೆ ತಾಳದೇ ಬೆಳಗಾವಿಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ!

ನನ್ನ ಮಗಳಿಗಿಂತ ನೀನೇಕೆ ಓದಿನಲ್ಲಿ ಮುಂದೆ ಇದ್ದಿಯಾ ಎಂದು ಅರ್ಚನಾಗೆ ಝೋಯಾ ತಾಯಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದ ಅರ್ಚನಾ ಕಳೆದ 2/7/24 ರ ಮಂಗಳವಾರದ ದಿನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಇದರ ಜೊತೆಗೆ ವೈಯಕ್ತಿಕ ಕಾರಣಗಳನ್ನು ಡೆತ್ ನೋಟ್ ನಲ್ಲಿ ಅರ್ಚನಾ ಉಲ್ಲೇಖಿಸಿದ್ದಾಳೆ. ಈ ಕುರಿತು ವಿದ್ಯಾರ್ಥಿನಿ ಸಾವಿನಲ್ಲಿ ಸಂಶಯ ಇದೆ ಎಂದು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

Latest Videos
Follow Us:
Download App:
  • android
  • ios