ಸಾಲಭಾದೆ ತಾಳಲಾರದೇ ವಿಷ ಸೇವಿಸಿ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ. ಈರಯ್ಯ ಅಪ್ಪಯ್ಯ ಹಿರೇಮಠ(30) ಮೃತ ದುರ್ದೈವಿ

ಚಿಕ್ಕೋಡಿ (ಜು.9): ಸಾಲಭಾದೆ ತಾಳಲಾರದೇ ವಿಷ ಸೇವಿಸಿ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈರಯ್ಯ ಅಪ್ಪಯ್ಯ ಹಿರೇಮಠ(30) ಮೃತ ದುರ್ದೈವಿ. ಸೋಮವಾರ ವಿಷ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ಈರಯ್ಯ. ಕೂಡಲೇ ಕುಟುಂಬದವರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತರಾಗಿದ್ದಾರೆ.

ಧಾರವಾಡ: ಎರಡೇ ವರ್ಷದಲ್ಲಿ 101 ಅನ್ನದಾತರು ಆತ್ಮಹತ್ಯೆ! 

ಮೃತ ಈರಯ್ಯ ಅವರ ತಂದೆ ಅಪ್ಪಯ್ಯ ಹೆಸರಿನಲ್ಲಿ ಒಂದೂವರೆ ಎಕರೆ ಜಮೀನು ಇದೆ. ಆದರೆ ಕಳೆದ ವರ್ಷ ತೀವ್ರ ಬರಗಾಲ, ಮಳೆ ಇಲ್ಲದೆ ಬೆಳೆ ಕೈಕೊಟ್ಟಿದ್ದು ತೀವ್ರ ಸಂಕಷ್ಟಕ್ಕೀಡಾಗಿದ್ದ ರೈತ ಈರಯ್ಯನ ಕುಟುಂಬ. ಕುಟುಂಬ ನಿರ್ವಹಣೆ, ಬೆಳೆಗೆ ಸ್ಥಳೀಯ ಪಿಕೆಪಿಎಸ್, ಖಾಸಗಿ ಬ್ಯಾಂಕ್ ಹಾಗೂ ಕೈಗಡ ಸಾಲ ಮಾಡಿಕೊಂಡಿದ್ದ ರೈತ. ಸುಮಾರು 4 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಸಾಲ ಮರುಪಾವತಿ ಮಾಡಲಾಗದೆ ಆತ್ಮಹತ್ಯೆಗೆ ಶರಣಾಗಿರುವ ರೈತ. ಆತ್ಮಹತ್ಯೆ ಘಟನೆ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.